Get Updates
Get notified of breaking news, exclusive insights, and must-see stories!

Priyanka Gandhi: ಚುನಾವಣೆಯಲ್ಲಿ ಸದ್ದು ಮಾಡುತ್ತಿದೆ ಮಂಗಳಸೂತ್ರ: ಮೋದಿಗೆ ಪ್ರಿಯಾಂಕಾ ತಿರುಗೇಟು

ಬೆಂಗಳೂರು, ಏಪ್ರಿಲ್. 24: ಲೋಕಸಭಾ ಚುನಾವಣೆಯಲ್ಲಿ ಎರಡು ದಿನಗಳಿಂದ ಮಂಗಳಸೂತ್ರ ಸಕತ್ ಸದ್ದು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಅವರು ಜನರ ಮಾಂಗಲ್ಯ ಕಸಿಯುತ್ತಾರೆ ಎಂದು ಆರೋಪಿಸಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ.

ಸಕತ್ ಕುತೂಹಲಕ್ಕೆ ಕಾರಣವಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರವಾಗಿ ಮತ ಯಾಚನೆ ಮಾಡಿದ್ದು, ಈ ವೇಳೆ ಪ್ರಧಾನಿ ಮೋದಿ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ.

My Mother Sonia Gandhi Sacrificed her Mangalsutra for country Priyanka Gandhi

ನನ್ನ ತಾಯಿ, ಅಜ್ಜಿ ದೇಶಕ್ಕಾಗಿ ಮಾಂಗಲ್ಯ ತ್ಯಾಗ ಮಾಡಿದ್ದಾರೆ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರ 'ಚಿನ್ನ ಮತ್ತು ಮಂಗಳಸೂತ್ರ' ಹೇಳಿಕೆಯ ಬಗ್ಗೆ ವಾಗ್ದಾಳಿ ನಡೆಸಿದ್ದು, ಅವರ ತಾಯಿ ಸೋನಿಯಾ ಗಾಂಧಿ ಅವರು ದೇಶಕ್ಕಾಗಿ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದಾರೆ.

"ಈ ದೇಶದಲ್ಲಿ ಏನು ಮಾತುಕತೆ ನಡೆಯುತ್ತಿದೆ? ಎರಡು ದಿನಗಳ ಹಿಂದೆ ಕಾಂಗ್ರೆಸ್ ನಿಮ್ಮ ಮಂಗಳಸೂತ್ರವನ್ನು ಕಿತ್ತುಕೊಳ್ಳಲು ಬಯಸುತ್ತಿದೆ ಎಂದು ಭಾಷಣ ಮಾಡಲಾಗಿತ್ತು. ಕಳೆದ 75 ವರ್ಷಗಳಿಂದ ಈ ದೇಶ ಸ್ವತಂತ್ರವಾಗಿದ್ದು, 55 ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದೆ. ಕಾಂಗ್ರೆಸ್ ಎಂದಾದರೂ ನಿಮ್ಮ ಚಿನ್ನ ಅಥವಾ ಮಂಗಳಸೂತ್ರವನ್ನು ಕಸಿದುಕೊಂಡಿದೆಯೇ?'' ಎಂದು ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಆಸ್ತಿಯನ್ನು ಮರುಹಂಚಿಕೆ ಮಾಡುತ್ತದೆ ಎಂದು ಪ್ರಧಾನಿ ಮೋದಿ ಚುನಾವಣಾ ಭಾಷಣಗಳಲ್ಲಿ ಆರೋಪಿಸಿದ್ದರು. "ಅವರು (ರಾಹುಲ್ ಗಾಂಧಿ) ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಸಾಮಾನ್ಯ ಜನರ ಬಳಿ ಇರುವ ಎಲ್ಲವನ್ನೂ ತನಿಖೆ ಮಾಡಿ ಮತ್ತು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಂಡು ಇತರರಿಗೆ ಹಂಚಲಾಗುವುದು ಎಂದು ಹೇಳುತ್ತಾರೆ. ಕಾಂಗ್ರೆಸ್ ನಮ್ಮ ತಾಯಂದಿರು ಮತ್ತು ಸಹೋದರಿಯರಿಂದ ಅವರ 'ಮಂಗಳಸೂತ್ರ' ಸೇರಿದಂತೆ ಚಿನ್ನವನ್ನು ಕಸಿದುಕೊಳ್ಳಲು ಕಾನೂನನ್ನು ತಿದ್ದುಪಡಿ ಮಾಡಲು ಯೋಜಿಸಿದ್ದಾರೆ. ಅವರು ಅದನ್ನು ಕದಿಯಲಿದ್ದಾರೆ. ನಿಮ್ಮ ಮಂಗಳಸೂತ್ರವನ್ನು ಸಹ ಬಿಡುವುದಿಲ್ಲ ಎಂದು ರಾಜಸ್ಥಾನದಲ್ಲಿ ಆರೋಪಿಸಿದ್ದರು.

My Mother Sonia Gandhi Sacrificed her Mangalsutra for country Priyanka Gandhi

ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ, "ಯುದ್ಧ ನಡೆದಾಗ ಇಂದಿರಾ ಗಾಂಧಿ (ಅವರ ಅಜ್ಜಿ ಮತ್ತು ಮಾಜಿ ಪ್ರಧಾನಿ) ತಮ್ಮ ಚಿನ್ನವನ್ನು ದಾನ ಮಾಡಿದರು. ನನ್ನ ತಾಯಿ ಈ ದೇಶಕ್ಕಾಗಿ ತನ್ನ ಮಾಂಗಲ್ಯ ತ್ಯಾಗ ಮಾಡಿದ್ದಾರೆ" ಎಂದು ಹೇಳಿ ಭಯೋತ್ಪಾದಕರು ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಮಾಡಿದ್ದನ್ನು ಉಲ್ಲೇಖಿಸಿದ್ದಾರೆ.

"ನರೇಂದ್ರ ಮೋದಿ ಅವರು ಮಂಗಳಸೂತ್ರದ ಮಹತ್ವವನ್ನು ಅರ್ಥಮಾಡಿಕೊಂಡಿದ್ದರೆ, ಅವರು ಇಂತಹ ಅನೈತಿಕ ವಿಷಯಗಳನ್ನು ಮಾತನಾಡುತ್ತಿರಲಿಲ್ಲ. ಕುಟುಂಬದಲ್ಲಿ ಎಲ್ಲರೂ ಮಲಗುವವರೆಗೂ ಮಹಿಳೆಯರು ಮಲಗುವುದಿಲ್ಲ ಮತ್ತು ಕುಟುಂಬದಲ್ಲಿ ತೊಂದರೆ ಉಂಟಾದಾಗ, ಮಹಿಳೆಯರು ತಮ್ಮ ಆಭರಣಗಳನ್ನು ಅಡಮಾನ ಇಡುತ್ತಾರೆ" ಎಂದು ಹೇಳಿದ್ದಾರೆ.

"ಮಹಿಳೆಯರು ಇತರರನ್ನು ಖಾಲಿ ಹೊಟ್ಟೆಯಲ್ಲಿ ಮಲಗಲು ಬಿಡುವುದಕ್ಕಿಂತ ಹಸಿವಿನಿಂದ ಮಲಗಲು ಇಷ್ಟಪಡುತ್ತಾರೆ. ಈ ಜನರಿಗೆ (ಬಿಜೆಪಿ) ಅವರ ಕಷ್ಟ ತಿಳಿದಿಲ್ಲ, ರೈತ ಸಾಲದಲ್ಲಿ ಬಳಲುತ್ತಿದ್ದರೆ, ಅವರ ಹೆಂಡತಿ ಆಕೆಯ ಮಂಗಳಸೂತ್ರವನ್ನು ಅಡಮಾನವಿಡುತ್ತಾಳೆ. ಮಗಳ ಮದುವೆ ಅಥವಾ ಆರೋಗ್ಯ ಸಮಸ್ಯೆ ಬಂದಾಗ ಕುಟುಂಬ, ಮಹಿಳೆ ತನ್ನ ಆಭರಣಗಳನ್ನು ಅಡಮಾನ ಇಡುತ್ತಾಳೆ" ಎಂದು ಒತ್ತಿಹೇಳಿದ್ದಾರೆ.

ಮೋದಿಜಿ ಮಂಗಳಸೂತ್ರದ ಮಹತ್ವವನ್ನು ಅರ್ಥಮಾಡಿಕೊಂಡಿದ್ದರೆ ಇಂತಹ ಮಾತುಗಳನ್ನು ಹೇಳುತ್ತಿರಲಿಲ್ಲ, ನೋಟು ಅಮಾನ್ಯೀಕರಣ ಆದಾಗ ಮಹಿಳೆಯರ ಉಳಿತಾಯದ ಹಣವನ್ನು ಕಸಿದುಕೊಂಡರು. ರೈತರ ಪ್ರತಿಭಟನೆಯಲ್ಲಿ 600 ರೈತರು ಪ್ರಾಣ ಕಳೆದುಕೊಂಡರು ಎಂದು ಮೋದಿಜಿ ಯೋಚಿಸಿದ್ದೀರಾ..? ಆ ವಿಧವೆಯರ ಮಂಗಳಸೂತ್ರದ ಬಗ್ಗೆ ಮೋದಿ ಯೋಚಿಸಿದ್ದಾರೆಯೇ?" ಎಂದು ಕಿಡಿಕಾರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+