ಸಿದ್ದು ಸೋಲಿಸಿ ರಾಜ್ಯ ಉಳಿಸಿ : ಭದ್ರಾವತಿ ಯುವಕನಿಂದ ಸೈಕಲ್ ಯಾತ್ರೆ!
Recommended Video

ಶಿವಮೊಗ್ಗ, ಮೇ 08 : 'ಸಿದ್ದು ಸೋಲಿಸಿ ರಾಜ್ಯ ಉಳಿಸಿ' ಎಂದು ಯುವಕನೊಬ್ಬ ಸೈಕಲ್ ಯಾತ್ರೆ ಆರಂಭಿಸಿದ್ದಾನೆ. ಶಿವಮೊಗ್ಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆಗೆ ಸ್ಪರ್ಧಿಸಿರುವ ಚಾಮುಂಡೇಶ್ವರಿ ಕ್ಷೇತ್ರದ ತನಕ ಯಾತ್ರೆ ನಡೆಯಲಿದೆ.
ಭದ್ರಾವತಿ ತಾಲೂಕಿನ ಅರಹತೊಳಲು ಗ್ರಾಮದ ಯುವಕ ಪ್ರವೀಣ್ ಡಿ.ಬಂಡೆ ಸೈಕಲ್ ಯಾತ್ರೆ ಕೈಗೊಂಡಿರುವ ಯುವಕ. ಪ್ರವೀಣ್ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಅಭಿಮಾನಿ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸುವಂತೆ ಸೈಕಲ್ ಯಾತ್ರೆ ಕೈಗೊಂಡಿದ್ದಾನೆ. 'ಸಿದ್ದು ಸೋಲಿಸಿ ರಾಜ್ಯ ಉಳಿಸಿ' ಎಂಬ ಹೆಸರಿನಲ್ಲಿ ಈ ಯಾತ್ರೆಯನ್ನು ನಡೆಸುತ್ತಿದ್ದಾನೆ.

ಶಿವಮೊಗ್ಗದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ತನಕ ಪ್ರವೀಣ್ ಸೈಕಲ್ ಯಾತ್ರೆ ನಡೆಸಲಿದ್ದಾನೆ. ಸುಮಾರು 280 ಕಿ.ಮೀ.ದೂರವನ್ನು ಮೂರು ದಿನದಲ್ಲಿ ತಲುಪುವ ಗುರಿಯನ್ನು ಪ್ರವೀಣ್ ಹೊಂದಿದ್ದಾನೆ.
ಸಿದ್ದರಾಮಯ್ಯ ವಿರುದ್ಧ ಯಾತ್ರೆ : ಪ್ರವೀಣ್ ಶಿವಮೊಗ್ಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಕಣಕ್ಕಿಳಿದಿರುವ ಚಾಮುಂಡೇಶ್ವರಿ ತನಕ ಯಾತ್ರೆ ನಡೆಸುತ್ತಿದ್ದಾರೆ. ರೈತರ ಆತ್ಮಹತ್ಯೆಯನ್ನು ತಡೆಯಲು ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಆದ್ದರಿಂದ, ಅವರನ್ನು ಸೋಲಿಸಿ ಎಂದು ಸೈಕಲ್ ಯಾತ್ರೆ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 3800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತಕ್ಕಾಗಿ ಲಿಂಗಾಯತ ಧರ್ಮವನ್ನು ಒಡೆದಿದ್ದಾರೆ. ಆದ್ದರಿಂದ, ಅವರು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಬಾರದು ಎಂಬುದು ಪ್ರವೀಣ ಅವರ ಒತ್ತಾಯವಾಗಿದೆ.












Click it and Unblock the Notifications