ಗೀತಾ ಶಿವರಾಜ್ ಕುಮಾರ್ ಒಟ್ಟು ಆಸ್ತಿ ಎಷ್ಟು? ಅಫಿಡ್‌ವಿಟ್‌ನಲ್ಲಿ ಏನಿದೆ? ಅಂಕಿ ಸಂಖ್ಯೆ
ಶಿವಮೊಗ್ಗ, ಏಪ್ರಿಲ್ 16: ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಸೋಮವಾರ ನಾಮಪತ್ರ ಸಲ್ಲಿಸಿರುವ ಅವರು, ತಮ್ಮ ಒಟ್ಟು ಆಸ್ತಿ ಕುರಿತು ಘೋಷಿಸಿದ್ದಾರೆ. ಹಾಗಾದರೆ ಗೀತಾ ಶಿವರಾಜಕುಮಾರ್ ಕುಟುಂಬದ ಒಟ್ಟು ಆಸ್ತಿ ಎಷ್ಟು, ಅಫಿಡ್‌ವಿಟ್‌ನಲ್ಲಿ ಏನಿದೆ? ಎಂಬ ಮಾಹಿತಿ ಇಲ್ಲಿದೆ.
ಶಿವಮೊಗ್ಗದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರು ಪತಿ ಜೊತೆಗೆ ಒಟ್ಟು 89.31 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ.

ಚಿನ್ನಾಭರಣಗಳ ಮೌಲ್ಯದ ವಿವರ
ದಾಖಲೆಗಳ ಗೀತಾ ಶಿವರಾಜ್‌ಕುಮಾರ್ ಅವರ ಆಸ್ತಿಯಲ್ಲಿ ಒಟ್ಟು 11,542 ಗ್ರಾಂ ತೂಕದ ವಜ್ರ ಮತ್ತು ಚಿನ್ನಾಭರಣಗಳು ಮತ್ತು 3.50 ಕೋಟಿ ರೂ. ಅಫಿಡವಿಟ್‌ನಲ್ಲಿ ಬಹಿರಂಗಪಡಿಸಲಾಗಿದೆ. ಗೀತಾ ಅವರು ಒಟ್ಟು 40.04 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಇದರಲ್ಲಿ ಪತಿ ಶಿವ ರಾಜ್‌ಕುಮಾರ್ ಅವರ ಆಸ್ತಿ ಒಟ್ಟು 49 ಕೋಟಿ ರೂಪಾಯಿ ಎಂದು ಉಲ್ಲೇಖಿಸಲಾಗಿದೆ.
ಪುತ್ರಿಯ ಬ್ಯಾಂಕ್ ಬ್ಯಾಲೆನ್ಸ್ 100 ರೂ.
ಶಿವಣ್ಣ-ಗೀತಾ ದಂಪತಿಗಳ ಪುತ್ರಿ ನಿವೇದಿತಾ ಅವರು ಬ್ಯಾಂಕ್ ಬ್ಯಾಲೆನ್ಸ್ ಕೇವಲ 100 ರೂಪಾಯಿ ಇದೆ. ಆದರೆ, ಅವರು ತಮ್ಮ ಸ್ವಂತ ನಿರ್ಮಾಣ ಸಂಸ್ಥೆ 'ಶ್ರೀ ಮುತ್ತು' ಸಿನಿ ಸರ್ವಿಸಸ್‌ಗೆ 1 ಲಕ್ಷ ರೂಪಾಯಿ ಸಾಲ ಒದಗಿಸಿದ್ದಾರೆ. ಅಲ್ಲದೇ 2022-23ನೇ ಹಣಕಾಸು ವರ್ಷದಲ್ಲಿ ಗೀತಾ ವಾರ್ಷಿಕ ಆದಾಯ 1.48 ಕೋಟಿ ರೂ. ಎಂದು ಘೋಷಿಸಲಾಗಿದೆ.
ಗೀತಾ-ಶಿವಣ್ಣ ವಾರ್ಷಿಕ ಆದಾಯದ ಮಾಹಿತಿ
ಗೀತಾ ಶಿವರಾಜ್ ಕುಮಾರ್ ಅವರು, 2018-22ರವರೆಗೆ ವಾರ್ಷಿಕ ಆದಾಯ ಗಳಿಕೆಯು 29 ಲಕ್ಷದಿಂದ 33.93 ಲಕ್ಷ ರೂ.ಗಳಾಗಿದೆ. ಇದೇ ವಾರ್ಷಿ ಆದಾಯ 2022-23ರಲ್ಲಿ 1.48 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.

ಇತ್ತ ಪತಿ ಶಿವರಾಜ್ ಕುಮಾರ್ ಅವರು 2022-23ರಲ್ಲಿ ವಾರ್ಷಿಕವಾಗಿ 2.97 ಕೋಟಿ ರೂ. ಆದಾಯ ಗಳಿಸುತ್ತಿದ್ದರು. ಇವರು 2018-19ರಲ್ಲಿ 2.20 ಕೋಟಿ ರೂ., 2019-20 ಸಾಲಿನಲ್ಲಿ ವಾಷಿರ್ಕ ರೂ 1.87 ಕೋಟಿ ಆದಾಯ ಪಡೆದಿದ್ದಾರೆ. ನಂತರ 2020-21 ರಲ್ಲಿ ರೂ 97.98 ಲಕ್ಷ, ಮತ್ತು 2021-22 ರಲ್ಲಿ ರೂ 1.27 ಕೋಟಿ ವಾರ್ಷಿಕ ಆದಾಯ ಸಂಗ್ರಹ ಮಾಡಿದ್ದಾಗಿ ನಾಮಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಗೀತಾ ಶಿವರಾಜ್ ಕುಮಾರ್ ಬಳಿ 3 ಲಕ್ಷ ರೂಪಾಯಿ ನಗದು, ಶಿವಣ್ಣ ಬಳಿ 22.58 ಲಕ್ಷ ರೂಪಾಯಿ ಇದೆ ಎಂದು ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಕಾರುಗಳು ಮೌಲ್ಯ ಎಷ್ಟು?
ಶಿಮವೊಗ್ಗದ ಕೈ ಅಭ್ಯರ್ಥಿ ಗೀತಾ ಅವರು 1.07 ಕೋಟಿ ಮೌಲ್ಯದ ಟೊಯೊಟಾ ಹೈಬ್ರಿಡ್ ಕಾರು, ಪತಿ ಶಿವ ರಾಜ್‌ಕುಮಾರ್ ಅವರು ಟೊಯೊಟಾ ಫಾರ್ಚುನರ್, ಮಾರುತಿ ಎರ್ಟಿಗಾ ಮತ್ತು ವೋಲ್ವೊ ಎಸ್ 90 ಕಾರುಗಳ ಒಡೆಯರಾಗಿದ್ದಾರೆ. ಈ ದಂಪತಿ ಹೆಸರಿನಲ್ಲಿ ಕನಕಪುರ ತಾಲೂಕಿನ ಚಾಕನಹಳ್ಳಿಯಲ್ಲಿ 11 ಎಕರೆ ಕೃಷಿ ಭೂಮಿ ಇದೆ.
ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಕೆ
ಗೀತಾ ಶಿವರಾಜ್ ಕುಮಾರ್ ಅವರು ಸೋಮವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಬೃಹರ್ ಮೆರವಣಿಗೆ ನಡೆಸಿದು. ಕಾಂಗ್ರೆಸ್ ನಾಯಕರು, ಸ್ಥಳಿಯ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ಸಮೇತರಾಗಿ ಬಂದು ಅವರು ಚುನಾವಣಾಧಿಕಾರಿಗಳಲ್ಲಿ ನಾಮಪತ್ರ ಸಲ್ಲಿಸಿದರು.
ಗೀತಾ ಅವರ ಜೊತೆ ಪತಿ ಶಿವರಾಜ್‌ಕುಮಾರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಹೋದರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಶಿವಮೊಗ್ಗ ಕೈ ಅಭ್ಯರ್ಥಿಯಿಂದ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಉಮೇದುವಾರಿಕೆ ಪತ್ರ ಸ್ವೀಕರಿಸಿದರು.












Click it and Unblock the Notifications