TTD: ತಿರುಪತಿ ಬೆಟ್ಟ ಹತ್ತಿದ್ದ 116 ವರ್ಷದ ವೃದ್ಧೆ ಕರ್ನಾಟಕದವರಲ್ಲ, ತಮಿಳುನಾಡಿನವರು: ಟಿಟಿಡಿ ಸ್ಪಷ್ಟನೆ

TTD: ಯಾವುದೇ ಹಾಗೂ ಯಾರ ನೆರವಿಲ್ಲದೆ 116 ವರ್ಷದ ವೃದ್ಧೆಯೊಬ್ಬರು ತಿರುಮಲ ಬೆಟ್ಟವನ್ನು ಕಾಲ್ನಡಿಗೆಯಲ್ಲೇ ಹತ್ತಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇವರ ಅಪಾರ ಭಕ್ತಿಗೆ ದೇಶಾದ್ಯಂತ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಮೊದಲಿಗೆ ಇವರು ಕರ್ನಾಟಕದವರು ಎಂದು ಹೇಳಲಾಗಿತ್ತು. ಆದರೆ ಇದೀಗ ಬಂದ ಅಧಿಕೃತ ಮಾಹಿತಿ ಪ್ರಕಾರ ಈ ವೃದ್ಧೆ ತಮಿಳುನಾಡಿನವರು ಎಂದು ತಿಳಿದುಬಂದಿದೆ.

ಯಾವುದೇ ವಸ್ತು ಹಾಗೂ ಯಾರ ನೆರವಿಲ್ಲದೆ ತಿರುಪತಿಯ ಅತ್ಯಂತ ಕಠಿಣ ಹಾಗೂ ಐತಿಹಾಸಿಕ ಕಾಲ್ನಡಿಗೆ ಮಾರ್ಗವಾದ ಅಲಿಪಿರಿಯ ಸುಮಾರು 3,550 ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದ 116 ವರ್ಷದ ವೃದ್ಧೆಯ ಅಪಾರ ಭಕ್ತಿಯ ನಡೆ ಸದ್ಯ ದೇಶಾದ್ಯಂತ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

TTD Clarifies Identity of 116-Year-Old Woman Who Climbed Tirumala Hills Viral Devotion Story

ಕರ್ನಾಟಕದವರಲ್ಲ, ತಮಿಳುನಾಡಿನವರು

ಆರಂಭದಲ್ಲಿ ಈ ಅಪರೂಪದ ಸಾಧನೆ ಮಾಡಿದ ಈ ವೃದ್ಧೆಯನ್ನು ಕರ್ನಾಟಕ ಮೂಲದ ಲಕ್ಷ್ಮವ್ವ (ಸ್ಥಳೀಯವಾಗಿ ಇವರನ್ನು ಭೀಮವ್ವ ಎಂದೂ ಕರೆಯಲಾಗುತ್ತದೆ) ಎಂದು ಗುರುತಿಸಿ ವರದಿಯಾಗಿತ್ತು. ಆದರೆ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ತಿರುಮಲ ತಿರುಪತಿ ದೇವಸ್ಥಾನಂ ಅಧ್ಯಕ್ಷರಾದ ಬಿ.ಆರ್. ನಾಯ್ಡು ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'ಈ ಅಜ್ಜಿ ಕರ್ನಾಟಕದವರಲ್ಲ. ಬದಲಿಗೆ ತಮಿಳುನಾಡು ಮೂಲದ ನವನೀತಮ್ಮ ಎಂಬ ಹೆಸರಿನವರಾಗಿದ್ದಾರೆ. ಇವರು ಪ್ರಸ್ತುತ ತಿರುಪತಿಯಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದ್ದಾರೆ.

ವೃದ್ಧೆಯ ಸಾಧನೆಗೆ ಸಲಾಂ ಎಂದ ಸಿಎಂ

ಸುಮಾರು 11 ಕಿಲೋ ಮೀಟರ್ ಉದ್ದದ ಕಠಿಣ ಬೆಟ್ಟದ ಹಾದಿಯನ್ನು 'ಗೋವಿಂದ, ಗೋವಿಂದ' ಎಂಬ ನಾಮ ಸ್ಮರಣೆಯೊಂದಿಗೆ ಯಶಸ್ವಿಯಾಗಿ ಕ್ರಮಿಸಿದ ಈ ವೃದ್ಧೆಯ ಇಚ್ಛಾಶಕ್ತಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಸೇರಿದಂತೆ ಪ್ರಮುಖರು ಶ್ಲಾಘಿಸಿದ್ದಾರೆ. 'ನಿಜವಾದ ಭಕ್ತಿಯ ಮುಂದೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ,' ಎಂದು ಸಿಎಂ ಟ್ವೀಟ್ ಮಾಡಿದ್ದರು.

'ವಿಐಪಿ ದರ್ಶನದ ವ್ಯವಸ್ಥೆ'

ಟಿಟಿಡಿ ಅಧ್ಯಕ್ಷರ ಆದೇಶದ ಮೇರೆಗೆ ತನಿಖೆ ಕೈಗೊಂಡ ಟಿಟಿಡಿ ಅಧಿಕಾರಿಗಳು ವೃದ್ಧೆ ನವನೀತಮ್ಮ ಅವರ ಪ್ರಸ್ತುತ ವಿಳಾಸ ಮತ್ತು ಇರುವಿಕೆಯನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ವೃದ್ಧೆ ಹಾಗೂ ಅವರ ಕುಟುಂಬಸ್ಥರನ್ನು ಸಂಪರ್ಕಿಸಿರುವ ಅಧ್ಯಕ್ಷರಾದ ಬಿ.ಆರ್.ನಾಯ್ಡು ಅವರು, 'ಸೋಮವಾರ ಮುಂಜಾನೆ ಅವರಿಗೆ ಶ್ರೀ ವೆಂಕಟೇಶ್ವರ ಸ್ವಾಮಿಯ ವಿಐಪಿ ಬ್ರೇಕ್ ದರ್ಶನ ವ್ಯವಸ್ಥೆ ಕಲ್ಪಿಸಲಾಗುವುದು,' ಎಂದು ತಿಳಿಸಿದ್ದಾರೆ. ಈ ಅಪೂರ್ವ ಭಕ್ತಿಗೆ ದರ್ಶನ ಭಾಗ್ಯ ಕಲ್ಪಿಸಿಕೊಡುತ್ತಿರುವುದಕ್ಕೆ ನನಗೆ ತುಂಬಾ ಸಂತವಾಗುತ್ತಿದೆ ಅಂತಲೂ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ತಿರುಮಲ ತಿರುಪತಿ ದೇವಸ್ಥಾನಂ ಅಧ್ಯಕ್ಷರಾದ ಬಿ.ಆರ್. ನಾಯ್ಡು ಅವರು, ವೃದ್ಧೆಯ ಈ ಅದ್ಭುತ ಸಾಧನೆಯನ್ನು ಶ್ಲಾಘಿಸಿದ್ದಾರೆ. 'ಶ್ರೀ ವೆಂಕಟೇಶ್ವರ ಸ್ವಾಮಿಯ ಮೇಲಿನ ಅವರ ಈ ಅಪಾರ ಭಕ್ತಿ ಪ್ರತಿಯೊಬ್ಬರಿಗೂ ಪ್ರೇರಣೆ ನೀಡುವಂತದ್ದು,' ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಈ ವೃದ್ಧಯೆ ಸಾಹಸಕ್ಕೆ ಈಗಲೂ ಸಹ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಲಿದೆ.

ಮೊದಲಿನ ವರದಿಯಲ್ಲಿ ಏನಿದೆ?

ವೈರಲ್ ವಿಡಿಯೊದಲ್ಲಿರುವ ವೃದ್ಧೆಯನ್ನು ಕರ್ನಾಟಕದ ಹಳ್ಳಿಯೊಂದರ ಲಕ್ಷ್ಮವ್ವ (ಭೀಮವ್ವ ಎಂದೂ ಕರೆಯಲ್ಪಡುವ) ಎಂದು ಗುರುತಿಸಲಾಗಿತ್ತು. ಅವರ ವಯಸ್ಸಿನ ಅಧಿಕೃತ ಕಾನೂನಾತ್ಮಕ ದಾಖಲಾತಿಗಳು ಲಭ್ಯವಿಲ್ಲದಿದ್ದರೂ, ಅವರಿಗೆ 116 ವರ್ಷ ವಯಸ್ಸಾಗಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ ಅಂತಾ ವರದಿ ಆಗಿತ್ತು.

ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದ್ದು, ಲಕ್ಷಾಂತರ ನೆಟ್ಟಿಗರು ಅವರ ಅಪಾರ ಭಕ್ತಿಗೆ ಮನಸೋತು ಕೊಂಡಾಡಿದ್ದಾರೆ. ಈ ಹೃದಯಸ್ಪರ್ಶಿ ಕಥೆ ಉನ್ನತ ನಾಯಕರ ಗಮನವನ್ನೂ ಸೆಳೆದಿದ್ದು, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು, 'ನಿಜವಾದ ಭಕ್ತಿಯ ಮುಂದೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ,' ಎಂದು ಹೇಳಿ ಗಮನ ಸೆಳೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+