• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಡೆಲ್ಟಾ ಪ್ಲಸ್" ರೂಪಾಂತರಕ್ಕೆ ಈಗಿರುವ ಲಸಿಕೆಗಳ ಪ್ರಭಾವ; ತಜ್ಞರ ವಿಶ್ಲೇಷಣೆ

|
Google Oneindia Kannada News

ನವದೆಹಲಿ, ಜೂನ್ 23: ದೇಶದಲ್ಲಿ ಹೊಸದಾಗಿ ಪತ್ತೆಯಾಗಿರುವ "ಡೆಲ್ಟಾ ಪ್ಲಸ್" ರೂಪಾಂತರದ ಬಗ್ಗೆ ತಜ್ಞರು ಎಚ್ಚರಿಕೆ ರವಾನಿಸಿದ್ದಾರೆ. ದೇಶದಲ್ಲಿ ಒಟ್ಟು 40 ಡೆಲ್ಟಾ ಪ್ಲಸ್ ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಪ್ರಕರಣಗಳು ಪತ್ತೆಯಾಗಿವೆ.

ಆದರೆ ಬೇರೆ ಬೇರೆ ಸ್ವರೂಪ ಪಡೆಯುತ್ತಿರುವ ಈ ಕೊರೊನಾ ರೂಪಾಂತರಗಳಿಗೆ ಈಗಾಗಲೇ ನೀಡಲಾಗುತ್ತಿರುವ ಲಸಿಕೆ ಪ್ರಯೋಜನಕ್ಕೆ ಬರುತ್ತದೆಯೇ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಅಪಾಯಕಾರಿ ಎಂದು ಪರಿಗಣಿಸಲಾಗಿರುವ "ಡೆಲ್ಟಾ ಪ್ಲಸ್‌" ರೂಪಾಂತರಕ್ಕೆ ಭಾರತದಲ್ಲಿ ಸದ್ಯ ನೀಡಲಾಗುತ್ತಿರುವ ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಫುಟ್ನಿಕ್ ವಿ ಲಸಿಕೆಗಳು ಪರಿಣಾಮಕಾರಿಯೇ? ಇದಕ್ಕೆ ತಜ್ಞರು ನೀಡಿರುವ ಉತ್ತರ ಹೀಗಿದೆ.

ಡೆಲ್ಟಾಗಿಂತ ಡೆಲ್ಟಾ ಪ್ಲಸ್ ರೂಪಾಂತರ ಅಪಾಯಕಾರಿಯೇ? ಇಲ್ಲಿದೆ ಎರಡರ ನಡುವಣ ವ್ಯತ್ಯಾಸಡೆಲ್ಟಾಗಿಂತ ಡೆಲ್ಟಾ ಪ್ಲಸ್ ರೂಪಾಂತರ ಅಪಾಯಕಾರಿಯೇ? ಇಲ್ಲಿದೆ ಎರಡರ ನಡುವಣ ವ್ಯತ್ಯಾಸ

ಡೆಲ್ಟಾ ರೂಪಾಂತರ ಹಾಗೂ ದಕ್ಷಿಣ ಆಫ್ರಿಕಾದ ಬೆಟಾ ರೂಪಾಂತರದ ಹಲವು ಅಂಶಗಳನ್ನೇ ಈ ಡೆಲ್ಟಾ ಪ್ಲಸ್ ಕೂಡ ಹೊಂದಿರುವುದರಿಂದ ಈಗ ಅಭಿವೃದ್ಧಿಗೊಳಿಸಲಾಗಿರುವ ಕೊರೊನಾ ಲಸಿಕೆಗಳು ಪರಿಣಾಮಕಾರಿ ಎಂದು ತಜ್ಞರು ತಿಳಿಸಿದ್ದಾರೆ.

"ಭಾರತದಲ್ಲಿ ನೀಡಲಾಗುತ್ತಿರುವ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ಡೆಲ್ಟಾ ಪ್ಲಸ್ ರೂಪಾಂತರದ ವಿರುದ್ಧ ಕಾರ್ಯ ನಿರ್ವಹಿಸಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ಈ ರೂಪಾಂತರದ ವಿರುದ್ಧ ಎಷ್ಟರ ಮಟ್ಟಿಗೆ ಲಸಿಕೆಗಳು ಪ್ರತಿರೋಧಕಗಳನ್ನು ಸೃಷ್ಟಿಸಬಲ್ಲದು ಎಂಬ ಮಾಹಿತಿಯನ್ನು ಶೀಘ್ರವೇ ಹಂಚಿಕೊಳ್ಳಲಾಗುವುದು" ಎಂದು ಏಮ್ಸ್‌ನ ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥ ಡಾ. ಸುಭ್ರದೀಪ್ ಕರ್ಮಾಕರ್ ತಿಳಿಸಿದ್ದಾರೆ.

   Sputnik V ಲಸಿಕೆ ನಮ್ಮ Covishieldಗಿಂತಲೂ ಸುರಕ್ಷಿತವೇ | Oneindia Kannada

   "ದೇಶದಲ್ಲಿ ಅನುಮೋದನೆ ನೀಡಲಾಗಿರುವ ಸ್ಫುಟ್ನಿಕ್ ವಿ ಲಸಿಕೆಯೂ ಈ ರೂಪಾಂತರದ ವಿರುದ್ಧ ಹೋರಾಡುವ ಅಂಶಗಳನ್ನು ಹೊಂದಿದೆ" ಎಂದು ಗಮಾಲೆಯಾ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್‌ಬರ್ಗ್ ತಿಳಿಸಿದ್ದಾರೆ.

   English summary
   Is Covishield, Covaxin, Sputnik V COVID-19 vaccines effective against Delta plus variants? Here is what experts are saying
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X