V Somanna: ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮತ್ತು ಪತ್ನಿ ಕೋಟಿ ಕೋಟಿ ಆಸ್ತಿ ಒಡೆಯರು!

ತುಮಕೂರು, ಏಪ್ರಿಲ್. 01: ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಇದೇ ವೇಳೆ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಕೆ ಮಾಡುತ್ತಿದ್ದಾರೆ. ತುಮಕೂರಿನ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮತ್ತು ಪತ್ನಿ ಶೈಲಜಾ ಆಸ್ತಿ ಸೇರಿ ಒಟ್ಟು 60.78 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿದ್ದಾರೆ.

ತುಮಕೂರು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಏಪ್ರಿಲ್ . 01 ರಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ 03 ರಂದು ಇನ್ನೊಂದು ಸೆಟ್ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈ ವೇಳೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಮತ್ತು ಕಾರ್ಯಕರ್ತರು ಒಟ್ಟಾಗಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಶಾಸಕರಾದ ಜ್ಯೋತಿ ಗಣೇಶ್, ಸುರೇಶ್ ಗೌಡ, ಸುರೇಶ್ ಬಾಬು, ಮಾಜಿ ಶಾಸಕ ಸುಧಾಕರ್ ಲಾಲ್, ಬಿಜೆಪಿ ಮುಖಂಡ ಅನಿಲ್ ಕುಮಾರ್ ಅವರು ವಿ ಸೋಮಣ್ಣಗೆ ಸಾಥ್ ನೀಡಿದ್ದಾರೆ.

Lok Sabha Election 2024 Tumakur Lok Sabha Candidate V Somanna Assets Details

ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಬಳಿಯಿರುವ ಆಸ್ತಿಯೆಷ್ಟು?

ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಸಲ್ಲಿಸಿರುವ ಆಸ್ತಿ ವಿವರಗಳ ಅಫಿಡವಿಟ್‌ ಪ್ರಕಾರ ವಿ ಸೋಮಣ್ಣ ಅವರ ಪತ್ನಿಯೇ ಶ್ರೀಮಂತೆ. ವಿ ಸೋಮಣ್ಣ ಒಟ್ಟು 17.74 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅವರ ಪತ್ನಿ ಶೈಲಜಾ ಅವರು 43.83 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ.

ಸೋಮಣ್ಣ ಅವರ 17.74 ಕೋಟಿ ಆಸ್ತಿಯಲ್ಲಿ 5.18 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದರೆ, 12.56 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 69,79,921 ರೂಪಾಯಿ ವಾರ್ಷಿಕ ಆದಾಯ ಹೊಂದಿದ್ದಾರೆ. ಕೃಷಿ ಮೂಲದಿಂದ 65 ಲಕ್ಷ ಆದಾಯ ಗಳಿಸುತ್ತಾರೆ. 8,12,563 ನಗದು ಹೊಂದಿದ್ದು, ತಮ್ಮ ಬ್ಯಾಂಕ್ ಖಾತೆಯಲ್ಲಿ 4,55,32,896 ಕೋಟಿ ಹಣವಿಟ್ಟಿದ್ದಾರೆ.

Lok Sabha Election 2024 Tumakur Lok Sabha Candidate V Somanna Assets Details

ವಿ ಸೋಮಣ್ಣ ಅವರು ತಮ್ಮ ಪತಿ ಹಾಗೂ ಮಕ್ಕಳಿಗೆ 2.45 ಕೋಟಿ ರೂಪಾಯಿ ಸಾಲ ನೀಡಿದ್ದಾರೆ. ವಿ ಸೋಮಣ್ಣ 6.44 ಕೋಟಿ ರೂ. ಸಾಲ ಮಾಡಿದ್ದಾರೆ. ಪತ್ನಿ ಶೈಲಜಾ ಅವರಿಂದ 20 ಲಕ್ಷ ರೂ. ಸಾಲ ಪಡೆದಿದ್ದಾರೆ. ಷೇರುಗಳು ಮತ್ತು ಹೂಡಿಕೆ ಮೌಲ್ಯ 9,84,105 ರೂಪಾಯಿ. ಮ್ಯೂಚುವಲ್ ಫಂಡ್‌ಗಳಲ್ಲಿ 4,38,81,625 ಕೋಟಿಯಿದೆ. ಬಾಸಾಪುರದಲ್ಲಿ ಜಮೀನು, ನಾಗದೇವನಹಳ್ಳಿ, ವಿಜಯನಗರ, ಎಂಆರ್​ಸಿಆರ್ ಲೇಔಟ್​ ಮತ್ತು ಕೆಂಗೇರಿಯಲ್ಲಿ ವಸತಿ ಕಟ್ಟಡಗಳಿವೆ.

ಪತ್ನಿ ಶೈಲಜಾ ಹೆಸರಲ್ಲಿ 43.83 ಕೋಟಿ ರೂ. ಆಸ್ತಿಯಿದೆ. ಅದರಲ್ಲಿ 16.18 ಕೋಟಿ ರೂ. ಸಾಲ ಹೊಂದಿದ್ದಾರೆ.ವಿವಿಧ ಬ್ಯಾಂಕ್‌ಗಳಲ್ಲಿ 38.96 ಲಕ್ಷ ರೂಪಾಯಿಯಿದೆ. ಮ್ಯೂಚುವಲ್ ಫಂಡ್‌ಗಳು ಹಾಗೂ ವಿಮಾ ಕಂಪನಿಗಳಲ್ಲಿ 9.84 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಪುತ್ರರಾದ ಅರುಣ್‌ ಹಾಗೂ ನವೀನ್‌ ಅವರಿಗೆ 1.70 ಕೋಟಿ ರೂ. ಸಾಲವನ್ನು ನೀಡಿದ್ದಾರೆ. 98.42 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರದ ಒಡವೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+