Get Updates
Get notified of breaking news, exclusive insights, and must-see stories!

Tumakuru Lok Sabha constituency: ತುಮಕೂರಿನಲ್ಲಿ ಬಿಜೆಪಿ-ಕಾಂಗ್ರೆಸ್ ಜಟಾಪಟಿಯೋ, ಬಿಜೆಪಿ ಆಂತರಿಕ ಕಾದಾಟವೋ?

ಕಲ್ಪತರು ನಾಡು ತುಮಕೂರಿನಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಬಿಸಿಲಿನ ಝಳದಂತೆಯೇ ಸಕತ್ ಕಾವೇರಿದೆ. ಕ್ಷೇತ್ರ ತೀವ್ರ ರಾಜಕೀಯ ಹಣಾಹಣಿಗೆ ಸಾಕ್ಷಿಯಾಗಿದ್ದು, ಇದು ಬಿಜೆಪಿ ಮತ್ತು ಕಾಂಗ್ರೆಸ್ ಮತ್ತು ಮೈತ್ರಿ ಪಕ್ಷಗಳ ನಡುವಿನ ಹೋರಾಟವೋ ಅಥವಾ ಬಿಜೆಪಿ-ಬಿಜೆಪಿ ಕಿತ್ತಾಟವೋ ಎಂಬ ಹೊಸ ಗೊಂದಲ ಕ್ಷೇತ್ರದಲ್ಲಿ ಆರಂಭವಾಗಿದೆ.

ಬಿಜೆಪಿ ಸಂಸದರಿರುವ ಈ ಕ್ಷೇತ್ರದಲ್ಲಿ ಈಗಾಗಲೇ ಎರಡು ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿವೆ. ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಬೆಂಗಳೂರಿನಿಂದ ಬಂದ ಮಾಜಿ ಸಚಿವ ವಿ ಸೋಮಣ್ಣ ಅವರನ್ನು ನಿಲ್ಲಿಸಿದ್ದರೇ, ಕಾಂಗ್ರೆಸ್ ಸ್ಥಳೀಯ ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ 26 ಏಪ್ರಿಲ್ 2024ರ ಶುಕ್ರವಾರ ಮತದಾನ ನಡೆಯಲಿದ್ದು, ಜೂನ್ 04 ರಂದು ಫಲಿತಾಂಶ ಪ್ರಕಟವಾಗಲಿದೆ.

Lok Sabha Election 2024 Know more about Tumakuru constituency parties candidates strategy

ತುಮಕೂರು ಲೋಕಸಭಾ ಕ್ಷೇತ್ರ

ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಬಿಜೆಪಿಯ ಜಿಎಸ್ ಬಸವರಾಜು. ಈ ಬಾರಿ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. 2019 ರ ಲೋಕಸಭಾ ಚುನಾವಣೆಯಲ್ಲಿ, ಇದು ತೀವ್ರ ಪೈಪೋಟಿಗೆ ಸಾಕ್ಷಿಯಾಯಿತು ಈ ಕ್ಷೇತ್ರ. ಬಿಜೆಪಿ ಅಭ್ಯರ್ಥಿ ಜಿಎಸ್ ಬಸವರಾಜು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ 5,96,127 ಮತಗಳನ್ನು ಗಳಿಸಿ, 13,339 ಮತಗಳ ಗೆಲುವಿನ ಅಂತರದಿಂದ ಗೆದ್ದರು. ಅದೂ ಕೂಡ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ವಿರುದ್ಧ ಎಂದಬುದು ಇಲ್ಲಿ ಗಮನಾರ್ಹ.

2014ರ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ 4,29,868 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಬಿಜೆಪಿಯ ಜಿಎಸ್ ಬಸವರಾಜ್ 355,827 ಮತಗಳನ್ನು ಪಡೆದರೆ, ಜೆಡಿಎಸ್‌ನ ಎ ಕೃಷ್ಣಪ್ಪ 258,683 ಮತಗಳನ್ನು ಗಳಿಸಿದ್ದರು.

ಗ್ರಾಮೀಣ ಮತದಾರರೇ ಹೆಚ್ಚಿರುವ ಕ್ಷೇತ್ರದಲ್ಲಿ 1952 ರಿಂದ ಕಾಂಗ್ರೆಸ್ ಹಿಡಿತವಿತ್ತು. 1991 ರಲ್ಲಿ ಮೊದಲ ಬಾರಿಗೆ ಬಿಜೆಪಿ ತನ್ನ ಖಾತೆ ತೆರೆದಿತ್ತು. ಅಂದಿನಿಂದ ಕಾಂಗ್ರೆಸ್, ಬಿಜೆಪಿ ಒಮ್ಮೆ ನಾನು ಒಮ್ಮೆ ನೀನು ಆಟವಾಡುತ್ತಾ ಬಂದಿವೆ. ಮಧ್ಯದಲ್ಲಿ 1996 ರಲ್ಲಿ ಜೆಡಿಎಸ್ ಕೂಡ ಬಂದು ಹೋಗಿದೆ. 1977 ರ ಚುನಾವಣೆಯಿಂದ ಇಲ್ಲಿಯವರೆಗೆ ಕಾಂಗ್ರೆಸ್ 6 ಬಾರಿ ಮತ್ತು ಬಿಜೆಪಿ 5 ಬಾರಿ ತುಮಕೂರು ಕ್ಷೇತ್ರವನ್ನು ಗೆದ್ದಿವೆ. ಆದರೆ, ಈ ಬಾರಿ ಮಾತ್ರ ಬಿಜೆಪಿ ಬಂಡಾಯ ಶಮನ ಮಾಡದಿದ್ದರೇ ಕ್ಷೇತ್ರ ಕಾಂಗ್ರೆಸ್ ಪಾಲಾಗಲಿದೆ.

Lok Sabha Election 2024 Know more about Tumakuru constituency parties candidates strategy

ಸರಿಸಮಾನ ಶಾಸಕರ ಸಂಖ್ಯೆ!

ತುಮಕೂರು ಲೋಕಸಭಾ ವ್ಯಾಪ್ತಿಗೆ ಚಿಕ್ಕನಾಯಕನಹಳ್ಳಿ (ಸಿ.ಬಿ.ಸುರೇಶ್ ಬಾಬು), ತಿಪಟೂರು (ಕೆ. ಷಡಕ್ಷರಿ), ತುರುವೇಕೆರೆ (ಎಂ.ಟಿ.ಕೃಷ್ಣಪ್ಪ ), ತುಮಕೂರು ನಗರ (ಜಿ.ಬಿ.ಜ್ಯೋತಿ ಗಣೇಶ್), ತುಮಕೂರು ಗ್ರಾಮಾಂತರ (ಬಿ.ಸುರೇಶ್ ಗೌಡ), ಕೊರಟಗೆರೆ (ಜಿ.ಪರಮೇಶ್ವರ ), ಗುಬ್ಬಿ (ಸ್.ಆರ್.ಶ್ರೀನಿವಾಸ್) ಮತ್ತು ಮಧುಗಿರಿ (ಕೆ.ಎನ್.ರಾಜಣ್ಣ) ವಿಧಾನಸಭಾ ಕ್ಷೇತ್ರಗಳಿವೆ. ಇಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಶಾಸಕರಿದ್ದರೆ, ಇಬ್ಬರು ಬಿಜೆಪಿ ಮತ್ತು ಇಬ್ಬರು ಜೆಡಿಎಸ್ ಶಾಸಕರಿದ್ದಾರೆ. ಹಾಗಾಗಿ ಎರಡು ಪಕ್ಷಗಳು ಸರಿಸಮನಾಗಿವೆ.

ಕ್ಷೇತ್ರ ಒಕ್ಕಲಿಗ ಸಮುದಾಯದ ಅತಿದೊಡ್ಡ ಮತದಾರರನ್ನು ಹೊಂದಿದೆ. ಜೊತೆಗೆ ಲಿಂಗಾಯತ ಜನಸಂಖ್ಯೆಯು ಇದೆ. ಕ್ಷೇತ್ರದಲ್ಲಿ 16,51 403 ಮತದಾರರಿದ್ದು, ಅದರಲ್ಲಿ 8,14,555 ಮಂದಿ ಪುರುಷರು, 8,36775 ಮಂದಿ ಮಹಿಳೆಯರು ಮತ್ತು 73 ಮಂದಿ ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದಾರೆ.

ಪ್ಲಸ್ ಮತ್ತು ಮೈನಸ್ ಏನು?

ಕ್ಷೇತ್ರದಲ್ಲಿ ಜಿಎಸ್ ಬಸವರಾಜು ಐದು ಬಾರಿ ಸಂಸದರಾಗಿದ್ದು, ಅವರ ಪ್ರಭಾವ ಹೆಚ್ಚಾಗಿಯೇ ಇದೆ. ಇದು ಬಿಜೆಪಿಗೆ ಲಾಭವಾಗಬಹುದು. ಕ್ಷೇತ್ರದ ಬಿಜೆಪಿ ಶಾಸಕರ ಕೆಲಸಗಳು ಅದರಲ್ಲೂ ಈ ಬಾರಿ ನಗರ ಮತ್ತು ಗ್ರಾಮಾಂತರದಲ್ಲಿ ಬಿಜೆಪಿ ಶಾಸಕರ ಸ್ಮಾರ್ಟ್ ಸಿಟಿ ಯೋಜನೆಯಿಂದ ಜನರನ್ನು ಸೆಳೆಯಬಹುದು.

Lok Sabha Election 2024 Know more about Tumakuru constituency parties candidates strategy

ಬಿಜೆಪಿ ಟಿಕೆಟ್ ಹಂಚಿಕೆ ಮಾಡುವ ಮುನ್ನವೇ ಕ್ಷೇತ್ರದಲ್ಲಿ ಅಸಮಾಧಾನ ಹೊಗೆಯಾಡಲು ಶುರುವಾಗಿತ್ತು. ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಜೆಸಿ ಮಾಧುಸ್ವಾಮಿಗೆ ಟಿಕೆಟ್ ನಿರಾಕರಿಸಿ, ವಿ ಸೋಮಣ್ಣಗೆ ಟಿಕೆಟ್ ನೀಡಿರುವುದು ಬಿಜೆಪಿ ಕಾರ್ಯಕರ್ತರಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಬಹಿರಂಗವಾಗಿದ್ದು, ಸೋಮಣ್ಣ ಸೋಲು ಬಯಸುವವರು ಬಿಜೆಪಿಯಲ್ಲಿಯೇ ಇದ್ದಾರೆ. ಬಂಡಾಯ ಶಮನಕ್ಕೆ ಅಭ್ಯರ್ಥಿ ಸೋಮಣ್ಣ ಪಡುತ್ತಿರುವ ಯಾವ ಪ್ರಯತ್ನಗಳು ಕೈ ಹಿಡಿಯುವ ಹಾಗೆ ಕಾಣಿಸುತ್ತಿಲ್ಲ.

ಕಾಂಗ್ರೆಸ್‌ಗೆ ಬೆನ್ನಿಗೆ ಅದರ ಗ್ಯಾರೆಂಟಿ ಯೋಜನೆಗಳಿವೆ. ಆದರೆ, ಕ್ಷೇತ್ರದಲ್ಲಿ ಘಟಾನುಘಟಿ ನಾಯಕರು ಇರುವುದು ಮತ್ತು ಹೆಚ್ಚು ಸಂಖ್ಯೆಯಲ್ಲಿ ಶಾಸಕರಿರುವುದು ಕೈಗೆ ಬಲ ಬರಿಸಬಹುದು. ಬಿಜೆಪಿಯಲ್ಲಿನ ಆಂತರಿಕ ಕಾದಾಟಗಳು ಮತ್ತು ಮಾಜಿ ಸಂಸದ ಮುದ್ದಹನುಮೇಗೌಡರ ವೈಯಕ್ತಿಕ ವರ್ಚಸ್ಸು ಕಾಂಗ್ರೆಸ್‌ಗೆ ಲಾಭವಾಗಲಿದೆ. ಮಾಜಿ ಸಚಿವ ಮಾಧುಸ್ವಾಮಿ ಕಾಂಗ್ರೆಸ್‌ ಸೇರ್ಪಡೆಯಾಗುವ ವದಂತಿ ಕೂಡ ಕೈಗೆ ಸಹಕಾರಿಯಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+