CBSE Re-evaluation: 24 ಹೆಚ್ಚುವರಿ ಅಂಕಗಳೊಂದಿಗೆ 500/500 ಪಡೆದು ದೇಶಕ್ಕೇ ಟಾಪರ್ ಆದ ಅವ್ನಿ ಕೇಜ್ರಿವಾಲ್

ರಾಂಚಿ: ಜಾರ್ಖಂಡ್‌ನ ರಾಂಚಿಯ ದೆಹಲಿ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಅವ್ನಿ ಕೇಜ್ರಿವಾಲ್, ಸಿಬಿಎಸ್‌ಇ 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಮರುಮೌಲ್ಯಮಾಪನದ ನಂತರ ಅವರು 500ಕ್ಕೆ 500 ಅಂಕಗಳನ್ನು ಪಡೆಯುವ ಮೂಲಕ ಕಾಮರ್ಸ್ ವಿಭಾಗದಲ್ಲಿ ರಾಷ್ಟ್ರ ಮಟ್ಟದ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಮೇ 13 ರಂದು ಸಿಬಿಎಸ್‌ಇ 12 ನೇ ತರಗತಿ ಫಲಿತಾಂಶಗಳು ಪ್ರಕಟವಾದಾಗ, ಅವ್ನಿ ಶೇಕಡಾ 95.2 ರಷ್ಟು ಅಂಕಗಳನ್ನು ಗಳಿಸಿದ್ದರು. ಅವರು ಅಕೌಂಟೆನ್ಸಿ, ಅರ್ಥಶಾಸ್ತ್ರ ಮತ್ತು ಅಪ್ಲೈಡ್ ಮ್ಯಾಥಮ್ಯಾಟಿಕ್ಸ್‌ನಲ್ಲಿ ತಲಾ 100 ಅಂಕಗಳನ್ನು ಪಡೆದಿದ್ದರು. ಆದರೆ, ಅವರ ನೆಚ್ಚಿನ ವಿಷಯವಾಗಿದ್ದ ಇಂಗ್ಲೀಷ್‌ನಲ್ಲಿ 81 ಮತ್ತು ಬಿಸಿನೆಸ್ ಸ್ಟಡೀಸ್‌ನಲ್ಲಿ 95 ಅಂಕಗಳು ಬಂದಿದ್ದವು.

Avni Kejriwal

"ಈಗ ಎಲ್ಲರೂ ತುಂಬಾ ಖುಷಿಯಾಗಿದ್ದಾರೆ. ನಾವು 500 ಅಂಕಗಳನ್ನು ನಿರೀಕ್ಷಿಸಿರಲಿಲ್ಲ. ಇಂಗ್ಲೀಷ್‌ ನಲ್ಲಿ 19 ಅಂಕಗಳನ್ನು ಕಡಿತಗೊಳಿಸಲಾಗಿತ್ತು, ಇದನ್ನು ನಾನು ಖಂಡಿತ ನಿರೀಕ್ಷಿಸಿರಲಿಲ್ಲ. ಇಂಗ್ಲೀಷ್‌ ನನ್ನ ನೆಚ್ಚಿನ ವಿಷಯ. ಹೀಗಾಗಿ ನಾನು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದೆ. ಬಿಸಿನೆಸ್ ಸ್ಟಡೀಸ್‌ನಲ್ಲಿಯೂ 5 ಅಂಕಗಳನ್ನು ಕಡಿತಗೊಳಿಸಲಾಗಿತ್ತು. ನಾನು ಈಗಾಗಲೇ 3 ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದಿದ್ದೆ. ಮರುಮೌಲ್ಯಮಾಪನದ ಬಳಿಕ 24 ಅಂಕ ಹೆಚ್ಚಾಗಿದೆ ಎಂದು ಅವ್ನಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮರುಮೌಲ್ಯಮಾಪನದ ನಿರ್ಧಾರ

ಅವ್ನಿ, ಸಿಬಿಎಸ್‌ಇ ಬಿಡುಗಡೆ ಮಾಡಿದ ಮಾದರಿ ಉತ್ತರ ಪತ್ರಿಕೆಯೊಂದಿಗೆ ತಮ್ಮ ಉತ್ತರಗಳನ್ನು ಪರಿಶೀಲಿಸಿದಾಗ, ಅಂಕಗಳನ್ನು ಕಡಿತಗೊಳಿಸಲು ಯಾವುದೇ ಕಾರಣವಿಲ್ಲ ಎನ್ನುವುದು ತಿಳಿದು ಬಂದಿದೆ. ಈ ಆತ್ಮವಿಶ್ವಾಸವೇ ಅವರನ್ನು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವಂತೆ ಪ್ರೇರೇಪಿಸಿತು. ಮರುಮೌಲ್ಯಮಾಪನದ ಬಳಿಕ ಅವರ ನಂಬಿಕೆ ಹುಸಿಯಾಗಲಿಲ್ಲ. ಕಡಿತಗೊಂಡಿದ್ದ ಎಲ್ಲಾ 24 ಅಂಕಗಳು ಮರಳಿ ದೊರೆತಿದ್ದು, ಒಟ್ಟು 5 ವಿಷಯಗಳಲ್ಲಿಯೂ ನೂರಕ್ಕೆ ನೂರು ಅಂಕಗಳನ್ನು ಗಳಿಸಿ ಇತಿಹಾಸ ಬರೆದಿದ್ದಾರೆ.

ನಕ್ಸಲ್ ಪೀಡಿತ ಹಳ್ಳಿಗಳ ಚಿತ್ರಣ ಬದಲಿಸಿದ IAS ಅಧಿಕಾರಿ: ನಮ್ರತಾ ಜೈನ್ ಅವರ ಸ್ಫೂರ್ತಿದಾಯಕ ಕಥೆ
ನಕ್ಸಲ್ ಪೀಡಿತ ಹಳ್ಳಿಗಳ ಚಿತ್ರಣ ಬದಲಿಸಿದ IAS ಅಧಿಕಾರಿ: ನಮ್ರತಾ ಜೈನ್ ಅವರ ಸ್ಫೂರ್ತಿದಾಯಕ ಕಥೆ

ಇತ್ತೀಚೆಗಷ್ಟೇ ಸಿಬಿಎಸ್‌ಇ ಮರುಮೌಲ್ಯಮಾಪನ ಮತ್ತು ಅಂಕಗಳ ಪರಿಶೀಲನೆಯ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆದಿದ್ದು, ವಿದ್ಯಾರ್ಥಿಗಳ ಶ್ರಮಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಂಡಳಿಯು ಕಾರ್ಯನಿರ್ವಹಿಸಿದೆ ಎಂಬುದು ಈ ಫಲಿತಾಂಶದಿಂದ ಸಾಬೀತಾಗಿದೆ.

ತನ್ನ ಅಧ್ಯಯನದ ಶೈಲಿಯ ಬಗ್ಗೆ ಮಾತನಾಡಿದ ಅವ್ನಿ, ತಾನು ಎಂದಿಗೂ ಗಡಿಯಾರ ನೋಡಿ ಓದುತ್ತಿರಲಿಲ್ಲ ಎಂದು ಹೇಳಿದ್ದಾರೆ. ಅಂದರೆ, "ದಿನಕ್ಕೆ ಇಷ್ಟು ಗಂಟೆ ಓದಬೇಕು ಎಂದು ನಾನು ಲೆಕ್ಕ ಹಾಕುತ್ತಿರಲಿಲ್ಲ. ಬದಲಾಗಿ, ದಿನಕ್ಕೆ ಎರಡು ಅಥವಾ ಮೂರು ವಿಷಯಗಳನ್ನು ಮುಗಿಸಬೇಕೆಂಬ ಗುರಿ ಹೊಂದಿದ್ದೆ. ಆ ಗುರಿ ಮುಗಿಯುವವರೆಗೆ ನಾನು ಅಧ್ಯಯನ ಮಾಡುತ್ತಿದ್ದೆ. ಗಂಟೆಗಳ ಲೆಕ್ಕಾಚಾರಕ್ಕಿಂತ ಪ್ರತಿ ದಿನದ ಗುರಿಗಳನ್ನು ಪೂರ್ಣಗೊಳಿಸುವುದರ ಕಡೆಗೆ ನನ್ನ ಗಮನವಿತ್ತು," ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆಯೂ ಸಲಹೆ ನೀಡಿದ ಅವರು, "ಸಾಮಾಜಿಕ ಮಾಧ್ಯಮಗಳನ್ನು ಮಿತವಾಗಿ ಬಳಸಬೇಕು ಮತ್ತು ಅದು ನಿಮ್ಮ ಅಧ್ಯಯನಕ್ಕೆ ಅಡ್ಡಿಯಾಗದಂತೆ ಎಚ್ಚರವಹಿಸಬೇಕು" ಎಂದು ಕಿವಿಮಾತು ಹೇಳಿದರು.

ಭವಿಷ್ಯದ ಯೋಜನೆಗಳು

ಉದ್ಯಮಿ ಮಿತೇಶ್ ಕೇಜ್ರಿವಾಲ್ ಮತ್ತು ಗೃಹಿಣಿ ಪೂನಂ ಅವರ ಪುತ್ರಿಯಾಗಿರುವ ಅವ್ನಿ, ಭವಿಷ್ಯದಲ್ಲಿ ವ್ಯಾಪಾರ ಮತ್ತು ಹಣಕಾಸು ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳುವ ಗುರಿ ಹೊಂದಿದ್ದಾರೆ. "ನಾನು ಭವಿಷ್ಯದಲ್ಲಿ ನನ್ನದೇ ಆದ ವ್ಯವಹಾರವನ್ನು ಮಾಡಲು ಬಯಸುತ್ತೇನೆ. ಅದಕ್ಕೆ ಪೂರಕವಾಗಿ ನನ್ನ ಮುಂದಿನ ವ್ಯಾಸಂಗವನ್ನು ಮುಂದುವರಿಸಲಿದ್ದೇನೆ. ಪ್ರಸ್ತುತ ದೆಹಲಿ ಮತ್ತು ಬೆಂಗಳೂರಿನಲ್ಲಿರುವ ಕಾಲೇಜುಗಳ ಬಗ್ಗೆ ಪರಿಶೀಲಿಸುತ್ತಿದ್ದೇನೆ," ಎಂದು ಅವರು ತಮ್ಮ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.

CBSE ವೆಬ್‌ಸೈಟ್ ದೋಷ ಪತ್ತೆಹಚ್ಚಿದ್ದ 19 ವರ್ಷದ ಯುವಕನಿಗೆ ಪ್ರತಿಷ್ಠಿತ ಐಐಟಿ ಕಾನ್ಪುರದಲ್ಲಿ ಬಂಪರ್ ಉದ್ಯೋಗ
CBSE ವೆಬ್‌ಸೈಟ್ ದೋಷ ಪತ್ತೆಹಚ್ಚಿದ್ದ 19 ವರ್ಷದ ಯುವಕನಿಗೆ ಪ್ರತಿಷ್ಠಿತ ಐಐಟಿ ಕಾನ್ಪುರದಲ್ಲಿ ಬಂಪರ್ ಉದ್ಯೋಗ

ಡಿಪಿಎಸ್ ರಾಂಚಿಯ ಪ್ರಾಂಶುಪಾಲರಾದ ಡಾ. ಜಯಾ ಚೌಹಾಣ್ ಅವರು ಅವ್ನಿಯವರ ಈ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ಅವ್ನಿಯ ಅಸಾಧಾರಣ ಸಾಧನೆಯು ಡಿಪಿಎಸ್ ರಾಂಚಿ ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಗಿದೆ. ಆಕೆಯ ಯಶಸ್ಸು ಕೇವಲ ಕಠಿಣ ಪರಿಶ್ರಮವನ್ನಷ್ಟೇ ಅಲ್ಲ, ಸರಿಯಾದ ಮಾರ್ಗದರ್ಶನವಿದ್ದಾಗ ಏನನ್ನು ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ. ಆಕೆಯ ಈ ಸಾಧನೆ ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಲಿದೆ," ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ನಿರಂತರ ಪ್ರಯತ್ನ, ಸ್ಪಷ್ಟ ಗುರಿ ಮತ್ತು ಆತ್ಮವಿಶ್ವಾಸವಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದಕ್ಕೆ ಅವ್ನಿ ಕೇಜ್ರಿವಾಲ್ ಅವರ ಈ ಯಶಸ್ಸಿನ ಕಥೆಯೇ ಒಂದು ಉತ್ತಮ ಉದಾಹರಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+