ಸೋಮವಾರ ಈ ಚಿಕ್ಕ ಪರಿಹಾರ ಮಾಡಿದರೆ ಶಿವನ ಕೃಪೆ! 12 ರಾಶಿಗಳಿಗೆ ಇಂದಿನ ಅದೃಷ್ಟದ ಸಲಹೆಗಳು

ಜ್ಯೋತಿಷ್ಯದ ಪ್ರಕಾರ ಸೋಮವಾರವು ಚಂದ್ರನ ದಿನ. ಚಂದ್ರನು ಮನಸ್ಸು, ಭಾವನೆಗಳು, ನೆಮ್ಮದಿ ಮತ್ತು ಆಲೋಚನೆಗಳನ್ನು ನಿಯಂತ್ರಿಸುವ ಗ್ರಹ ಎಂದು ನಂಬಲಾಗಿದೆ. ಇದೇ ದಿನವು ಪರಮಶಿವನಿಗೂ ಸಮರ್ಪಿತವಾಗಿದೆ. ಆದ್ದರಿಂದ ಸೋಮವಾರ ಕೆಲವು ಸರಳ ಪರಿಹಾರಗಳನ್ನು ಮಾಡಿದರೆ ಮನಸ್ಸಿಗೆ ಶಾಂತಿ ಸಿಗುತ್ತದೆ, ಕುಟುಂಬದಲ್ಲಿ ಸುಖ-ಸಮೃದ್ಧಿ ಹೆಚ್ಚುತ್ತದೆ ಮತ್ತು ಜೀವನದಲ್ಲಿರುವ ಅಡೆತಡೆಗಳು ಕಡಿಮೆಯಾಗುತ್ತವೆ.

ಮೇಷ

ಮೇಷ ರಾಶಿಯವರು ಇಂದು ಶಿವಲಿಂಗಕ್ಕೆ ನೀರಿನೊಂದಿಗೆ ಸ್ವಲ್ಪ ಹಾಲನ್ನು ಅರ್ಪಿಸಿ "ಓಂ ನಮಃ ಶಿವಾಯ" ಮಂತ್ರವನ್ನು 108 ಬಾರಿ ಜಪಿಸಿದರೆ ಶುಭವಾಗುತ್ತದೆ. ಇಂದು ಅನಗತ್ಯ ವಾದ-ವಿವಾದಗಳಿಂದ ದೂರವಿರುವುದು ಒಳ್ಳೆಯದು. ನಿಮ್ಮ ಅದೃಷ್ಟದ ಬಣ್ಣ ಬಿಳಿ ಮತ್ತು ಅದೃಷ್ಟದ ಸಂಖ್ಯೆ 2.

Monday Remedies for 12 Zodiac Signs

ವೃಷಭ

ವೃಷಭ ರಾಶಿಯವರು ಇಂದು ಬಡವರಿಗೆ ಹಾಲು ಅಥವಾ ಅಕ್ಕಿಯನ್ನು ದಾನ ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ. ಬಿಳಿ ಅಥವಾ ಕ್ರೀಮ್ ಬಣ್ಣದ ಬಟ್ಟೆ ಧರಿಸುವುದು ಶುಭಕರ. ಕುಟುಂಬದವರೊಂದಿಗೆ ಸಮಯ ಕಳೆಯುವುದರಿಂದ ಸಂಬಂಧಗಳು ಇನ್ನಷ್ಟು ಗಟ್ಟಿಯಾಗುತ್ತವೆ. ನಿಮ್ಮ ಅದೃಷ್ಟದ ಬಣ್ಣ ಬೆಳ್ಳಿ ಬಣ್ಣ ಮತ್ತು ಅದೃಷ್ಟದ ಸಂಖ್ಯೆ 6.

ಮಿಥುನ

ಮಿಥುನ ರಾಶಿಯವರು ಹಸುವಿಗೆ ಹಸಿರು ಹುಲ್ಲು ತಿನ್ನಿಸಿ ಶಿವ ಚಾಲೀಸವನ್ನು ಓದಿದರೆ ಒಳಿತು ಎಂದು ಹೇಳಲಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಚೆನ್ನಾಗಿ ಯೋಚಿಸಿ. ನಿಮ್ಮ ಅದೃಷ್ಟದ ಬಣ್ಣ ಹಸಿರು ಮತ್ತು ಅದೃಷ್ಟದ ಸಂಖ್ಯೆ 5.

ನಿಮ್ಮ ಜನ್ಮರಾಶಿಯೇ ಹೇಳುತ್ತದೆ ನಿಮ್ಮ ಟ್ರಾವೆಲ್ ಸ್ಟೈಲ್! ಯಾವ ರಾಶಿಯವರಿಗೆ ಯಾವ ಪ್ರವಾಸ ಇಷ್ಟ?
ನಿಮ್ಮ ಜನ್ಮರಾಶಿಯೇ ಹೇಳುತ್ತದೆ ನಿಮ್ಮ ಟ್ರಾವೆಲ್ ಸ್ಟೈಲ್! ಯಾವ ರಾಶಿಯವರಿಗೆ ಯಾವ ಪ್ರವಾಸ ಇಷ್ಟ?

ಕಟಕ

ಕಟಕ ರಾಶಿಯವರು ಶಿವನಿಗೆ ಬಿಳಿ ಹೂಗಳನ್ನು ಅರ್ಪಿಸಿ 10 ರಿಂದ 15 ನಿಮಿಷ ಧ್ಯಾನ ಮಾಡಿದರೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಶಿವ ದೇವಾಲಯ ಭೇಟಿಯಿಂದ ಶುಭ. ದೈನಂದಿನ ಸಮಸ್ಯೆಗಳ ಬಗ್ಗೆ ಅನಗತ್ಯವಾಗಿ ಹೆಚ್ಚು ಚಿಂತಿಸದೆ ನಿಮ್ಮ ಅಂತಃಪ್ರಜ್ಞೆಯನ್ನು ನಂಬಿ. ನಿಮ್ಮ ಅದೃಷ್ಟದ ಬಣ್ಣ ಬಿಳಿ ಮತ್ತು ಅದೃಷ್ಟದ ಸಂಖ್ಯೆ 2.

ಸಿಂಹ

ಸಿಂಹ ರಾಶಿಯವರು ಬೆಳಿಗ್ಗೆ ಸೂರ್ಯನಿಗೆ ಅರ್ಘ್ಯ ನೀಡಿ, ಸಂಜೆ ಶಿವನನ್ನು ಪ್ರಾರ್ಥಿಸಿದರೆ ಶುಭವಾಗುತ್ತದೆ. ಹನುಮಾನ್‌ ಶಿವನ ಅಂಶ. ಅವನನ್ನೂ ನೆನೆಯಿರಿ. ಹಿರಿಯರಿಗೆ ಸಹಾಯ ಮಾಡಿ ಮತ್ತು ಎಲ್ಲರೊಂದಿಗೆ ವಿನಯದಿಂದ ವರ್ತಿಸಿ. ನಿಮ್ಮ ಅದೃಷ್ಟದ ಬಣ್ಣ ಚಿನ್ನದ ಬಣ್ಣ ಮತ್ತು ಅದೃಷ್ಟದ ಸಂಖ್ಯೆ 1.

ಕನ್ಯಾ

ಕನ್ಯಾ ರಾಶಿಯವರು ವಿದ್ಯಾರ್ಥಿಗಳಿಗೆ ಪುಸ್ತಕ ಅಥವಾ ಬರವಣಿಗೆಯ ಸಾಮಗ್ರಿಗಳನ್ನು ದಾನ ಮಾಡಿದರೆ ಒಳ್ಳೆಯದು. "ಓಂ ಚಂದ್ರಾಯ ನಮಃ" ಮಂತ್ರವನ್ನು 21 ಬಾರಿ ಜಪಿಸಿ. ನಿಮ್ಮ ಕೆಲಸದ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ನಿಮ್ಮ ಅದೃಷ್ಟದ ಬಣ್ಣ ಹಸಿರು ಮತ್ತು ಅದೃಷ್ಟದ ಸಂಖ್ಯೆ 5.

ಗುರು ಆದಿತ್ಯ ಯೋಗದಿಂದ ಈ ಐದು ರಾಶಿಯವರ ಭಾಗ್ಯೋದಯ : ಪದೋನ್ನತಿಗೆ ಅವಕಾಶ, ಹೆಚ್ಚುವುದು ಸಂಪತ್ತು ಸಮೃದ್ಧಿ
ಗುರು ಆದಿತ್ಯ ಯೋಗದಿಂದ ಈ ಐದು ರಾಶಿಯವರ ಭಾಗ್ಯೋದಯ : ಪದೋನ್ನತಿಗೆ ಅವಕಾಶ, ಹೆಚ್ಚುವುದು ಸಂಪತ್ತು ಸಮೃದ್ಧಿ

ತುಲಾ

ತುಲಾ ರಾಶಿಯವರು ಶಿವನ ಮುಂದೆ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಮಾಡಿದರೆ ಶುಭ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ. ಇಂದು ಅನಗತ್ಯ ಖರ್ಚುಗಳನ್ನು ತಪ್ಪಿಸಿ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಕೃತಜ್ಞತೆ ವ್ಯಕ್ತಪಡಿಸಿ. ನಿಮ್ಮ ಅದೃಷ್ಟದ ಬಣ್ಣ ಗುಲಾಬಿ ಮತ್ತು ಅದೃಷ್ಟದ ಸಂಖ್ಯೆ 6.

ವೃಶ್ಚಿಕ

ವೃಶ್ಚಿಕ ರಾಶಿಯವರು ಶಿವನಿಗೆ ಬಿಲ್ವದ ಎಲೆಗಳನ್ನು ಅರ್ಪಿಸಿದರೆ ಒಳಿತು ಎಂದು ನಂಬಲಾಗಿದೆ. ಶಿವನು ಅಭಿಷೇಕ ಪ್ರಿಯ. ಶಿವಲಿಂಗಕ್ಕೆ ಶುದ್ಧ ನೀರಿನಿಂದ ಅಭಿಷೇಕವನ್ನೂ ಮಾಡಬಹುದು. ವೈಯಕ್ತಿಕ ವಿಚಾರಗಳಲ್ಲಿ ತಾಳ್ಮೆಯಿಂದ ವರ್ತಿಸಿ ಮತ್ತು ಕಟುವಾಗಿ ಮಾತನಾಡುವುದನ್ನು ತಪ್ಪಿಸಿ. ನಿಮ್ಮ ಅದೃಷ್ಟದ ಬಣ್ಣ ಮರೂನ್ ಮತ್ತು ಅದೃಷ್ಟದ ಸಂಖ್ಯೆ 9.

ಧನು

ಧನು ರಾಶಿಯವರು ದೇವಾಲಯದಲ್ಲಿ ಬಾಳೆಹಣ್ಣು ಅಥವಾ ಹಳದಿ ಬಣ್ಣದ ಸಿಹಿತಿಂಡಿಯನ್ನು ದಾನ ಮಾಡಿದರೆ ಶುಭವಾಗುತ್ತದೆ. ಅನಾಥ ಮಕ್ಕಳಿಗೆ ಧನಸಹಾಯ ಮಾಡಿ. ಸ್ವಲ್ಪ ಸಮಯ ಆಧ್ಯಾತ್ಮಿಕ ಪುಸ್ತಕಗಳನ್ನು ಓದಿ ಮತ್ತು ನಿಮ್ಮ ಭವಿಷ್ಯದ ಯೋಜನೆಗಳನ್ನು ರೂಪಿಸಿ. ನಿಮ್ಮ ಅದೃಷ್ಟದ ಬಣ್ಣ ಹಳದಿ ಮತ್ತು ಅದೃಷ್ಟದ ಸಂಖ್ಯೆ 3.

ಮಕರ

ಮಕರ ರಾಶಿಯವರು ಕಪ್ಪು ಎಳ್ಳನ್ನು ನೀರಿನೊಂದಿಗೆ ಅಶ್ವತ್ಥ ಮರದ ಬಳಿ ಅರ್ಪಿಸಿ ಹಿರಿಯರ ಆಶೀರ್ವಾದ ಪಡೆದರೆ ಒಳ್ಳೆಯದು ಎಂದು ನಂಬಲಾಗಿದೆ. ಹಿರಿಯರ ಕನಸುಗಳು ಬಾಕಿ ಇದ್ದರೆ ಪೂರ್ಣಗೊಳಿಸುವತ್ತ ಚಿಂತಿಸಿ. ಬಾಕಿ ಉಳಿದಿರುವ ಕೆಲಸಗಳನ್ನು ಮುಂದೂಡದೆ ಪೂರ್ಣಗೊಳಿಸಿ. ನಿಮ್ಮ ಅದೃಷ್ಟದ ಬಣ್ಣ ಗಾಢ ನೀಲಿ ಮತ್ತು ಅದೃಷ್ಟದ ಸಂಖ್ಯೆ 8.

ಕುಂಭ

ಕುಂಭ ರಾಶಿಯವರು ಬಡವರಿಗೆ ಕುಡಿಯುವ ನೀರು ಅಥವಾ ಬಿಳಿ ಬಟ್ಟೆಗಳನ್ನು ದಾನ ಮಾಡಿದರೆ ಶುಭ ಫಲ ಸಿಗುತ್ತದೆ. ಶಿವ ದೇವಾಲಯಕ್ಕೆ ಭೇಟಿ ಕೊಡಿ. ಸುಬ್ರಹ್ಮಣ್ಯನನ್ನು ನೆನೆಯಿರಿ. ಸ್ವಲ್ಪ ಸಮಯ ಮೌನವಾಗಿ ಆತ್ಮಾವಲೋಕನ ಮಾಡಿ ಮತ್ತು ತಂಡದೊಂದಿಗೆ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಿ. ನಿಮ್ಮ ಅದೃಷ್ಟದ ಬಣ್ಣ ಆಕಾಶ ನೀಲಿ ಮತ್ತು ಅದೃಷ್ಟದ ಸಂಖ್ಯೆ 8.

ಮೀನ

ಮೀನ ರಾಶಿಯವರು ಶಿವನಿಗೆ ಚಂದನ ಅಥವಾ ಕೇಸರಿ ಅರ್ಪಿಸಿ, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಯಾರಿಗಾದರೂ ಸಹಾಯ ಮಾಡಿದರೆ ಒಳ್ಳೆಯದು. ಶಿವ, ಹನುಮ, ಗಣೇಶರ ಭಕ್ತಿಗೀತೆಗಳನ್ನು ಕೇಳುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ. ವಿನಾಯಕನ ದೇವಸ್ಥಾನಕ್ಕೆ ಭೇಟಿ ನೀಡುವುದು ಶುಭಕರ. ನಿಮ್ಮ ಅದೃಷ್ಟದ ಬಣ್ಣ ಹಳದಿ ಮತ್ತು ಅದೃಷ್ಟದ ಸಂಖ್ಯೆ 3.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+