ಈ ಆರು ರಾಶಿಯವರಿಗೆ ಸುವರ್ಣ ಕಾಲ: ಗುರು ರಾಹು ಬಲದಿಂದ ಜೊತೆಗಿರುವುದು ಅದೃಷ್ಟ, ಕನಸು ನನಸಾಗುವ ಸಮಯ
ಜುಲೈ 7 ರಿಂದ ಅಕ್ಟೋಬರ್ ಅಂತ್ಯದವರೆಗೆ, ಅನುಕೂಲಕರ ಗ್ರಹ ಜೋಡಣೆಯು ಕೆಲವು ರಾಶಿಯವರ ಬಲವನ್ನು ಹಲವು ವಿಧಗಳಲ್ಲಿ ಹೆಚ್ಚಿಸುತ್ತದೆ. ಈ ರಾಶಿಯವರು ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಮತ್ತು ಆಯಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆಯಿದೆ.
ಮೇಷ, ಕರ್ಕ, ಸಿಂಹ, ತುಲಾ, ವೃಶ್ಚಿಕ ಮತ್ತು ಧನು ರಾಶಿಯವರಿಗೆ ನಾಲ್ಕು ಅಥವಾ ಐದು ಗ್ರಹಗಳ ಅನುಕೂಲಕರ ಪ್ರಭಾವದಿಂದಾಗಿ ಸಣ್ಣ ಅವಕಾಶ ಸಿಕ್ಕರೂ ಅವರು ಉತ್ತುಂಗಕ್ಕೇರುತ್ತಾರೆ. ಪ್ರಸ್ತುತ ಗುರು, ಸೂರ್ಯ, ಮಂಗಳ ಮತ್ತು ಬುಧರ ಜೊತೆಗೆ ರಾಹು ಕೂಡಾ ಅವರಿಗೆ ತುಂಬಾ ಅನುಕೂಲಕರವಾಗಿದೆ. ಅವರ ಯಶಸ್ಸಿಗೆ ಯಾವುದೇ ಮಿತಿಯಿರುವುದಿಲ್ಲ. ಆದಾಯ, ಅಧಿಕಾರ, ಉದ್ಯೋಗ, ಪ್ರೀತಿ ಮತ್ತು ವಿವಾಹದ ವಿಷಯದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.

ಮೇಷ ರಾಶಿ (Aries): ನಾಯಕತ್ವದ ಗುಣಗಳು, ಒಗ್ಗಟ್ಟಿನ ಪ್ರಜ್ಞೆ, ದೂರದೃಷ್ಟಿ, ತಂತ್ರ ಹೆಣೆಯುವ ಸಾಮರ್ಥ್ಯ, ಯೋಜನೆ ಮತ್ತು ತುರ್ತು ಪ್ರಜ್ಞೆಯನ್ನು ಹೊಂದಿರುವ ಈ ರಾಶಿ ತನ್ನ ಆಕ್ರಮಣಕಾರಿ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. ಕೆಲವು ಕೌಶಲ್ಯಗಳು ಮತ್ತು ಸಂಪರ್ಕಗಳನ್ನು ಹೊಂದಿರುವ ಜನರು ನಿರೀಕ್ಷೆಗಳನ್ನು ಮೀರಿ ಪ್ರಗತಿ ಸಾಧಿಸಲು ಸಾಧ್ಯವಿದೆ. ಆದಾಯ ಹೆಚ್ಚಾಗುವುದರೊಂದಿಗೆ ಉದ್ಯೋಗದಲ್ಲಿ ತ್ವರಿತ ಪ್ರಗತಿಯ ಸಾಧ್ಯತೆಯಿದೆ. ಸ್ವಂತ ಮನೆ ಹೊಂದುವ ಕನಸು ನನಸಾಗುತ್ತದೆ. ವಿದೇಶದಲ್ಲಿ ಕೆಲಸ ಮಾಡುವ ಕನಸು ನನಸಾಗುತ್ತದೆ.
ಕರ್ಕಾಟಕ ರಾಶಿ (Cancer): ಆತ್ಮವಿಶ್ವಾಸ, ದೃಢನಿಶ್ಚಯ ಮತ್ತು ಪರಿಶ್ರಮದಂತಹ ಗುಣಗಳನ್ನು ಹೊಂದಿರುವ ಈ ರಾಶಿಯವರು ಕೆಲಸದಲ್ಲಿ ತಮ್ಮ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಸಾಬೀತುಪಡಿಸುತ್ತಾರೆ. ಈ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾರೆ. ಇತರರಿಂದ ವಿಭಿನ್ನ ಮಾರ್ಗಗಳನ್ನು ಅನುಸರಿಸುವ ಮೂಲಕ ಉತ್ತಮ ಮನ್ನಣೆಯನ್ನು ಪಡೆಯುತ್ತಾರೆ. ಸತತವಾಗಿ ಎರಡು ಬಾರಿ ಬಡ್ತಿ ಪಡೆಯುವ ಸಾಧ್ಯತೆಯಿದೆ. ತಮ್ಮ ಕಠಿಣ ಪರಿಶ್ರಮದ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಮನಸ್ಸಿನ ಪ್ರಮುಖ ಆಸೆಗಳು ಖಂಡಿತವಾಗಿಯೂ ಈಡೇರುತ್ತವೆ.
ಸಿಂಹ ರಾಶಿ (Leo): ನಾಯಕತ್ವದ ಗುಣಗಳ ಜೊತೆಗೆ, ಹಠಮಾರಿಗಳಾದ ಈ ರಾಶಿಯವರು ಯಾವುದೇ ಅವಕಾಶವನ್ನು ಎಂದಿಗೂ ಬಿಡುವುದಿಲ್ಲ. ಚಿಕ್ಕ ಅವಕಾಶವನ್ನು ಕೂಡಾ ಸದುಪಯೋಗಪಡಿಸಿಕೊಳ್ಳುತ್ತಾರೆ. ಅದು ಉದ್ಯೋಗ, ವೃತ್ತಿ ಅಥವಾ ವ್ಯವಹಾರವಾಗಿರಲಿ, ತಮ್ಮ ಛಾಪು ಮೂಡಿಸಿಕೊಳ್ಳುತ್ತಾರೆ. ಪ್ರತಿಯೊಂದು ಕೆಲಸ ಮತ್ತು ಪ್ರತಿಯೊಂದು ವ್ಯವಹಾರದಲ್ಲಿ ತಮ್ಮ ವಿಶಿಷ್ಟತೆಯನ್ನು ತೋರಿಸುತ್ತಾರೆ. ನಿರೀಕ್ಷೆಗೂ ಮೀರಿ ಆದಾಯ ಹೆಚ್ಚಾಗುವುದು. ತಮ್ಮ ದಕ್ಷತೆಯಿಂದ ಯಶಸ್ಸಿನ ಮೆಟ್ಟಿಲು ಏರುತ್ತಾರೆ.
ತುಲಾ ರಾಶಿ (Libra): ಏಕಕಾಲದಲ್ಲಿ ಅನೇಕ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಮತ್ತು ಎಲ್ಲರನ್ನೂ ಒಟ್ಟುಗೂಡಿಸುವ ಗುಣ ಈ ರಾಶಿಯವರದ್ದು. ತಮ್ಮ ವೃತ್ತಿ ಮತ್ತು ಉದ್ಯೋಗಗಳಲ್ಲಿ ವಿಶೇಷ ಮನ್ನಣೆ ಪಡೆದುಕೊಳ್ಳುತ್ತಾರೆ. ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗುವರು. ತಮಗೆ ಸಿಗುವ ಪ್ರತಿಯೊಂದು ಸಣ್ಣ ಅವಕಾಶವನ್ನೂ ಬಳಸಿಕೊಳ್ಳುತ್ತಾರೆ. ತಮ್ಮ ಕೆಲಸದಲ್ಲಿ ಶ್ರೇಷ್ಠತೆಯನ್ನು ಸಾಧಿಸುತ್ತಾರೆ. ಇವರ ನಾಯಕತ್ವದಲ್ಲಿ, ವೃತ್ತಿ ಮತ್ತು ವ್ಯವಹಾರವು ಖಂಡಿತವಾಗಿಯೂ ಹೊಸ ಎತ್ತರಕ್ಕೆ ಏರುತ್ತದೆ. ಈ ರಾಶಿಯವರಿಗೆ ವಿದೇಶಗಳಲ್ಲಿ ಉದ್ಯೋಗ ಪಡೆಯುವ ಅವಕಾಶ ಒದಗಿ ಬರುತ್ತದೆ.
ವೃಶ್ಚಿಕ ರಾಶಿ (Scorpio): ಗುರಿಗಳನ್ನು ನಿಗದಿಪಡಿಸುವ ಮತ್ತು ಅವುಗಳನ್ನು ಸಾಧಿಸಲು ಈ ರಾಶಿಯವರು ಸದಾ ಸಿದ್ಧರಾಗಿರುತ್ತಾರೆ. ಈ ರಾಶಿಯವರು ಬಯಸಿದ್ದನ್ನು ಪಡೆದೇ ತೀರುವರು. ಯಾವುದೇ ಕಾರಣಕ್ಕೂ ಇವರು ಸೋಲೋಪ್ಪುವುದಿಲ್ಲ. ಕಡಿಮೆ ಪ್ರಯತ್ನದಿಂದ ದೊಡ್ಡ ಮಟ್ಟದ ಫಲ ಪಡೆಯುವರು.ಆದಾಯ ಹೆಚ್ಚಾಗುವುದು. ಶ್ರೀಮಂತರ ಪಟ್ಟಿಗೆ ಸೇರುತ್ತಾರೆ. ಎಲ್ಲಾ ಹಂತದಲ್ಲಿಯೂ ಮೇಲುಗೈ ಸಾಧಿಸುವರು.
ಧನು ರಾಶಿ (Sagitarius): ಸಾಹಸ, ಪರಿಶ್ರಮ ಮತ್ತು ಸಂಪೂರ್ಣ ಆತ್ಮವಿಶ್ವಾಸದ ಮನೋಭಾವ ಹೊಂದಿರುವ ಈ ರಾಶಿಯವರು ಮಹತ್ವಾಕಾಂಕ್ಷೆವುಳ್ಳವರು. ತಮ್ಮ ವೃತ್ತಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವುದು ಖಚಿತ. ಆದಾಯ ಹೆಚ್ಚಾಗುವುದು. ಷೇರು ಮಾರುಕಟ್ಟೆ ಮೂಲಕ ಲಾಭವಾಗುವುದು.ಅಂದುಕೊಂಡ ಕೆಲಸವನ್ನು ಸಾಧಿಸುವರು. ಮನೆ ನಿರ್ಮಾಣದ ಕನಸು ನನಸಾಗುವುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications