Geetha Shivarajkumar: ಕೈ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ನಾಮಪತ್ರ ಸಲ್ಲಿಕೆ- ಯಾರೆಲ್ಲಾ ಸಾಥ್‌ ನೀಡಿದ್ರು?

ಶಿವಮೊಗ್ಗ, ಏಪ್ರಿಲ್‌, 15: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಕಾಂಗ್ರೆಸ್‌ನಿಂದ ಗೀತಾ ಶಿವರಾಜ್‌ ಕುಮಾರ್‌ ಕಣಕ್ಕಿಳಿದಿದ್ದು, ಇಂದು ಅವರು (ಏಪ್ರಿಲ್‌ 15) ಡಿಸಿ ಕಚೇರಿಯಲ್ಲಿ ನಾಪಪತ್ರ ಸಲ್ಲಿಸಿದ್ದಾರೆ. ಹಾಗಾದರೆ ಈ ವೇಳೆ ಅವರಿಗೆ ಯಾರೆಲ್ಲ ಸಾಥ್‌ ನೀಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಗೀತಾ ಶಿವರಾಜ್ ಕುಮಾರ್ ಅವರು, ನಾಮಪತ್ರ ಸಲ್ಲಿಕೆಗೂ ಮುನ್ನ ಸಿಗಂದೂರು ಚೌಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ಬಿ.ಫಾರಂಗೆ ಪೂಜೆ ಸಲ್ಲಿಸಿದರು. ಅಲ್ಲದೆ, ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು.

Geetha Shivarajkumar Congress candidate submit nomination paper in Shivamogga

ನಾಪಮತ್ರ ಸಲ್ಲಿಕೆ ವೇಳೆ ಗೀತಾ ಅವರಿಗೆ ಪತಿ ಶಿವರಾಜ್​ಕುಮಾರ್​, ಸಚಿವ ಮಧು ಬಂಗಾರಪ್ಪ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಮಂಜುನಾಥ್ ಭಂಡಾರಿ ಸಾಥ್ ನೀಡಿದ್ದಾರೆ.

ಇನ್ನು ಭರ್ಜರಿ ಪ್ರಚಾರ ಮಾಡುತ್ತಿರುವ ಗೀತಾ ಶಿವರಾಜ್​ಕುಮಾರ್ ಅವರು, ಈ ಬಾರಿ ಗೆದ್ದೆ ಗೆಲ್ಲುವುದಾಗಿ ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ ಪತ್ನಿ ಪರ ಹ್ಯಾಟ್ರಿಕ್ ಹೀರೋ ಶಿವಣ್ಣ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.

ಶಿವಮೊಗ್ಗದಲ್ಲಿ ಪತ್ನಿ ಗೀತಾ ಪರ ಮತಯಾಚಿಸಿದ ಶಿವರಾಜ್​ಕುಮಾರ್​, ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು ಎನ್ನುವ ಮೂಲಕ ನನ್ನ ಹೆಂಡತಿಯನ್ನು ಗೆಲ್ಲಿಸಿ ಎಂದಿದ್ದಾರೆ.

ಗೀತಾ ಗೆದ್ದರೆ ನಾನೂ ಕೆಲಸ ಮಾಡಿಸುತ್ತೇನೆ. ನನ್ನ ಹೆಂಡತಿಗೆ ನಾನೇ ಗ್ಯಾರಂಟಿ, ನನ್ನ ಹೆಂಡತಿ ಕೆಲಸ ಮಾಡೇ ಮಾಡುತ್ತಾರೆಂದು ನಾನು ಗ್ಯಾರಂಟಿ ಕೊಡುತ್ತೇನೆ ಎಂದರು.

ಹೆಣ್ಣುಮಕ್ಕಳು ಎಲ್ಲಾ ರಂಗದಲ್ಲೂ ಇದ್ದಾರೆ. ಕೂಲಿ ಕೆಲಸ ಮಾಡುವುದರಿಂದ ಹಿಡಿದು ಫ್ಲೈಟ್ ಓಡಿಸುವವರೆಗೂ ಎಲ್ಲಾ ಕ್ಷೇತ್ರಗಳಲ್ಲೂ ಹೆಣ್ಣು ಮಕ್ಕಳು ಕೆಲಸ ಮಾಡ್ತಿದ್ದಾರೆ. ಇನ್ನು ಶಿವಮೊಗ್ಗದಲ್ಲಿ ಸ್ಪರ್ಧಿಸಿರುವ ಗೀತಾಗೆ ಇಲ್ಲಿ ಎಲ್ಲಿದೆ ನಿಮ್ಮ ಮನೆ ಅಂತಾ ಕೇಳುತ್ತಿದ್ದಾರೆ. ಗೀತಾ ಹುಟ್ಟಿ ಬೆಳೆದಿದ್ದು ಇಲ್ಲೇ, ಇಲ್ಲೇ ಹುಟ್ಟಿ ಬೆಳೆದ ಮೇಲೆ ಅವರ ಮನೆಯೂ ಇಲ್ಲೇ ಇರುತ್ತದೆ ಎಂದು ಶಿವರಾಜ್​ ಕುಮಾರ್​ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+