KS Eshwarappa V/s BJP: ಬಿಜೆಪಿಯಿಂದ ಆರು ವರ್ಷ ಉಚ್ಚಾಟನೆಗೊಂಡ ಈಶ್ವರಪ್ಪ ಹೇಳಿದ್ದೇನು?

ಶಿವಮೊಗ್ಗ, ಏಪ್ರಿಲ್. 23: ಬಿಜೆಪಿ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ನಡುವಿನ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಕೆಎಸ್ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದ ಬಿಜೆಪಿ ಕೊನೆಗೂ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಆದೇಶಿಸಿದೆ. ಉಚ್ಚಾಟನೆಗೊಂಡ ಬಳಿಕ ಈಶ್ವರಪ್ಪ ಹೇಳಿದ್ದೇನು ಎಂಬುದು ಇಲ್ಲಿದೆ.

"ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು (6) ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ" ಎಂದು ಬಿಜೆಪಿಯ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಸುತ್ತೋಲೆ ಹೊರಡಿಸಿದ್ದಾರೆ.

Lok Sabha Election 2024 KS Eshwarappa Reaction After Expel From BJP

ಯಾವುದೇ ಉಚ್ಚಾಟನೆಗೆ ಹೆದರುವುದಿಲ್ಲ!

ಬಳಿಕ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, "ನಾನು ಯಾವುದೇ ಉಚ್ಚಾಟನೆಗೆ ಹೆದರುವುದಿಲ್ಲ. ನನಗಿನ್ನು ಉಚ್ಚಾಟನೆ ಪತ್ರ ಸಿಕ್ಕಿಲ್ಲ. ಮಾಧ್ಯಮಗಳ ಸುದ್ದಿಯಿಂದ ವಿಷಯ ಗೊತ್ತಾಗಿದೆ. ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿಗೆ ಹೋಗುತ್ತೇನೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಯೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ.

"ಅಪ್ಪ, ಮಕ್ಕಳು ಆರಂಭದಿಂದ ಸುಳ್ಳು ಹೇಳುತ್ತಾ ಬಂದಿದ್ದಾರೆ. ಅವರು ಷಡ್ಯಂತ್ರ ಮಾಡುತ್ತಾ ಬಂದಿದ್ದಾರೆ. ಅವರು ಯಾವ ಮುಖ ಇಟ್ಟುಕೊಂಡು ಉತ್ತರ ನೀಡುತ್ತಾರೆ. ಅವರು ಪ್ರಕ್ರಿಯೆ ನೀಡಲಿ, ನಂತರ ನಾನು ಅವರಿಗೆ ಸರಿಯಾದ ಉತ್ತರ ನೀಡುತ್ತೇನೆ" ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು, ತಮಗೆ ರೈನ ಚಿಹ್ನೆ ಸಿಕ್ಕಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಐದು ಬಾರಿ ನಾನು ಕಲಮದ (ಬಿಜೆಪಿ ಚಿಹ್ನೆ) ಗುರುತಿನಿಂದ ಸ್ಪರ್ಧೆ ಮಾಡಿದ್ದೇನೆ. ಇದೆ ಮೊದಲ ಬಾರಿಗೆ ರೈತನ ಚಿಹ್ನೆ ಬಂದಿರುವುದು ಖುಷಿಯಾಗಿದೆ. ನನಗೆ ಎಲ್ಲರ ಬೆಂಬಲವಿದೆ. ಈ ಕ್ಷೇಥ್ರದಿಂದ ನಾನು ಗೆದ್ದೆ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Lok Sabha Election 2024 KS Eshwarappa Reaction After Expel From BJP

ಚುನಾವಣೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದೆ. ಈಗ ನನ್ನ ಮಾತಿಗೆ ಬದ್ಧವಾಗಿ ನಿಂತಿದ್ದೇನೆ. ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆ ದಿನ ನಾನು ಇಲ್ಲೇ ಇದ್ದೇನೆ. ಕಣದಿಂದ ಹಿಂದೆ ಸರಿದಿಲ್ಲ. ನಾಳೆಯಿಂದ ಮತ್ತಷ್ಟು ಭರ್ಜರಿಯಾಗಿ ಚುನಾವಣಾ ಪ್ರಚಾರ ನಡೆಸುತ್ತೇನೆ ಎಂದು ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಏಪ್ರಿಲ್​ 22ಕ್ಕೆ ಕೆ ಎಸ್ ಈಶ್ವರಪ್ಪಗೆ ಡೆಡ್‌ ಲೈನ್ ಕೊಟ್ಟಿದ್ದ ಬಿಜೆಪಿ ಮಾತಿನಂತೆಯೇ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ. ತನ್ನ ಮಗ ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಕೆಎಸ್ ಈಶ್ವರಪ್ಪ ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ತನ್ನ ಮಗನಿಗೆ ಟಿಕೆಟ್ ಕೈತಪ್ಪಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಾರಣ ಎಂದು ಆರೋಪಿಸಿದ್ದಾರೆ. ಶಿವಮೊಗ್ಗದಲ್ಲಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ಬಿಜೆಪಿ ಅಭ್ಯರ್ಥಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+