ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ಹುದ್ದೆಯ ವಿವರಗಳು
ಶಿವಮೊಗ್ಗ, ಏಪ್ರಿಲ್ 23: ಶಿವಮೊಗ್ಗದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯುತ್ತಿದೆ. ಆಸಕ್ತ ಮಾಜಿ ಸೈನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.
ಎನ್‌ಸಿಸಿಯು ದೇಶಾದ್ಯಂತ ತನ್ನ ಸಂಖ್ಯಾಬಲವನ್ನು ವಿಸ್ತರಿಸುವ ಉದ್ದೇಶದಿಂದ 20 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಶಿವಮೊಗ್ಗ ಘಟಕವು 5 ಹವಾಲ್ದಾರ್ ಹಾಗೂ 3 ಜೆಸಿಓ ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಿದೆ.

ಈ ಹುದ್ದೆಗಳಿಗೆ ಮಾಜಿ ಸೈನಿಕರಿಗೆ ಮಾತ್ರ ಅವಕಾಶವಿದ್ದು, ಸೇನೆಯಿಂದ ನಿವೃತ್ತಿ ಪಡೆದು 2 ವರ್ಷ ಮೀರಿರಬಾರದು ಹಾಗೂ ಸೇನೆಯಲ್ಲಿ ಯಾವುದೇ ಒಂದು ವಿಷಯ ಕುರಿತ ಸೇನಾ ಕೋರ್ಸ್‍ನಲ್ಲಿ ತರಬೇತಿ ಪಡೆದಿರಬೇಕು (ನಿಗದಿತ ಕೋರ್ಸ್‍ಗಳ ಪಟ್ಟಿಯು ಎನ್.ಸಿ.ಸಿ ಘಟಕದಲ್ಲಿ ಲಭ್ಯವಿರುತ್ತದೆ).
ಅಭ್ಯರ್ಥಿಗಳು ಸೈನ್ಯದಲ್ಲಿ ದುರ್ನಡತೆ ಸಲುವಾಗಿ ಮತ್ತು ಯಾವುದೇ ವೈದ್ಯಕೀಯ ಕಾರಣಗಳಿಂದ ಸೈನ್ಯದಿಂದ ಬಿಡುಗಡೆಗೊಂಡಿರಬಾರದು ಹಾಗೂ ಸೇನೆಯಲ್ಲಿ ತಮ್ಮ ಪದನಾಮಕ್ಕೆ ತಕ್ಕಂತೆ ಪೂರ್ಣ ಸೇವೆಯನ್ನು ಸಲ್ಲಿಸಿ ನಿವೃತ್ತಿಯನ್ನು ಹೊಂದಿರಬೇಕು.
ಆಸಕ್ತ ಮಾಜಿ ಸೈನಿಕರು ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಶಿವಮೊಗ್ಗದ 20 ಕರ್ನಾಟಕ ಬೆಟಾಲಿನ್ ಎನ್‌ಸಿಸಿ ಘಟವನ್ನು ಸಂಪರ್ಕಿಸುವುದು. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗದ 20 ಕರ್ನಾಟಕ ಬೆಟಾಲಿನ್ ಎನ್‌ಸಿಸಿ ಘಟಕವನ್ನು ಖುದ್ದಾಗಿ ಅಥವಾ ಕಛೇರಿಯ ದೂರವಾಣಿ ಸಂಖ್ಯೆ 08182-240296 ಮೂಲಕ ಸಂಪರ್ಕಿಸುವಂತೆ ತಿಳಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕರ್ನಾಟಕ ಲೋಕಸೇವಾ ಆಯೋಗದವರು ನಡೆಸಲಿರುವ ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳ ತರಬೇತಿಯನ್ನು ಮೈಸೂರಿನ ಕರಾಮುವಿ ಕೇಂದ್ರ ಕಚೇರಿಯಲ್ಲಿ ನಡೆಸಲಾಗುತ್ತದೆ.
ಆಸಕ್ತರ ಅಭ್ಯರ್ಥಿಗಳು ಏಪ್ರಿಲ್ 30ರೊಳಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು 0821-2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.












Click it and Unblock the Notifications