ಸೋಮಣ್ಣ ಪರ ಪ್ರಚಾರ ಮಾಡಲ್ಲ, ಬೇರೆ ಕಡೆ ಹೋಗುವ ಯೋಚನೆ ನಿಜ- ಮಾಧುಸ್ವಾಮಿ
ತುಮಕೂರು, ಮಾರ್ಚ್ 15: ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ಕರ್ನಾಟಕದ ಬಹುತೇಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪೈಕಿ ತುಮಕೂರು ಲೋಕಸಭಾ ಕ್ಷೇತ್ರದಿಂದ ವಿ.ಸೋಮಣ್ಣಗೆ ಟಿಕೆಟ್ ನೀಡಲಾಗಿದೆ. ಹೈ ಕಮಾಂಡ್‌ನ ಈ ನಿರ್ಧಾರದಿಂದ ಕ್ಷೇತ್ರದಲ್ಲಿ ಅಸಮಾಧಾನ ಆರಂಭವಾಗಿದ್ದು, ವಿ.ಸೋಮಣ್ಣ ಪರ ಪ್ರಚಾರಕ್ಕೆ ಹೋಗಲ್ಲ ಎಂದು ತುಮಕೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿದ ಅವರು, ತುಮಕೂರು ಲೋಕಸಭಾ ಕ್ಷೇತ್ರದಿಂದ ಸೋಮಣ್ಣಗೆ ಟಿಕೆಟ್ ಕೊಟ್ಟರೆ ಅವರ ಪರವಾಗಿ ಪ್ರಚಾರ ಮಾಡಲ್ಲ ಎಂದು ನಿರ್ಧರಿಸಿದ್ದೆ. ಸೋಮಣ್ಣ ಅಂತಲ್ಲ, ಹೊರಗಿನವರಿಗೆ ಯಾರಿಗೂ ಕೊಟ್ಟರೂ ನಾನು ಮಾಡಲು ಸಿದ್ಧನಿಲ್ಲ. ಹೀಗಾಗಿ ಸೋಮಣ್ಣ ಪರವಾಗಿ ನಾವು ಪ್ರಚಾರ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಯಾರಿಗೂ ಕೊಟ್ಟಿದ್ದರೂ ನಾನು ಅವರ ಪರವಾಗಿ ಪ್ರಚಾರ ಮಾಡುತ್ತಿದ್ದೆ. ನಮ್ಮ ಕಾರ್ಯಕರ್ತರು ತಟಸ್ಥವಾಗಿ ಇರೋಣ ಎಂದು ಹೇಳಿದರೆ ತಟಸ್ಥವಾಗಿ ಇರುತ್ತೇನೆ. ನಮಗೆ ಅನ್ಯಾಯ ಮಾಡಿದವರಿಗೆ ತಕ್ಕ ಉತ್ತರ ಕೊಡಬೇಕು ಅಂದರೆ ಕೊಡುತ್ತೇವೆ. ಬೇರೆ ಕಡೆ ಹೋಗುವ ಬಗ್ಗೆ ಯೋಚನೆ ಮಾಡಿದ್ದು ನಿಜ. ಮುಂದಿನ ನಿರ್ಧಾರವನ್ನು ಶೀಘ್ರದಲ್ಲೇ ತಿಳಿಸುತ್ತೇವೆ ಎಂದು ಹೇಳಿದ್ದಾರೆ.
ಎಲೆಕ್ಷನ್ ಕಾವು ಬರಲಿ, ಎಲೆಕ್ಷನ್ ಕ್ಯಾಲೆಂಡರ್ ಹಾಕಿದ ಮೇಲೆ ಸಭೆ ಮಾಡುತ್ತೇವೆ. ಅಲ್ಲಿಯವರೆಗೆ ಕಾರ್ಯಕರ್ತರ ಸಭೆ ಮಾಡಲ್ಲ.
ನನ್ನಷ್ಟಕ್ಕೆ ನಾನು ನಿರ್ಧಾರ ತಗೊಂಡು ಸ್ವತಂತ್ರವಾಗಿ ಸ್ಪರ್ಧೆ ಮಾಡೋಕೆ ಆಗಲ್ಲ. ಎಲ್ಲ ಕ್ಷೇತ್ರದ ಶಾಸಕರು, ಹಾಗೂ ಸೋತಿರುವ ಶಾಸಕರ ಅಭಿಪ್ರಾಯ ತೆಗೆದುಕೊಳ್ಳಬೇಕು. 1996, 1997 ರಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ಗೆದಿದ್ದೆ. ಕ್ಷೇತ್ರದ ಜನ ನನ್ನನ್ನು ಉಳಿಸಿಕೊಂಡಿದ್ದರು ಎಂದು ಹೇಳಿದರು.

ಸೋಮಣ್ಣ ಅವಕಾಶವಾದಿ
ಸೋಮಣ್ಣ ಅವಕಾಶವಾದಿ ಅವರು ಅವಕಾಶ ಕೇಳಿದ್ದಾರೆ. ಅವರ ಮೇಲೆ ನಮಗೇನು ಬೇಸರ ಇಲ್ಲ. ನಂಬಿಸಿ ಕೈಬಿಟ್ಟ ಯಡಿಯೂರಪ್ಪನ ಮೇಲೆ ನಮಗೆ ಬೇಸರ. ನಾನು ಸೋಮಣ್ಣನನ್ನು ಮನೆಗೆ ಬರಬೇಡಿ ಅಂತ ಹೇಳುವಷ್ಟು ಕೆಟ್ಟ ಮನುಷ್ಯ ಅಲ್ಲ. ನಾನು ಸೆಟಲ್ ಆಗಿಲ್ಲ, ನನ್ನ ಮನಸ್ಥಿತಿ ಸರಿಯಾಗಿಲ್ಲ. ಈ ಟೈಮ್‌ನಲ್ಲಿ ಬರೋದು ಬೇಡ, ನಾಲ್ಕೈದು ದಿನ ಟೈಮ್ ಕೊಡು ಅಂತ ಹೇಳಿದ್ದೀನಿ. ಈಗ ನೀನು ನಮ್ಮ ಮನೆಗೆ ಬರೋದು ಸೀಟ್ಟಲ್ಲಿ ಏನಾದ್ರು ನಾನು ಅನ್ನೋದು, ಅದು ಬೇರೆ ರೀತಿಯಾಗಿ ಪ್ರಚಾರ ಆಗೋದು ಬೇಡ. ನಾನು ಯಾವುದೇ ಮಾತುಕತೆಗೆ ರೆಡಿ ಇಲ್ಲ ಎಂದು ಹೇಳಿರುವುದಾಗಿ ತಿಳಿಸಿದರು.
ಯಡಿಯೂರಪ್ಪ ಅವರಿಗೆ ಬೇಕಾದ ಎರಡು ಮೂರು ಕ್ಷೇತ್ರದಲ್ಲಿ ಹಠ ಮಾಡಿ ತೆಗೆದುಕೊಂಡಿದ್ದಾರೆ. ನಮಗೆ ಯಾಕೆ ಹಠ ಮಾಡಿ ಸೀಟ್ ಕೊಡಿಸಲಿಲ್ಲ ಅನ್ನೋದೇ ನಮ್ಮ ಅಸಮಾಧಾನ. ಸೋಮಣ್ಣ ರಾಜ್ಯಸಭೆ ಟಿಕೆಟ್‌ಗಾಗಿ ಡೆಲ್ಲಿ ತನಕ ಹೋಗಿ ಓಡಾಡಿಕೊಂಡು ಬಂದರು. ನಮದ್ದೇನು ಅಭ್ಯಂತರ ಇರಲಿಲ್ಲ. ರಾಜ್ಯಸಭೆ ಟಿಕೆಟ್ ಕೈತಪ್ಪಿದೆ ಅಂದ್ರೆ ಎಲ್ಲಿ ಬೇಕಾದ್ರು ಟಿಕೆಟ್ ಕೊಡಬಹುದಾ..? ಅವರೇನು ಈ ಕ್ಷೇತ್ರದ ಸಂಬಂಧಿಕರಾ, ನೆಂಟ್ರಾ.? ನಾಳೆ ಏನಾದ್ರು ಗುಜರಾತ್‌ನಿಂದ ಕರೆದುಕೊಂಡು ತಂದು ನಿಲ್ಲಿಸಿದ್ರೆ ವೋಟ್ ಹಾಕೋಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ಸೋಮಣ್ಣ ಸೋತಿದ್ದಾರೆ ಅಂದ್ರೆ ನಾನು ಸೋತಿಲ್ವಾ..? ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡು ಅಂತ ಸೋಮಣ್ಣಗೆ ಹೇಳಿದವರು ಯಾರು..?
ಗೋವಿಂದರಾಜ ನಗರದಲ್ಲಿ ನನಗೆ ಗೆಲ್ಲೋಕೆ ಆಗಲ್ಲ. ಚಾಮರಾಜನಗರ ಉಸ್ತುವಾರಿ ಬೇಕು ಅಂತ ಹಠ ಮಾಡಿ ತಗೊಂಡು ಹೋಗಿ ಜಾಗ ಮಾಡಿಕೊಂಡ. ಯಾರೋ ಹುಡುಗನಿಗೆ ಕೊಟ್ಟಿದ್ರೆ ನಿಲ್ಲೋನು, ಗೆಲ್ಲೋನು. ನಮಗಿಂತ ಜಿಲ್ಲೆಯಲ್ಲಿ ಒಳ್ಳೆಯವರಿದ್ರೆ ಅವರಿಗೆ ಕೊಡಿ
ಸೋಮಣ್ಣಗೆ ಯಾಕೆ ಕೊಡ್ತೀರಾ..? ತುಮಕೂರು ಇತಿಹಾಸದಲ್ಲಿ ಹೊರಗಡೆ ಅವರು ಗೆದ್ದಿಲ್ಲ ಎಂದು ಮಾಧುಸ್ವಾಮಿ ಹೇಳಿದ್ದಾರೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ












Click it and Unblock the Notifications