Not Vaibhav Sooryavanshi.. ಪಾಕ್ ಮಾಜಿ ಕ್ರಿಕೆಟಿಗ ನಂಬರ್ 1

Vaibhav Sooryavanshi: ಕೇವಲ 15 ವರ್ಷದ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ ಸಾಧನೆಯನ್ನು ಕ್ರಿಕೆಟ್ ಜಗತ್ತೇ ಕೊಂಡಾಡುತ್ತಿದೆ. ಅವರು ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಸರಣಿಯ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಆದರೆ ಅವರ ಈ ಐತಿಹಾಸಿಕ ದಾಖಲೆ ಬೆನ್ನಲ್ಲೇ ಮತ್ತೊಂದು ಮಹತ್ವದ ದಾಖಲೆ ಮುನ್ನೆಲೆಗೆ ಬಂದಿದ್ದು, ಅದುವೆ ಪಾಕ್‌ ಆಟಗಾರನದ್ದಾಗಿದೆ.

ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ ವಿಶ್ವದಾಖಲೆಯ ಕುರಿತು ಚರ್ಚೆ ಆರಂಭವಾಗಿದ್ದು, ಈ ದಾಖಲೆ ಭಾರತೀಯ ಆಟಗಾರನ ಹೆಸರಿನಲ್ಲಿಲ್ಲ ಎಂಬುದು ಮುನ್ನೆಲೆಗೆ ಬಂದಿದೆ. ಇದೇ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

Vaibhav Sooryavanshi Becomes India s Youngest Debutant But Pak Hasan Raza Still Holds World Record

ಸಚಿನ್ ದಾಖಲೆ ಮುರಿದ ವೈಭವ್

ಬಿಹಾರದ ಸಮಸ್ತಿಪುರ ಜಿಲ್ಲೆಯ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕೇವಲ 15 ವರ್ಷ 99 ದಿನಗಳ ವಯಸ್ಸಿನಲ್ಲೇ ಭಾರತ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದ ಅವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ 37 ವರ್ಷಗಳ ಹಳೆಯ ದಾಖಲೆಯನ್ನು (16 ವರ್ಷ 205 ದಿನಗಳು) ಮುರಿದಿದ್ದು, ಭಾರತದ ಅತ್ಯಂತ ಕಿರಿಯ ಅಂತಾರಾಷ್ಟ್ರೀಯ ಆಟಗಾರ ಎನಿಸಿಕೊಂಡಿದ್ದಾರೆ.

ನಂಬರ್ ಒನ್ ವೈಭವ್ ಅಲ್ಲ, ಪಾಕ್ ಮಾಜಿ ಕ್ರಿಕೆಟಿಗ..

ಆದರೆ ವೈಭವ್ ಸೂರ್ಯವಂಶಿ ಅವರ ಈ ಐತಿಹಾಸಿಕ ದಾಖಲೆ ಬೆನ್ನಲ್ಲೇ ಜಾಗತಿಕ ಕ್ರಿಕೆಟ್ ಇತಿಹಾಸದ ಮತ್ತೊಂದು ಮಹತ್ವದ ದಾಖಲೆ ಮುನ್ನೆಲೆಗೆ ಬಂದಿದೆ. ವೈಭವ್ ಭಾರತದ ಪರ ಅತ್ಯಂತ ಕಿರಿಯ ಆಟಗಾರನಾಗಿದ್ದರೂ, ವಿಶ್ವ ಕ್ರಿಕೆಟ್‌ನಲ್ಲಿ ಅತಿ ಕಿರಿಯ ವಯಸ್ಸಿಗೆ ಪದಾರ್ಪಣೆ ಮಾಡಿದ ಸಾರ್ವಕಾಲಿಕ ದಾಖಲೆ ಇಂದಿಗೂ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಜಾ ಅವರ ಹೆಸರಿನಲ್ಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

14ನೇ ವಯಸ್ಸಿನಲ್ಲೇ ವಿಶ್ವದಾಖಲೆ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮತ್ತು ಕ್ರಿಕೆಟ್ ಇತಿಹಾಸದ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಪಾಕಿಸ್ತಾನದ ಹಸನ್ ರಜಾ ಅವರು 1996ರಲ್ಲಿ ಜಿಂಬಾಬ್ವೆ ವಿರುದ್ಧ ಫೈಸಲಾಬಾದ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ದರು. ಆಗ ಅವರ ವಯಸ್ಸು ಕೇವಲ 14 ವರ್ಷ 227 ದಿನಗಳು. ಅಷ್ಟೇ ಅಲ್ಲದೆ ಅದೇ ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧ ಕ್ವೆಟ್ಟಾದಲ್ಲಿ ತಮ್ಮ ಮೊದಲ ಏಕದಿನ ಪಂದ್ಯವನ್ನಾಡಿದಾಗ ಅವರಿಗೆ 14 ವರ್ಷ 233 ದಿನಗಳ ವಯಸ್ಸಾಗಿತ್ತು.

ಗಮನ ಸೆಳೆಯದ ಪಾಕ್ ಆಟಗಾರ

ಮೂರು ದಶಕಗಳು ಕಳೆದರೂ ಪುರುಷರ ಕ್ರಿಕೆಟ್‌ನ ಈ ವಿಶಿಷ್ಟ ವಿಶ್ವದಾಖಲೆಯನ್ನು ಮುರಿಯಲು ಜಗತ್ತಿನ ಯಾವುದೇ ಆಟಗಾರನಿಗೂ ಸಾಧ್ಯವಾಗಿಲ್ಲ. ಹಸನ್ ರಜಾ ಪಾಕಿಸ್ತಾನದ ಪರ ಒಟ್ಟು 7 ಟೆಸ್ಟ್ ಹಾಗೂ 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಷ್ಟಾಗಿ ದೊಡ್ಡ ಪ್ರಭಾವ ಬೀರಲು ವಿಫಲರಾಗಿದ್ದರು.

ಜಾಗತಿಕ ಮಟ್ಟದಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಏನು?

ಐಸಿಸಿಯ ಪೂರ್ಣ ಸದಸ್ಯ ರಾಷ್ಟ್ರಗಳ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸವನ್ನು ಗಮನಿಸಿದರೆ, ವೈಭವ್ ಸೂರ್ಯವಂಶಿ ಅವರು ಹಸನ್ ರಜಾ ಅವರ ನಂತರದ ಸ್ಥಾನದಲ್ಲಿದ್ದಾರೆ. ಅಂದರೆ ವಿಶ್ವದ ಎರಡನೇ ಅತ್ಯಂತ ಕಿರಿಯ ಪದಾರ್ಪಣೆಗಾರನಾಗಿ ಗುರುತಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅವರು ಬಾಂಗ್ಲಾದೇಶದ ಮೊಹಮ್ಮದ್ ಷರೀಫ್ (15 ವರ್ಷ 116 ದಿನಗಳು) ಮತ್ತು ಪಾಕಿಸ್ತಾನದ ಮುಷ್ತಾಕ್ ಮೊಹಮ್ಮದ್ (15 ವರ್ಷ 124 ದಿನಗಳು) ಅವರನ್ನು ಹಿಂದಿಕ್ಕಿದ್ದಾರೆ.

ದಾಖಲೆ ಬರೆದ ವೈಭವ್ ಭಾವನಾತ್ಮಕ ಪೋಸ್ಟ್

ಇತ್ತೀಚಿನ ಐಪಿಎಲ್ 2026ರ ಸೀಸನ್‌ನಲ್ಲಿ ಬರೋಬ್ಬರಿ 776 ರನ್ ಸಿಡಿಸಿ ಟೂರ್ನಿಯ 'ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್' ಆಗಿ ಹೊರಹೊಮ್ಮಿದ್ದ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಪದಾರ್ಪಣೆಗಾಗಿ ಇಡೀ ದೇಶವೇ ಕಾಯುತ್ತಿತ್ತು. ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ದಿಗ್ಗಜರು ಇವರ ಪ್ರತಿಭೆಯನ್ನು ಕೊಂಡಾಡಿದ್ದರು.

ಶನಿವಾರ (ಜುಲೈ 04) ಇಂಗ್ಲೆಂಡ್ ವಿರುದ್ಧ ಭಾರತದ ಕ್ಯಾಪ್ ಧರಿಸಿ ಮೈದಾನಕ್ಕಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈ ಅದ್ಭುತ ಸಾಧನೆಯ ನಂತರ ಯುವ ಆಟಗಾರ ಸೂರ್ಯವಂಶಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಬೆಂಬಲಿಸಿದ ದೇಶದ ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಟ್‌ಗೆ ಅತೀ ಚಿಕ್ಕ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದವರಲ್ಲಿ ಜಾಗತಿಕ ಮಟ್ಟದಲ್ಲಿ ಪಾಕ್ ಆಟಗಾರ ನಂಬರ್ ಒನ್‌ ಪಟ್ಟ ಅಲಂಕರಿಸಿದ್ದರೆ, ವೈಭವ್ ಸೂರ್ಯವಂಶಿ ನಂತರದ ಸ್ಥಾನದಲ್ಲಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+