Get Updates
Get notified of breaking news, exclusive insights, and must-see stories!

BJP-JDS Workers Clash: ಎದ್ ಬಾ, ಮಾನ ಮರ್ಯಾದಿ ಇಲ್ವಾ ನಿಂಗೆ; ಸಮಾವೇಶದಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಘರ್ಷಣೆ !

ತುಮಕೂರು, ಮಾರ್ಚ್ . 26: ಈ ಬಾರಿಯ ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಜೆಡಿಎಸ್ ಕೈ ಜೋಡಿಸಿದ್ದು, ಇತ್ತೀಚೆಗಷ್ಟೇ ತಮ್ಮ ಸೀಟು ಹಂಚಿಕೆ ಮಾತುಕತೆಯನ್ನು ಅಂತಿಮಗೊಳಿಸಿದೆ. ಆದರೆ, ಎರಡು ಪಕ್ಷಗಳು ಅಂದುಕೊಂಡಷ್ಟು ಸುಲಭವಾಗಿಲ್ಲ ರಾಜ್ಯದಲ್ಲಿನ ಕಾರ್ಯಕರ್ತರ ಪರಿಸ್ಥಿತಿ. ದೊಡ್ಡ ಸವಾಲು ಈಗ ಆರಂಭವಾಗುತ್ತಿದೆ.

ನಿನ್ನೆಯಷ್ಟೇ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತಮ್ಮ ಪಕ್ಷದ ಪದಾಧಿಕಾರಿಗಳು, ಶಾಸಕರು ಮತ್ತು ಕಾರ್ಯಕರ್ತರಿಗೆ ಬಿಜೆಪಿ ಜೊತೆಗೆ ಹೇಗೆ ಸಮನ್ವಯ ಸಾಧಿಸಬೇಕು ಎನ್ನುವ ಬಗ್ಗೆ ಪತ್ರ ಬರೆದು ಸೂಚನೆಗಳನ್ನು ನೀಡಿದ್ದರು. ಆದರೆ, ಇದು ಜಾರಿಗೆ ಬರು ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಏಕೆಂದರೆ, ತುರುವೇಕೆರೆಯಲ್ಲಿ ನಡೆದ ಜಂಟಿ ಸಮಾವೇಶದಲ್ಲಿ ಎರಡು ಪಕ್ಷಗಳ ಕಾರ್ಯಕರ್ತರು ಮತ್ತು ನಾಯಕರ ನಡುವೆ ದೊಡ್ಡ ಜಟಾಪಟಿಯೇ ನಡೆದಿದೆ.

Lok Sabha Election 2024 Clash between BJP JDS Workers In Thuruvekere

ಭಿನ್ನಾಭಿಪ್ರಾಯ ಶಮನ ಸಮಾವೇಶದಲ್ಲಿ ಮತ್ತಷ್ಟು ಭಿನ್ನಾಭಿಪ್ರಾಯ!

ಎರಡು ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಪರಸ್ಪರ ಭಿನ್ನಾಭಿಪ್ರಾಯ ಹೊಂದಿದ್ದು, ಒಂದೇ ಕಡೆ ಇರಲು ಹೊಂದಾಣಿಕೆ ಮಾಡಿಕೊಳ್ಳಲು ಪರದಾಡುತ್ತಿದ್ದಾರೆ. ತುಮಕೂರಿನ ತುರುವೇಕೆರೆಯಲ್ಲಿ ಸೋಮವಾರ ಆಯೋಜಿಸಿದ್ದ ಜಂಟಿ ಸಭೆಯಲ್ಲಿ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ. ಮಾನ ಮರ್ಯಾದಿ ಇಲ್ಲವೇ ಎನ್ನುವ ಮಟ್ಟಕ್ಕೆ ಕಾರ್ಯಕರ್ತರು ತನ್ನ ನಾಯಕರ ಮೇಲೆ ಮುಗಿ ಬಿದ್ದಿದ್ದಾರೆ.

ತುಮಕೂರಿನಿಂದ ಸ್ಪರ್ಧಿಸುತ್ತಿರುವ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರಕ್ಕಾಗಿ ಆಯೋಜಿಸಿದ್ದ ಜಂಟಿ ಚುನಾವಣಾ ಸಮಾವೇಶದ ವೇಳೆ ವೇದಿಕೆಯಲ್ಲೇ ಉಭಯ ಪಕ್ಷಗಳ ನಾಯಕರ ನಡುವೆ ವಾಗ್ವಾದ ನಡೆದಿದೆ. ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್ ಅವರತ್ತ ಬೊಟ್ಟು ಮಾಡಿದ್ದರಿಂದ ಗದ್ದಲ ಶುರುವಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕೊಂಡಜ್ಜಿ ವಿಶ್ವನಾಥ್ ಅವರೇ ಕಾರಣ ಎಂದಿದ್ದಾರೆ. ಈ ಹಿಂದೆ ಜೆಡಿಎಸ್‌ನಲ್ಲಿದ್ದು ನಂತರ ಬಿಜೆಪಿ ಸೇರಿದ್ದ ಕೊಂಡಜ್ಜಿ ವಿಶ್ವನಾಥ್ ಈ ಮಾತಿನಿಂದ ಅಸಮಾಧಾನಗೊಂಡಿದ್ದರು. ಅವರು ಮಾತನಾಡಲು ಮುಂದಾಗುವ ಮುನ್ನವೇ ವಿ. ಸೋಮಣ್ಣ ಅವರನ್ನು ತಡೆದಿದ್ದಾರೆ. ಬಳಿಕ ಗದ್ದಲ ಮತ್ತಷ್ಟು ಹೆಚ್ಚಾಗಿದೆ.

Lok Sabha Election 2024 Clash between BJP JDS Workers In Thuruvekere

ವೇದಿಕೆ ಮೇಲಿದ್ದ ಜೆಡಿಎಸ್, ಬಿಜೆಪಿ ನಾಯಕರು ವೇದಿಕೆಯಿಂದ ಕೆಳಗಿಳಿಯಲು ಆರಂಭಿಸಿದ್ದರು. ತಮ್ಮ ತಮ್ಮ ನಾಯಕರನ್ನು ಸಮರ್ಥನೆ ಮಾಡಿಕೊಳ್ಳುತ್ತಾ ಕಾರ್ಯಕರ್ತರು ಅಸಮಾಧಾನಗೊಂಡು ಕೂಗಾಡಲಾರಂಭಿಸಿದರು. ಲೋಕಸಭಾ ಅಭ್ಯರ್ಥಿ ವಿ ಸೋಮಣ್ಣ ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರು. ಅದು ವಿಫಲವಾಯಿತು.

ಮಾಧ್ಯಮಗಳು ಇರುವುದನ್ನೂ ಲೆಕ್ಕಿಸದೇ ಜೆಡಿಎಸ್ ಕಾರ್ಯಕರ್ತರೊಬ್ಬರು ವೇದಿಕೆ ಮೇಲೆ ಕುಳಿತಿದ್ದ ಪಕ್ಷದ ಮುಖಡರೊಬ್ಬರಿಗೆ ವೇದಿಕೆಯಿಂದ ಇಳಿದು ಬರುವಂತೆ ಕೂಗಿದ್ದಾರೆ. "ಅವರೇ ಏನಾದ್ರು ಮಾಡಿಕೊಳ್ಳಲಿ. ನಮಗ್ಯಾಕೆ. ನಾವು ಇಲ್ಲಿಂದ ಹೋಗೋಣ ಬನ್ನಿ. ಹೇ ಬಸವಣ್ಣ ನಿಂಗೆ ಮಾನ ಮರ್ಯಾದಿ ಇಲ್ವಾ.. ಅಲ್ಯಾಕೆ ಇನ್ನೂ ಕುಳಿತಿದ್ದೀಯಾ, ಎದ್ ಬಾ" ಎಂದು ಕಿರುಚಾಡಿದ್ದಾರೆ.

ವೇದಿಕೆ ಮೇಲೆ ಮತ್ತು ಕೆಳಗೆ ಕುಳಿತಿದ್ದ ನಾಯಕರು ಮತ್ತು ಕಾರ್ಯಕರ್ತರ ಅಸಮಾಧಾನ ಎದ್ದು ಕಾಣುತ್ತಿತ್ತು. ಇವುಗಳಿಗೆ ಪಕ್ಷದ ನಾಯಕರು ಹೇಗೆ ಪರಿಹಾರ ಹುಡುತ್ತಾರೊ ನೋಡಬೇಕಿದೆ. ಬಿಜೆಪಿ ಮತ್ತು ಜೆಡಿಎಸ್ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಪಕ್ಷಗಳಾಗಿದ್ದು, ಕಾರ್ಯಕರ್ತರಿಗೆ ಈ ಮೈತ್ರಿ ಒಪ್ಪಿಕೊಳ್ಳಲು ಇನ್ನು ಸಮಯ ಬೇಕಾಗಬಹುದು. ಅಷ್ಟರಲ್ಲಿ ಚುನಾವಣೆ ಮುಗಿಯುವ ಹಂತಕ್ಕೆ ಬರಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಇನ್ನು, ಬಿಜೆಪಿ ಜೆಡಿಎಸ್‌ಗೆ ಹಾಸನ, ಮಂಡ್ಯ ಮತ್ತು ಕೋಲಾರ ಮೂರು ಸ್ಥಾನಗಳನ್ನು ನೀಡುವ ಭರವಸೆ ನೀಡಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಅಳಿಯ ಡಾ.ಮಂಜುನಾಥ್ ಅವರು ಬಿಜೆಪಿ ಟಿಕೆಟ್‌ನಲ್ಲಿ ಕಣಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ನಾಲ್ಕು ಸ್ಥಾನ ನೀಡಿದ್ದೇವೆ ಎನ್ನುತ್ತಿದೆ ಬಿಜೆಪಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+