Get Updates
Get notified of breaking news, exclusive insights, and must-see stories!

ಮಧುಗಿರಿ ಬೆಟ್ಟ, ಸವದತ್ತಿ ಎಲ್ಲಮ್ಮ, ಮಲ್ಲಳ್ಳಿ ಫಾಲ್ಸ್ ಸೇರಿ ಹಲವೆಡೆ ರೋಪ್‌ವೇ, ಕೇಬಲ್‌ಕಾರ್‌!

ಬೆಂಗಳೂರು, ಮಾರ್ಚ್ 27: ರಾಜ್ಯದಲ್ಲಿರುವ ಹಲವು ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಹಲವು ವರ್ಷಗಳಿಂದ ಪ್ರವಾಸಿಗರು ಮನವಿ ಮಾಡುತ್ತಿದ್ದಾರೆ. ಕೆಲವು ಬೆಟ್ಟಗಳಿಗೆ ರೋಪ್‌ವೇ/ಕೇಬಲ್‌ ಕಾರ್‌ಗಳು ಬೇಕು ಎಂದು ಬೇಡಿಕೆ ಹೆಚ್ಚಾಗುತ್ತಲೇ ಇದೆ. ದೇವಸ್ಥಾನಗಳಿಗೂ ಕೂಡ ರೋಪ್‌ವೇ/ಕೇಬಲ್‌ ಕಾರ್‌ ಬೇಕು ಎಂಬ ಬೇಡಿಕೆಯಿದೆ.

ಇತಂಹ ಒತ್ತಡಗಳ ಬೆನ್ನಲ್ಲೇ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ರೋಪ್‌ವೇ ಹಾಕಲು ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಹಲವು ಬೆಟ್ಟಗಳು, ದೇವಸ್ಥಾನಗಳು ಮತ್ತು ಫಾಲ್ಸ್‌ಗಳಿಗೆ ರೋಪ್‌ವೇ/ಕೇಬಲ್‌ ಕಾರ್‌ಗಳನ್ನು ಹಾಕಿಸಲು ಪ್ಲ್ಯಾನಿಂಗ್ ಮಾಡುತ್ತಿದೆ. ಅವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka tourism department is planning ropeways and cablecars at many Hill and Fort

ಎಲ್ಲೆಲ್ಲಿ ರೋಪ್‌ವೇ...?

ಎರಡು ಪ್ಯಾಕೇಜ್‌ಗಳ ಅಡಿಯಲ್ಲಿ ರೋಪ್‌ವೇ/ಕೇಬಲ್‌ ಕಾರ್‌ಗಳನ್ನು ಹಾಕಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ತುಮಕೂರು ಜಿಲ್ಲೆಯ ಮಧುಗಿರಿ ಕೋಟೆ ಮತ್ತು ಕೊಡಗು ಜಿಲ್ಲೆಯ ಮಲ್ಲಳ್ಳಿ ಜಲಪಾತಗಳನ್ನು ಪ್ಯಾಕೇಜ್ 1ರಲ್ಲಿ ಆಯ್ಕೆ ಮಾಡಲಾಗಿದೆ. ರೋಪ್‌ವೇ ಅಭಿವೃದ್ಧಿಗೆ ವಹಿವಾಟು ಸಲಹಾ ಸೇವೆಗಳನ್ನು ಒದಗಿಸಲು ಸುಸ್ಥಾಪಿತ ವೃತ್ತಿಪರ ಸಲಹೆಗಾರರನ್ನು ನೇಮಿಸಲು ಪ್ರವಾಸೋದ್ಯಮ ಇಲಾಖೆ ಉದ್ದೇಶಿಸಿದೆ.

ಆಯ್ಕೆಮಾಡಿದ ಸಲಹೆಗಾರರು ಮೊದಲ ಹಂತದಲ್ಲಿ ಟೆಕ್ನೋ ಎಕನಾಮಿಕ್ ಫೀಸಿಬಿಲಿಟಿ ವರದಿ (TEFR) ತಯಾರಿಕೆ ಮಾಡಲಿದ್ದಾರೆ.

• ಪೂರ್ವ ಕಾರ್ಯಸಾಧ್ಯತಾ ವರದಿಯ ತಯಾರಿ

• ಹೆರಿಟೇಜ್ ಇಂಪ್ಯಾಕ್ಟ್ ಅಸೆಸ್ಮೆಂಟ್ (ಅಗತ್ಯವಿದ್ದರೆ)

• ಸಂಚಾರ ಮತ್ತು ಬೇಡಿಕೆಯ ಮೌಲ್ಯಮಾಪನ ವರದಿ

• ಕರಡು ತಾಂತ್ರಿಕ ಕಾರ್ಯಸಾಧ್ಯತೆಯ ವರದಿ

• ಕರಡು ಯೋಜನೆಯ ಕಾರ್ಯಸಾಧ್ಯತಾ ವರದಿ

• ಅಂತಿಮ ಯೋಜನೆಯ ಕಾರ್ಯಸಾಧ್ಯತೆಯ ವರದಿ

ಎರಡನೇ ಹಂತದಲ್ಲಿ ವಹಿವಾಟು ಸಲಹಾ ಸೇವೆಗಳು

• ಪ್ರಸ್ತಾವನೆ ಮತ್ತು ಕರಡು ರಿಯಾಯಿತಿ ಒಪ್ಪಂದಕ್ಕಾಗಿ ವಿನಂತಿಯನ್ನು ಸಿದ್ಧಪಡಿಸುವುದು

• ಪೂರ್ವ ಬಿಡ್ ಸ್ಪಷ್ಟೀಕರಣ ಟಿಪ್ಪಣಿಯ ಸಲ್ಲಿಕೆ

• ಬಿಡ್ ಮೌಲ್ಯಮಾಪನ ವರದಿಯ ಸಲ್ಲಿಕೆ

• ರಿಯಾಯಿತಿ ಒಪ್ಪಂದಕ್ಕೆ ಸಹಿ ಹಾಕಲು ಬೆಂಬಲ

Karnataka tourism department is planning ropeways and cablecars at many Hill and Fort

ರೋಪ್‌ವೇಸ್ ಪ್ಯಾಕೇಜ್ 2 ರ ಅಡಿಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಗುಡ್ಡ, ಧಾರವಾಡ ಜಿಲ್ಲೆಯ ನೃಪತುಂಗ ಬೆಟ್ಟ, ಗದಗ ಜಿಲ್ಲೆಯ ಶ್ರೀ ಹೊಳಲಮ್ಮ ದೇವಸ್ಥಾನ, ಮತ್ತು ಗದಗ ಜಿಲ್ಲೆಯ ಗಜೇಂದ್ರಘಡದ ಶ್ರೀ ಕಾಲಕಾಲೇಶ್ವರ ದೇವಸ್ಥಾನದಲ್ಲಿ ರೋಪ್‌ವೇ ಅಭಿವೃದ್ಧಿಗೆ ವಹಿವಾಟು ಸಲಹಾ ಸೇವೆಗಳನ್ನು ಒದಗಿಸಲು ಸುಸ್ಥಾಪಿತ ವೃತ್ತಿಪರ ಸಲಹೆಗಾರರನ್ನು ನೇಮಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಉದ್ದೇಶಿಸಿದೆ. ಈ ಪ್ಯಾಕೇಜ್‌ನಲ್ಲಿಯೂ ಕೂಡ ಮೊದಲ ಹಂತದಲ್ಲಿ ತೆಗೆದುಕೊಂಡ ಕ್ರಮಗಳನ್ನೇ ತೆಗೆದುಕೊಳ್ಳಲಾಗುತ್ತದೆ.

ಈಗಾಗಲೇ ಈ ಮಧುಗಿರಿ ಕೋಟೆ, ಮಲ್ಲಳ್ಳಿ ಜಲಪಾತ, ಸವದತ್ತಿ ಯಲ್ಲಮ್ಮ ಗುಡ್ಡ, ನೃಪತುಂಗ ಬೆಟ್ಟ, ಹೊಳಲಮ್ಮ ದೇವಸ್ಥಾನ ಮತ್ತು ಕಾಲಕಾಲೇಶ್ವರ ದೇವಸ್ಥಾನಗಳಿಗೆ ರೋಪ್‌ವೇ/ಕೇಬಲ್‌ ಕಾರ್‌ಗಳನ್ನು ಹಾಕಬೇಕು ಎಂದು ಹಲವು ಪ್ರವಾಸಿಗರು ಸರ್ಕಾರಕ್ಕೆ ಕೇಳಿಕೊಂಡಿದ್ದರು. ಭಕ್ತರು ಕೂಡ ತಮ್ಮ ದೇವಸ್ಥಾನಗಳಿಗೆ ಈ ರೋಪ್‌ವೇ ಬರುವುದರಿಂದ ದೇವಸ್ಥಾನ ಮತ್ತಷ್ಟು ಅಭಿವೃದ್ಧಿಯಾಲಿದೆ ಎಂದು ಬೇಡಿಕೆ ಮುಂದಿಟ್ಟಿದ್ದರು. ಇನ್ನು, ಈ ಪ್ರಸ್ತಾವನೆ ಯಾವಾಗ ಅಂಗೀಕಾರವಾಗಿ, ರೋಪ್‌ವೇ ಬರಲಿದೆ ಎನ್ನುವ ಬಗ್ಗೆ ಸರ್ಕಾರವೇ ಸಂಪೂರ್ಣ ಮಾಹಿತಿ ನೀಡಬೇಕಿದೆ.

ಇನ್ನು, ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ಮಾರ್ಗದ ಪ್ರಸ್ತಾವನೆಗೆ ಪರ-ವಿರುದ್ಧವಾಗಿ ವಾದ-ವಿವಾದಗಳು ನಡೆಯುತ್ತಿದೆ. ಆದರೆ, ಮೈಸೂರಿನ ವಿಭಾಗೀಯ ಪತ್ರಾಗಾರ ಕಚೇರಿಯಲ್ಲಿ ಲಭ್ಯವಿರುವ ದಾಖಲೆಗಳ ಪ್ರಕಾರ, ಒಂದು ಶತಮಾನದ ಹಿಂದೆ, ಮೊದಲ ಮಹಾಯುದ್ಧದ ಸಮಯದಲ್ಲಿ ವಿಶ್ವ ವಿಖ್ಯಾತ ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ಮಾಡುವ ಪ್ರಸ್ತಾಪವಿತ್ತು ಎಂದು ವರದಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+