ವೈಭವ್ ಸೂರ್ಯವಂಶಿ ಮೇಲೆ ಸೋಲಿನ ಆರೋಪ ಹೊರಿಸಿದ್ರಾ ನಾಯಕ ಶ್ರೇಯಸ್‌ ಅಯ್ಯರ್? ನೆಟ್ಟಿಗರ ಆಕ್ರೋಶ

India vs England T20I Shreyas Iyer: ಮ್ಯಾಂಚೆಸ್ಟರ್‌ನಲ್ಲಿ ಜುಲೈ 04ರಂದು ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವು ಟೀಮ್ ಇಂಡಿಯಾ ವಿರುದ್ಧ 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಸೋಲಿನ ಬೆನ್ನಲ್ಲೇ ಭಾರತದ ನಾಯಕ ಶ್ರೇಯಸ್ ಅಯ್ಯರ್ ಅವರು ನೀಡಿರುವ ಹೇಳಿಕೆ ಇದೀಗ ಕ್ರಿಕೆಟ್‌ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಯಾಕೆಂದ್ರೆ ಅವರು ಈ ಸೋಲಿಗೆ ಕಾರಣ ಆರಂಭಿಕ ಹಂತಹ ಬ್ಯಾಟರ್‌ಗಳ ಮೇಲೆ ಹೊರಿಸಿದ್ದು, ಇದಕ್ಕೆ ನೆಟ್ಟಿಗರು ಕೂಡ ಪ್ರತಿಕ್ರಿಯಿಸಿ ಆಕ್ರೋಶ ಹೊರಹಾಕಿದ್ದಾರೆ.

ನಾಯಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಭಾರತ ತಂಡವು ಸತತ ಎರಡು ಪಂದ್ಯಗಳಲ್ಲಿ ಪರಾಜಯಗೊಂಡಂತಾಗಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಈ ಹೀನಾಯ ಸೋಲಿನ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ತಂಡದ ವೈಫಲ್ಯದ ಕುರಿತು ಯಾವುದೇ ಮುಚ್ಚುಮರೆಯಿಲ್ಲದೆ ನೇರವಾಗಿ ಮಾತನಾಡಿದ್ದಾರೆ. ತಪ್ಪುಗಳು ಎಲ್ಲಿ ನಡೆದಿವೆ ಎಂಬುದು ಇಡೀ ತಂಡಕ್ಕೆ ತಿಳಿದಿದೆ ಎಂದು ಅವರು ತಿಳಿಸಿದ್ದಾರೆ.

Shreyas Iyer Blames Top Order After India s Defeat Vaibhav Sooryavanshi Fans Reactions Viral

ನಾಯಕ ಶ್ರೇಯಸ್‌ ಅಯ್ಯರ್ ಹೇಳಿದ್ದೇನು?

ಪಂದ್ಯದ ಮುಕ್ತಾಯದ ನಂತರ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್ ಅವರು, 'ನಾವೆಲ್ಲೋ ತಪ್ಪು ಮಾಡಿದ್ದೇವೆ ಎಂಬುದು ನಮಗೆ ಸ್ಪಷ್ಟವಾಗಿ ಗೊತ್ತಿದೆ. ವಿಶೇಷವಾಗಿ ಪವರ್‌ಪ್ಲೇ ಓವರ್‌ಗಳಲ್ಲಿ ನಮ್ಮ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಆರಂಭದಲ್ಲೇ ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ನಮಗೆ ದೊಡ್ಡ ಹಿನ್ನಡೆಯಾಯಿತು. ಟಿ20 ಕ್ರಿಕೆಟ್‌ನಲ್ಲಿ ಮೊದಲ 6 ಓವರ್‌ಗಳು ಪಂದ್ಯದ ಗತಿಯನ್ನು ನಿರ್ಧರಿಸುತ್ತವೆ. ಆದರೆ ಆ ಅವಧಿಯಲ್ಲಿ ನಾವು ಲಯ ಕಂಡುಕೊಳ್ಳಲು ವಿಫಲರಾದೆವು,' ಎಂದು ಬೇಸರ ವ್ಯಕ್ತಪಡಿಸಿದರು. ಈ ಹೇಳಿಕೆ ವೈಭವ್ ಸೂರ್ಯವಂಶಿ ಅವರ ಮೇಲೆ ಎಳೆದಂತಿದೆ ಎನ್ನುವ ಆರೋಪಗಳು ಕೇಳಿಬಂದಿವೆ.

'ಉತ್ತಮ ಜೊತೆಯಾಟ ಕಟ್ಟುವುದು ಮುಖ್ಯ'

ಮುಂದುವರೆದು ಮಾತನಾಡಿದ ಶ್ರೇಯಸ್ ಅಯ್ಯರ್ ಅವರು, 'ನಮ್ಮ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಸಾಕಷ್ಟು ಸಾಮರ್ಥ್ಯವಿದೆ. ಆದರೆ ಕಣದಲ್ಲಿ ರನ್‌ಗಳ ಬೆನ್ನಟ್ಟುವಾಗ ಅಥವಾ ಮೊದಲು ಬ್ಯಾಟಿಂಗ್ ಮಾಡುವಾಗ ಉತ್ತಮ ಜೊತೆಯಾಟ ಕಟ್ಟುವುದು ಮುಖ್ಯವಾಗುತ್ತದೆ. ಮಧ್ಯಮ ಓವರ್‌ಗಳಲ್ಲಿ ನಾವು ವಿಕೆಟ್‌ಗಳನ್ನು ಕಾಯ್ದುಕೊಂಡು ರನ್ ಗತಿಯನ್ನು ಹೆಚ್ಚಿಸಬೇಕಿತ್ತು. ಬೌಲಿಂಗ್ ವಿಭಾಗದಲ್ಲೂ ನಾವು ರನ್ ನಿಯಂತ್ರಣಕ್ಕೆ ಇನ್ನಷ್ಟು ಶಿಸ್ತುಬದ್ಧ ಪ್ರದರ್ಶನ ನೀಡಬೇಕಾದ ಅಗತ್ಯವಿದೆ,' ಎಂದು ಹೇಳಿದರು.

ಟೀಮ್ ಇಂಡಿಯಾದ ಮುಂದಿನ ಗುರಿ ಏನು?

ಭಾರತ ತಂಡವು ಇತ್ತೀಚಿನ ಪಂದ್ಯಗಳಲ್ಲಿ ಸತತವಾಗಿ ಹಿನ್ನಡೆ ಅನುಭವಿಸುತ್ತಿರುವುದು ಮುಂಬರುವ ದೊಡ್ಡ ಟೂರ್ನಿಗಳ ದೃಷ್ಟಿಯಿಂದ ಕ್ರಿಕೆಟ್ ವಲಯದಲ್ಲಿ ಆತಂಕ ಮೂಡಿಸಿದೆ. ಇಂಗ್ಲೆಂಡ್ ತಂಡವು ಆಲ್‌ರೌಂಡ್ ಪ್ರದರ್ಶನದ ಮೂಲಕ ಭಾರತದ ಮೇಲೆ ಸತತ ಒತ್ತಡ ಹೇರುವಲ್ಲಿ ಯಶಸ್ವಿಯಾಗಿದೆ. ಭಾರತದ ಬ್ಯಾಟಿಂಗ್ ಪಡೆ ಇಂಗ್ಲೆಂಡ್‌ನ ಬೌಲಿಂಗ್ ತಂತ್ರಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಪರದಾಡುತ್ತಿರುವುದು ಎದ್ದುಕಾಣುತ್ತಿದೆ.

ನಾಯಕನಾಗಿ ಶ್ರೇಯಸ್ ಅಯ್ಯರ್ ಅವರಿಗೆ ಈ ಸರಣಿಯು ದೊಡ್ಡ ಸವಾಲಾಗಿ ಪರಿಣಮಿಸಿದೆ. ತಂಡದ ಪ್ರಮುಖ ಆಟಗಾರರು ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿರುವುದು ಮತ್ತು ಬೌಲರ್‌ಗಳು ರನ್ ನಿಯಂತ್ರಿಸಲು ವಿಫಲರಾಗುತ್ತಿರುವುದು ಭಾರತದ ಸೋಲಿನ ಸರಣಿಗೆ ಪ್ರಮುಖ ಕಾರಣವಾಗಿದೆ.

ಸರಣಿಯ ಉಳಿದ ಪಂದ್ಯಗಳಲ್ಲಿ ಬಲಿಷ್ಠವಾಗಿ ಪುಟಿದೇಳುವ ಭರವಸೆಯನ್ನು ಅಯ್ಯರ್ ವ್ಯಕ್ತಪಡಿಸಿದ್ದಾರೆ. 'ಈ ಸೋಲುಗಳಿಂದ ನಾವು ಪಾಠ ಕಲಿಯಬೇಕಿದೆ. ಮುಂಬರುವ ಪಂದ್ಯಗಳಲ್ಲಿ ನಮ್ಮ ಬ್ಯಾಟಿಂಗ್ ಸಂಯೋಜನೆ ಮತ್ತು ಬೌಲಿಂಗ್ ಯೋಜನೆಗಳನ್ನು ಮರುಪರಿಶೀಲಿಸಲಾಗುವುದು. ಪ್ರತಿಯೊಬ್ಬ ಆಟಗಾರನೂ ತಮ್ಮ ಜವಾಬ್ದಾರಿಯನ್ನು ಅರಿತು ಆಡಲಿದ್ದಾರೆ ಮತ್ತು ಮುಂದಿನ ಪಂದ್ಯದಲ್ಲಿ ನಾವು ಖಂಡಿತವಾಗಿಯೂ ಗೆಲುವಿನ ಹಾದಿಗೆ ಮರಳಲಿದ್ದೇವೆ,' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸರಣಿ ಕೈಜಾರುವ ಭೀತಿಯಲ್ಲಿರುವ ಭಾರತ ತಂಡಕ್ಕೆ ಮುಂದಿನ ಪಂದ್ಯಗಳು ಅತ್ಯಂತ ನಿರ್ಣಾಯಕವಾಗಿವೆ. ಒಟ್ಟಿನಲ್ಲಿ ಅವರು ಆರಂಭಿಕ ಹಂತದ ಬ್ಯಾಟರ್‌ಗಳ ಮೇಲೆ ಸೋಲಿನ ಹೊಣೆಯನ್ನು ಹೊರಿಸಿದ್ದು, ಇದು ವೈಭವ್ ಸೂರ್ಯವಂಶಿ ಅವರಿಗೆ ಹೇಳಿದಂತಿದೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+