ಬೆಂಗಳೂರು ಬಾಡಿಗೆ ಮನೆ ವಿವಾದ ವೈರಲ್: ಠೇವಣಿ ಕಡಿತದ ಬಳಿಕ ₹22,000ಕ್ಕೆ ಬೇಡಿಕೆ ಇಟ್ಟ ಮಾಲೀಕ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಉದ್ಯೋಗಕ್ಕೆಂದು ಬರುವ ಅಪಾರ ಮಂದಿ ಮೊದಲಿಗೆ ಟ್ರಾಫಿಕ್ ಸಮಸ್ಯೆ ಅನುಭವಿಸಿದರೆ ನಂತರ ಅವರಿಗೆ ಮನೆ ಬಾಡಿಗೆ ಸಮಸ್ಯೆ ಎದುರಾಗುತ್ತದೆ. ಅದೇಗೋ ಮನೆಯೊಂದನ್ನು ಹುಡುಕಿ ದೈನಂದಿನ ಜೀವನ ಆರಂಭಿಸುತ್ತಾರೆ. ಆದರೆ ಬಾಡಿಗೆ ಮನೆ ಬಿಡುವಾಗ ಆರ್ಥಿಕವಾಗಿ, ಮಾನಸಿಕವಾಗಿ ಜರ್ಜರಿತರಾಗಿಬಿಡುತ್ತಾರೆ. ಇದೇ ರೀತಿ ಬಾಡಿಗೆದಾರರ ಮನೆ ಬಿಡುವಾಗ ಮುಂಗಡ ಠೇವಣಿ ಜೊತೆಗೆ ಮನೆ ನಿರ್ವಹಣೆ ಸೇರಿಸಿ ಮನಸ್ಸಿಗೆ ಬಂದಂತೆ ಹೆಚ್ಚುವರಿ ಹಣಕ್ಕೆ ಮನೆ ಮಾಲೀಕರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಆರೋಪಿಸಿರುವ ಬಾಡಿಗೆದಾರ ನೆಟ್ಟಿಗರಿಂದ ಸಲಹೆಗಳನ್ನು ಕೇಳಿದ್ದು ಇಂಟರ್ ನೆಟ್‌ನಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ಕೋರಮಂಗಲ ವ್ಯಾಪ್ತಿಯಲ್ಲಿ 28 ವರ್ಷದ ವ್ಯಕ್ತಿಯೊಬ್ಬ (ವೃತ್ತಿಪರ) ಬಾಡಿಗೆ ಮನೆ ಮಾಡಿಕೊಂಡಿದ್ದ. ಇದೀಗ ಮನೆ ಬಿಡುವಾಗ ಆತನ ಠೇವಣಿ ಹಣದಲ್ಲಿ ಗಣನೀಯ ಪ್ರಮಾಣದ ಹಣವನ್ನು ಮಾಲೀಕರು ಉಳಿಸಿಕೊಂಡಿದ್ದಾರೆ. ಇದಲ್ಲದೇ ಅಪಾರ್ಟ್ಮೆಂಟ್ ಖಾಲಿ ಮಾಡಿದ ನಂತರ ಈಗ 22,000 ರೂಪಾಯಿ ಹೆಚ್ಚುವರಿ ಹಣಕ್ಕೆ ಮತ್ತೆ ಬೇಡಿಕೆ ಇಟ್ಟಿದ್ದಾರೆ ಎಂದು ಬಾಡಿದಾರ ರೆಡ್ಡಿಟ್‌ನಲ್ಲಿ ಅಳಲು ತೊಂಡಿಕೊಂಡಿದ್ದಾರೆ. ಅವರಿಗೆ ನೆಟ್ಟಿಗರು ಒಂದಷ್ಟು ಸಲಹೆ ಕೊಟ್ಟಿದ್ದಾರೆ.

ಶೇ.10ರಷ್ಟು ಮನೆ ಬಾಡಿಗೆ ಏರಿಕೆ
2024ರ ಅಕ್ಟೋಬರ್ ನಿಂದ ಕೋರಮಂಗಲದಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆಗೆ ಇದ್ದರು. ಈ ಮನೆ ಖಾಲಿ ಮಾಡುವಾಗಿ ಮಾಲೀಕರು ಮನೆ ಪೇಟಿಂಗ್‌ಗೆಂದು ಠೇವಣಿ ಹಣದಲ್ಲಿ ಒಂದು ತಿಂಗಳ ಮನೆ ಬಾಡಿಗೆ ಕಡಿತದ ಷರತ್ತಿಗೆ ನನ್ನಿಂದ ಸಹಿ ಹಾಕಿಸಿಕೊಂಡಿದ್ದರು. ಅಂದು ಮನೆ ಅಗತ್ಯವಿದ್ದ ಹಿನ್ನೆಲೆ ಈ ಒಪ್ಪಂದಕ್ಕೆ ಸಹಿ ಹಾಕಿದ್ದೆ. 15ತಿಂಗಳು ಈ ಮನೆಯಲ್ಲೇ ವಾಸಿಸಿದ್ದೆ. ನಿಯಂದಂತೆ ವಾರ್ಷಿಕ ಶೇ. 5ರಷ್ಟು ಬದಲಾಗಿ, ಶೇ.10ರಷ್ಟು ಮನೆ ಬಾಡಿಗೆ ಏರಿಕೆ ಮಾಡಿದ್ದಾರೆ ಎಂದು ದೂರಿದರು. ಇದೀಗ ಕೆಲಸ ಬದಲಾಯಿಸಿದ್ದರಿಂದ ಮನೆ ಖಾಲಿ ಮಾಡಲು ಮುಂದಾಗಿದ್ದೆ ಆಗ ಈ ರೀತಿಯ ಆರ್ಥಿಕ ಸಮಸ್ಯೆ ಎದುರಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಹೆಚ್ಚುವರಿ ಹಣಕ್ಕೆ ಮಾಲೀಕರ ಬೇಡಿಕೆ, ಬಾಡಿಗೆದಾರ ಕಂಗಾಲು
ಮನೆ ಬಾಡಿಗೆದಾರರ ಹೇಳುವ ಪ್ರಕಾರ, ಮುಂಗಡ ಠೇವಣಿ ಹಣದಲ್ಲಿ ಒಟ್ಟು ಎರಡು ತಿಂಗಳ ಹಣ ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ. ಮನೆ ಪೇಟಿಂಗ್‌ಗೆಂದು 20,000 ರೂ. ಮಾತ್ರವಲ್ಲದೇ ಇನ್ನಿತರ ಖರ್ಚು ಅರ್ಧ ತಿಂಗಳ ಮನೆ ಬಾಡಿ ಸೇರಿಸಿ 22,000 ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ತಿಳಿಸಿದ್ದಾರೆ. ಈಗಾಗಲೇ ಎರಡು ತಿಂಗಳ ಬಾಡಿಗೆ ಹಣ, ಪೇಟಿಂಗ್ ಹಣ ಮುರಿದುಕೊಂಡರು ಮತ್ತೆ ಹಣ ಕೇಳುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ರೀತಿ ಹಣ ಕಡಿತಗೊಳಿಸುವುದು ಕಾನೂನು ಬದ್ಧವೇ ಎಂದು ಬಾಡಿಗೆದಾರರ ರೆಡ್ಡಿಟ್‌ನಲ್ಲಿ ಪ್ರಶ್ನಿಸಿದ್ದಾರೆ. ಅದಕ್ಕೆ ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳೂ ಬಂದಿವೆ.
ಹಣ ವಾಪಾಸ್ ಸಿಗಲ್ಲ: ನೆಟ್ಟಿಗರು ಹೇಳಿದ್ದೇನು?
ಈ ವಿವಾದದ ಬಗ್ಗೆ ಮಿಶ್ರ ಪ್ರತಿಕ್ರಿಯೆ, ಭಿನ್ನಾಭಿಪ್ರಾಯ ವ್ಯಕ್ತವಾಗಿದೆ. ಒಬ್ಬರು 'ನಿಮಗೆ ಯಾರು ಸಹಾಯ ಮಾಡುವುದಿಲ್ಲ. ಅವರು ನಿಮ್ಮ ಠೇವಣಿ ಪೂರ್ತಿ ಹಣ ಹಿಂತಿರುಗಿಸಲು ಮನಸ್ಸಿಲ್ಲ. ಅದಕ್ಕೆ ಹೀಗೆ ಮಾಡುತ್ತಿದ್ದಾರೆ' ಎಂದರು. ಮತ್ತೊಬ್ಬರು 'ನನ್ನ ಮನೆ ಬಾಡಿಗೆ ಠೇವಣಿ ಹಿಂತಿರುಗಿಸದಿದ್ದಕ್ಕೆ ನಾನು ಹೊರಗಿನ ಎಸಿಗೆ ಹಾನಿ ಮಾಡಲು ಮುಂದಾಗಿದ್ದೆ' ಎಂದರೆ ಇನ್ನೊಬ್ಬರು 'ನೀವೇನು ಮಾಡಬೇಕೆಂದುಕೊಂಡಿದ್ದೀರಿ' ಎಂದು ತಮಾಷೆಯಾಗಿ ಕಾಮೆಂಟ್ ಹಾಕಿದ್ದಾರೆ.
ಕಾನೂನು ತಜ್ಞರ ಸಲಹೆ ಪಾಲಿಸಿ
'ಮನೆ ಮಾಲೀರಕು ಠೇವಣಿ ಕಡಿತ, ಬಿಲ್, ಬಾಡಿಗೆ ಒಪ್ಪಂದ ಪಾವತಿ, ಹೆಚ್ಚುವರಿ ಹಣ ಕಡಿತಕ್ಕೆ ರಶೀದಿ ದಾಖಲೆಗಳನ್ನು ಒದಗಿಸಿದ್ದಾರೆಯೇ?' ಎಂದು ನಾಲ್ಕನೇಯವರು ಕೇಳಿದ್ದಾರೆ. ಬೆಂಗಳೂರಿನಲ್ಲಿ ಕೆಲವು ಮನೆ ಮಾಲೀಕರು ಬಾಡಿಗೆದಾರರು ಮನೆ ಖಾಲಿ ಮಾಡುವಾಗ ಈ ರೀತಿ ಸಮಸ್ಯೆ ಮಾಡುವುದು ಹೆಚ್ಚು. ಠೇವಣಿ ಹಣ ಹಿಂತಿರುಗಿಸದೇ ಇಲ್ಲ ಸಲ್ಲದೇ ನಿಯಮ ಹೇರುವುದು, ಮಾನಸಿಕ, ಆರ್ಥಿಕವಾಗಿ ಕಿರಿ ಕಿರಿ ನೀಡುತ್ತಾರೆ. ಈ ವೇಳೆ ಕಾನೂನು ತಜ್ಞರ ಸಲಹೆ ಪಾಲಿಸುವುದು ಉತ್ತಮ ಎನ್ನಲಾಗಿದೆ.













Click it and Unblock the Notifications