ಇನ್ಮುಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ರೀಲ್ಸ್‌ಗೆ ಕೇಂದ್ರ ಸರ್ಕಾರ ಬ್ರೇಕ್: ಏನದು, ಮೆಟಾಗೆ ಹೊಸ ಶಾಕ್
Instagram Viral: ಕೇಂದ್ರ ಸರ್ಕಾರವು ಇನ್‌ಸ್ಟಾಗ್ರಾಮ್ (ಮೆಟಾ)ಗೆ ಭಾರೀ ಶಾಕ್ ನೀಡಿದೆ. ಭಾರತದಲ್ಲಿನ ಸಣ್ಣ ಮಕ್ಕಳು ಹಾಗೂ ಯುವ ಸಮೂಹದ ಹಿತ ದೃಷ್ಟಿಯಿಂದ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಮಕ್ಕಳ ಲೈಂಗಿಕ ಶೋಷಣೆ ಹಾಗೂ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ (CSEAM) ಪ್ರವೇಶವನ್ನು ಉತ್ತೇಜಿಸುವ, ಸುಲಭವಾಗಿ ಸಿಗುವುದು ಸೇರಿದಂತೆ ವಿವಿಧ ವಿಷಯಗಳನ್ನು ಇನ್‌ಸ್ಟಾಗ್ರಾಮ್‌ನಿಂದ ತಕ್ಷಣವೇ ತೆಗೆದುಹಾಕುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮೆಟಾಗೆ ನಿರ್ದೇಶನ ನೀಡಿದೆ. ಈ ಕುರಿತು ಮೆಟಾದಿಂದ ಸ್ಪಷ್ಟೀಕರಣವನ್ನೂ ಸಚಿವಾಲಯ ಕೋರಿದೆ. ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಬರುತ್ತಿರುವ ಕೆಲವೊಂದು ರೀಲ್ಸ್‌ಗಳ ಬಗ್ಗೆ ಗಂಭೀರವಾದ ಎಚ್ಚರಿಕೆ ನೀಡಿದೆ.
ಮಕ್ಕಳ ಲೈಂಗಿಕ ಶೋಷಣೆ - ದೌರ್ಜನ್ಯ ಹಾಗೂ ಪ್ರಚೋದನಾತ್ಮಕ ವಿಷಯಗಳನ್ನು ತೆಗೆದು ಹಾಕುವಂತೆ ಕೇಂದ್ರ ಸರ್ಕಾರವು ನಿರ್ದೇಶನ ನೀಡಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಇಂತಹ ಜಾಹೀರಾತುಗಳನ್ನು ತೆಗೆದುಹಾಕುವಂತೆ ಸಚಿವಾಲಯವು ಮೆಟಾಗೆ ಸೂಚಿಸಿದೆ. ಈ ಬಗ್ಗೆ ಕೈಗೊಂಡ ಕ್ರಮ ಹಾಗೂ ಇತರ ಮಾಹಿತಿಯನ್ನು ಏಳು ದಿನಗಳೊಳಗೆ ತಿಳಿಸುವಂತೆ ಸರ್ಕಾರವು ಶನಿವಾರ ನೋಟಿಸ್ ನೀಡಿದೆ ಎಂದು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಮಕ್ಕಳನ್ನು ಸೆಳೆಯು ಉದ್ದೇಶದಿಂದ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದ ಜಾಹೀರಾತುಗಳನ್ನು ಪ್ರಸಾರ ಮಾಡಲಾಗುತ್ತಿದೆ ಅಥವಾ ಕಾಣಿಸಿಕೊಳ್ಳುತ್ತಿವೆ ಎನ್ನುವ ಗಂಭೀರವಾದ ಆರೋಪಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಗಂಭೀರ ಕ್ರಮಕ್ಕೆ ಮುಂದಾಗಿದೆ. ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಹಿರಿಯ ಸಚಿವಾಲಯದ ಅಧಿಕಾರಿಗಳಿಗೆ ನೀಡಿದ ನಿರ್ದೇಶನದ ಮೇರೆಗೆ ನೋಟಿಸ್ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.

ಕೇಂದ್ರ ಸರ್ಕಾರವು ನೀಡಿರುವ ನೋಟಿಸ್‌ಗೆ ಮೆಟಾ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎನ್ನುವುದರ ಮೇಲೆ ಕೇಂದ್ರ ಸರ್ಕಾರವು ಮುಂದಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ನೋಟಿಸ್ ಬಗ್ಗೆ ಕೇಳಿದಾಗ, ಮೆಟಾ ವಕ್ತಾರರು ಈ ಹಿಂದೆ ಬಿಬಿಸಿ ವರದಿ ಪ್ರಕಟವಾದ ಬಳಿಕ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದರು. ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆಗೆ ಸಂಬಂಧಿಸಿದ (CSAM) ವಿಷಯವನ್ನು ಕೇಳುವುದು ಅಥವಾ ಹಂಚಿಕೊಳ್ಳುವುದಕ್ಕೆ ಮೆಟಾ ಮಿತಿ ಹೊಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಇಂತಹ ಜಾಹೀರಾತುಗಳನ್ನು ಪತ್ತೆಹಚ್ಚಲು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಆದರೂ, ನಮ್ಮ 3.5 ಬಿಲಿಯನ್ ಬಳಕೆದಾರರ ನಡುವೆ ಈ ರೀತಿ ಯಾರು ಮಾಡುತ್ತಿರುವವರ ಅಥವಾ ತಪ್ಪು ಮಾಡುತ್ತಿರುವ ಅಪರಾಧಿಗಳ ವಿರುದ್ಧ ನಾವು ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಮೆಟಾ ಹೇಳಿದೆ.
Instagram: ಏನಿದು ಪ್ರಕರಣ - ಮಕ್ಕಳ ವಿಷಯದಲ್ಲಿ ಕೇಂದ್ರ ಸರ್ಕಾರ ಹೇಳಿದ್ದೇನು
ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಚಾರ ಮಾಡುವ ಪಾವತಿಸಿದ ಜಾಹೀರಾತುಗಳು ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸುತ್ತಿವೆ ಎಂದು ಬಿಬಿಸಿ ತನ್ನ ತನಿಖಾ ವರದಿಯಲ್ಲಿ ಬಹಿರಂಗಪಡಿಸಿತ್ತು. ಈ ಜಾಹೀರಾತುಗಳು ಬಳಕೆದಾರರನ್ನು ಟೆಲಿಗ್ರಾಮ್ ಚಾನೆಲ್‌ಗಳಿಗೆ ಕನೆಕ್ಟ್ ಆಗುತ್ತಿವೆ. ಅಲ್ಲಿ ಅವರು ಅಂತಹ ಅಕ್ರಮ ವಿಷಯವನ್ನು ಖರೀದಿಸಲು ಅವಕಾಶವಿದೆ ಎಂದು ವರದಿ ತಿಳಿಸಿತ್ತು. ಈ ವರದಿ ಪ್ರಕಟವಾದ ಮರುದಿನವೇ ಸರ್ಕಾರ ಈ ಕ್ರಮ ಕೈಗೊಂಡಿದೆ.
ಜಾಹೀರಾತುಗಳಿಗೆ ಸಂಬಂಧಿಸಿದಂತೆ ಮೆಟಾ ತನ್ನ ನೀತಿಯಲ್ಲಿ, "ಜಾಹೀರಾತುಗಳು ವಯಸ್ಕರ ನಗ್ನತೆ ಮತ್ತು ಲೈಂಗಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಸಮುದಾಯದ ನಿಯಮಗಳನ್ನು ಪಾಲಿಸಬೇಕು. ಜಾಹೀರಾತುಗಳಲ್ಲಿ ನಗ್ನತೆ, ಲೈಂಗಿಕ ಚಟುವಟಿಕೆ, ಅಶ್ಲೀಲ ಅಥವಾ ಲೈಂಗಿಕವಾಗಿ ಪ್ರಚೋದಿಸುವ ಭಂಗಿಯಲ್ಲಿರುವ ವ್ಯಕ್ತಿಗಳ ಚಿತ್ರಗಳು ಅಥವಾ ಲೈಂಗಿಕ ಸೂಚನೆ ನೀಡುವ ದೃಶ್ಯಗಳು ಇರಬಾರದು" ಎಂದು ಹೇಳಿದೆ. ಜೊತೆಗೆ, ವಯಸ್ಕರ ನಗ್ನತೆ ಮತ್ತು ಲೈಂಗಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಸಮುದಾಯದ ನಿಯಮಗಳಿಗಿಂತಲೂ ಹೆಚ್ಚಿನ ನಿರ್ಬಂಧಗಳನ್ನು ಈ ನೀತಿಯಲ್ಲಿ ವಿಧಿಸಲಾಗಿದೆ ಎಂದು ಮೆಟಾ ಹೇಳಿದೆ. ಆದರೆ ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.












Click it and Unblock the Notifications