Trisha Krishnan: ನಟಿ ತ್ರಿಶಾ - ವಿಜಯ್ ಮಧ್ಯೆ ಬ್ರೇಕಪ್, ಈಗಲಾದರೂ ಬುದ್ಧಿ ಬಂತಲ್ಲ ಎಂದ ಅಭಿಮಾನಿಗಳು!
Trisha Krishnan: ತಮಿಳುನಾಡಿನ ದಳಪತಿ ಹಾಗೂ ಮುಖ್ಯಮಂತ್ರಿ ವಿಜಯ್ ಮತ್ತು ತ್ರಿಶಾ ನಡುವೆ ಬ್ರೇಕ್‌ಅಪ್ ಆಗಿದೆ ಎನ್ನುವ ವಿಷಯ ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳುನಾಡಿನ ರಾಜಕೀಯಕ್ಕೆ ಪ್ರವೇಶಿಸಿದಾಗಿನಿಂದಲೂ ನಟ, ಮುಖ್ಯಮಂತ್ರಿ ವಿಜಯ್ ಹಾಗೂ ನಟಿ ತ್ರಿಶಾ ಅವರ ನಡುವಿನ ಆತ್ಮೀಯತೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಚರ್ಚೆಗಳು ಕಾವು ಪಡೆದುಕೊಳ್ಳುವಂತೆಯೇ ತ್ರಿಶಾ ಹಾಗೂ ವಿಜಯ್ ನಡೆದುಕೊಂಡಿದ್ದರು. ಇದೀಗ ಇಬ್ಬರು ಬ್ರೇಕ್ಅಪ್ ಮಾಡಿಕೊಳ್ಳಲಿದ್ದಾರೆಯೇ ಎನ್ನುವ ಚರ್ಚೆ ಜೋರಾಗಿದೆ.
ತಮಿಳು ನಟ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸುತ್ತಿದ್ದಾರೆ. ಜೂನ್ 22ರಂದು ವಿಜಯ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ದಳಪತಿ ರಾಜಕೀಯ ಜೀವನದ ಜೊತೆ ಜೊತೆಗೆ ವೈಯಕ್ತಿಕ ಜೀವನ ಕೂಡ ಭಾರೀ ಸದ್ದು ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಅವರು ಭಾರೀ ಪ್ರಗತಿ ಸಾಧಿಸಿ, ಒಂದೇ ಪ್ರಯತ್ನದಲ್ಲಿಯೇ ಯಶಸ್ಸು ಸಾಧಿಸಿದ್ದಾರೆ. ಒಂದೇ ಪ್ರಯತ್ನದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ರಾಜಕೀಯ ಪಕ್ಷ ಪ್ರಾರಂಭಿಸಿದ ಎರಡು ವರ್ಷದ ಅವಧಿಯಲ್ಲಿಯೇ ತಮಿಳಗ ವೆಟ್ರಿ ಕಳಗಂ ಪಕ್ಷವು ಅಧಿಕಾರಕ್ಕೆ ಬರುವುದರಲ್ಲಿ ಯಶಸ್ವಿಯಾಗಿದೆ. ಆದರೆ ರಾಜಕೀಯ ಪ್ರವೇಶ ಮಾಡಿದ ಬೆನ್ನಲ್ಲೇ ವಿಜಯ್ ಅವರ ಪತ್ನಿ ಸಂಗೀತಾ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ್ದರು. ಮತ್ತೊಂದು ಕಡೆ ನಟಿ ತ್ರಿಶಾ ಜೊತೆಗಿನ ಒಡನಾಟ ವಿವಾದಕ್ಕೆ ಕಾರಣವಾಗಿತ್ತು. ನಟ, ತಮಿಳುನಾಡಿನ ಸಿಎಂ ವಿಜಯ್ ಮತ್ತು ನಟಿ ತ್ರಿಶಾ ಅವರ ನಡುವಿನ ಸಂಬಂಧ, ಆತ್ಮೀಯತೆಯೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದು ರಾಜಕೀಯವಾಗಿಯೂ ಪ್ರಭಾವ ಬೀರುವ ಆತಂಕ ಮೂಡಿತ್ತು.

ವಿಜಯ್ ಹಾಗೂ ತ್ರಿಶಾ ಆತ್ಮೀಯ ಸ್ನೇಹಿತರು, ಹಲವು ವರ್ಷಗಳಿಂದ ತಮಿಳು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು, ಈ ಜೋಡಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಇನ್ನು ಈಚೆಗೆ ನಟಿಯೊಬ್ಬರ ಕಾರಣಕ್ಕೆ ತಮ್ಮ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂದೂ ವಿಜಯ್ ಅವರ ಮಾಜಿ ಪತ್ನಿ ಸಂಗೀತಾ ಅವರು ಡಿವೋರ್ಸ್ ಅರ್ಜಿಯಲ್ಲಿ ಉಲ್ಲೇಖಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಆಡಿಕೊಳ್ಳುವವರ ಬಾಯಿ ಮುಚ್ಚಿಸುವುದಕ್ಕೆಂದೇ ತ್ರಿಶಾ ಜೊತೆ ವಿಜಯ್ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಇದೂ ಸಹ ಭಾರೀ ಸದ್ದು ಮಾಡಿತ್ತು.
ವಿಜಯ್ - ತ್ರಿಶಾ ಬ್ರೇಕ್ ಅಪ್
ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ತ್ರಿಶಾ ಅವರು ವಿಜಯ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದ್ದು, ನಟಿ ಹಾಗೂ ವಿಜಯ್ ಆಪ್ತೆ ತ್ರಿಶಾ ಅವರು, ವಿಜಯ್ ಅವರಿಂದ ದೂರವಾಗುತ್ತಿದ್ದಾರೆಯೇ ಎನ್ನುವ ಅನುಮಾನ ಶುರುವಾಗಿದೆ. ಈ ಬೆಳವಣಿಗೆಯು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಹಾಗೂ ತ್ರಿಶಾ ನಡುವೆ ಬ್ರೇಕಪ್ ಆಗಿದೆ ಎನ್ನುವಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ವಿಜಯ್ ಅವರ ಹುಟ್ಟುಹಬ್ಬಕ್ಕೂ ತ್ರಿಶಾ ಅವರು ಶುಭಾಶಯ ಕೋರಲಿಲ್ಲ. ಇದರ ಬೆನ್ನಲ್ಲೇ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅಕೌಂಟ್ ಅನ್‌ಫಾಲೋ ಮಾಡಿದ್ದಾರೆ ಎಂದು ಚರ್ಚೆ ನಡೆಯುತ್ತಿದೆ. ಈ ಬೆಳವಣಿಗೆಗೆ ವಿಜಯ್ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಂಭ್ರಮಿಸಿದ ಅಭಿಮಾನಿಗಳು
ಇನ್ನು ನಟ, ಸಿಎಂ ವಿಜಯ್ ಮತ್ತು ತ್ರಿಶಾ ಅವರು ದೂರವಾಗುತ್ತಿರುವುದನ್ನು ವಿಜಯ್ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ನಟಿ ತ್ರಿಶಾ ಅವರಿಗೆ ಈಗಾಲಾದರೂ ಬುದ್ಧಿ ಬಂತಲ್ಲ ಎಂದು ಹೇಳುತ್ತಿದ್ದಾರೆ. ವಿಜಯ್ ಅವರು ರಾಜಕೀಯವಾಗಿ ಬಲಾಢ್ಯರಾಗುತ್ತಿದ್ದರೂ ಸಹ ತ್ರಿಶಾ ಅವರೊಂದಿಗಿನ ಆತ್ಮೀಯತೆಯ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದಾರೆ. ಅಲ್ಲದೆ ರಾಜಕೀಯವಾಗಿಯೂ ಇದು ಹಿನ್ನಡೆಗೆ ಕಾರಣವಾಗಿತ್ತು. ಇದೀಗ ಇಬ್ಬರೂ ದೂರವಾಗುತ್ತಿದ್ದಾರೆ ಎನ್ನುವ ವಿಷಯವು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.














Click it and Unblock the Notifications