ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು : ಮೀಟರ್ ಬಡ್ಡಿ ದಂಧೆ ತಡೆಯಲು ಸಹಾಯವಾಣಿ

|
Google Oneindia Kannada News

ತುಮಕೂರು, ಜುಲೈ 16 : ಮೀಟರ್ ಬಡ್ಡಿ ದಂಧೆ ನಡೆಸುತ್ತಿರುವ ವ್ಯಕ್ತಿಗಳ ಬಳಿ ಸಾಲ ಮಾಡಿರುವ ರೈತರು ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ತುಮಕೂರಿನಲ್ಲಿ ಮೀಟರ್ ಬಡ್ಡಿ ದಂಧೆಯನ್ನು ತಡೆಯಲು ಪೊಲೀಸರು ಸಹಾಯವಾಣಿಯನ್ನು ಆರಂಭಿಸಿದ್ದಾರೆ.

ಖಾಸಗಿಯಾಗಿ ಲೇವಾಲೇವಿ ಮಾಡುತ್ತಿರುವವರು ಮತ್ತು ಮೀಟರ್ ಬಡ್ಡಿ ನೀಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಈ ಸಹಾಯವಾಣಿಯನ್ನು ಆರಂಭಿಸಿದ್ದಾರೆ. ಸಾರ್ವಜನಿಕರು ಮೀಟರ್ ಬಡ್ಡಿ ನಡೆಸುತ್ತಿರುವವರು ಕಿರುಕುಳ ಕೊಟ್ಟರೆ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. [ರಾಮಯ್ಯ, ಶಂಕ್ರಪ್ಪ ಸೇರಿ ಅನ್ನದಾನಿಯನ್ನು ಕೊಂದ ಕಥೆ]

tumakuru

ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 0816-2271141, ಪೊಲೀಸ್ ಇನ್ಸ್‌ಪೆಕ್ಟರ್ ದೂರವಾಣಿ ಸಂಖ್ಯೆ 9480800932. ಈ ಸಹಾಯವಾಣಿ ಸಂಖ್ಯೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. [ಕರ್ನಾಟಕದಲ್ಲಿ ರೈತರ ಸಾವಿಗೆ ಕಾರಣವೇನು? ಇಲ್ಲಿದೆ ಉತ್ತರ]

ಪಿಎಸ್‌ಐ ದರ್ಜೆಯ ಅಧಿಕಾರಿಗಳನ್ನು ಸಹಾಯವಾಣಿಯ ಉಸ್ತುವಾರಿಗೆ ನೇಮಿಸಲಾಗಿದೆ. ಸಹಾಯವಾಣಿಗೆ ಬರುವ ಕರೆಗಳ ಮಾಹಿತಿ ಆಧಾರದ ಮೇಲೆ ಪೊಲೀಸರು ಮೀಟರ್ ಬಡ್ಡಿ ದಂಧೆ ನಡೆಸುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.

ಅಂದಹಾಗೆ ತುಮಕೂರು ಪೊಲೀಸರು ಸಾರ್ವನಿಕರ ಸಹಾಯಕ್ಕಾಗಿ ವಾಟ್ಸಪ್ ಸಹಾಯವಾಣಿಯನ್ನು ಆರಂಭಿಸಿದ್ದಾರೆ. ಸಹಾಯವಾಣಿ ಸಂಖ್ಯೆ 9480802900.

English summary
Tumakuru police set to crackdown private moneylenders harassment. Police launched a 24-hour helpline for people to complaint about moneylenders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X