ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಲ್ಫಾ, ಡೆಲ್ಟಾ ರೂಪಾಂತರವನ್ನು ತಟಸ್ಥಗೊಳಿಸುತ್ತದೆ ಕೋವ್ಯಾಕ್ಸಿನ್; NIH

|
Google Oneindia Kannada News

ನ್ಯೂಯಾರ್ಕ್, ಜೂನ್ 30: ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಆಲ್ಫಾ, ಡೆಲ್ಟಾ ರೂಪಾಂತರಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲದು ಹಾಗೂ ಈ ರೂಪಾಂತರಗಳನ್ನು ತಟಸ್ಥಗೊಳಿಸಬಲ್ಲದು ಎಂದು ಅಮೆರಿಕ ರಾಷ್ಟ್ರೀಯ ಆರೋಗ್ಯ (NIH) ಸಂಸ್ಥೆ ಹೇಳಿದೆ.

ಎನ್‌ಐಎಚ್ ಈ ಕುರಿತು ಅಧ್ಯಯನ ನಡೆಸಿದ್ದು, ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಂಡವರ ರಕ್ತದ ಸೀರಂ ಮಾದರಿ ಪರೀಕ್ಷಿಸಿ ಈ ಫಲಿತಾಂಶ ಕಂಡುಕೊಂಡಿರುವುದಾಗಿ ತಿಳಿಸಿದೆ. ಈ ಲಸಿಕೆಯು ಅಧಿಕ ಪ್ರತಿಕಾಯಗಳನ್ನು ಸೃಷ್ಟಿ ಮಾಡುತ್ತದೆ. ಈ ಮೂಲಕ ಆಲ್ಫಾ, ಡೆಲ್ಟಾ ರೂಪಾಂತರಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.

"ಡೆಲ್ಟಾ ಪ್ಲಸ್" ರೂಪಾಂತರಕ್ಕೆ ಈಗಿರುವ ಲಸಿಕೆಗಳ ಪ್ರಭಾವ; ತಜ್ಞರ ವಿಶ್ಲೇಷಣೆ

ಜಗತ್ತನ್ನೇ ಆಕ್ರಮಿಸಿದ ಆಲ್ಫಾ ಅಥವಾ B.1.1.7 ರೂಪಾಂತರ ಮೊದಲು ಬ್ರಿಟನ್‌ನಲ್ಲಿ ಕಂಡುಬಂದಿತ್ತು. ಡೆಲ್ಟಾ ರೂಪಾಂತರ ಮೊದಲು ಭಾರತದಲ್ಲಿ ಪತ್ತೆಯಾಗಿತ್ತು. ಇದೀಗ ಈ ರೂಪಾಂತರಗಳ ವಿರುದ್ಧ ಕೋವ್ಯಾಕ್ಸಿನ್ ಸಮರ್ಥವಾಗಿದೆ ಎಂದು ತಿಳಿದುಬಂದಿದೆ.

Covaxin Effective Against Alpha Delta Covid-19 Variants Says NIH

"ಕೋವ್ಯಾಕ್ಸಿನ್‌ನ ಮೂರನೇ ಹಂತದ ಪ್ರಯೋಗದ ಮಧ್ಯಂತರ ವರದಿ ಪ್ರಕಾರ ಲಸಿಕೆಯು ಸೋಂಕಿನ ವಿರುದ್ಧ 78% ಪರಿಣಾಮಕಾರಿ ಎಂಬುದು ತಿಳಿದುಬಂದಿದೆ. ಲಕ್ಷಣರಹಿತ ಸೋಂಕಿನ ಸಂದರ್ಭದಲ್ಲಿ ಈ ಲಸಿಕೆ ಪರಿಣಾಮ 70% ಇರುತ್ತದೆ" ಎಂದು ಎನ್‌ಎಚ್‌ಐ ಉಲ್ಲೇಖಿಸಿದೆ.

"ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯು ಕೊರೊನಾ ಸೋಂಕಿನ ವಿರುದ್ಧ ಹೆಚ್ಚು ಪರಿಣಾಮಕಾರಿ. ಭಾರತ ಹಾಗೂ ಇತರೆ ದೇಶಗಳು ಸೇರಿದಂತೆ ಈವರೆಗೂ ಸುಮಾರು 2.5 ಕೋಟಿಗೂ ಅಧಿಕ ಜನರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ" ಎಂದು ಹೇಳಿದೆ.

English summary
India's Covaxin 'effectively neutralises' Alpha, Delta Covid-19 variants, says US National Institute of Health
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X