Nitin Gadkari: ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಕ್ಸ್‌ ಆಯ್ತು; ಈಗ ಡೀಸೆಲ್‌ನಲ್ಲಿ ಐಸೊಬ್ಯುಟನಾಲ್

Diesel: ಭಾರತದಲ್ಲಿ ಪೆಟ್ರೋಲ್‌ನಲ್ಲಿ ಶೇ 20ರಷ್ಟು ಎಥೆನಾಲ್ ಮಿಶ್ರಣ ಮಾಡಿದ ನಂತರ ಇದೀಗ ಡೀಸೆಲ್‌ನಲ್ಲಿಯೂ (ಬಯೋಡೀಸೆಲ್ - ಎಥೆನಾಲ್) ಜೈವಿಕ ಇಂಧನ ಮಿಶ್ರಣ ಮಾಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಡೀಸೆಲ್‌ನಲ್ಲಿ ಶೇ. 15 ರಷ್ಟು ಐಸೊಬ್ಯುಟನಾಲ್ ಮಿಶ್ರಣವನ್ನು ಪರಿಚಯಿಸುವ ಯೋಜನೆ ಪರಿಚಯಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ ಭಾರತವನ್ನು ಜೈವಿಕ ಇಂಧನ ಪರಿವರ್ತನೆಯ ಮುಂದಿನ ಹಂತಕ್ಕೆ ಕೊಂಡೊಯ್ಯುವ ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ಪಳೆಯುಳಿಕೆ ಇಂಧನ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತದಲ್ಲಿ ಪೆಟ್ರೋಲ್‌ನಲ್ಲಿ ಶೇ 20ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿರುವುದು ತೀವ್ರ ಆಕ್ಷೇಪ ಹಾಗೂ ವಿರೋಧಕ್ಕೆ ಕಾರಣವಾಗಿದೆ. ಇದರೊಂದಿಗೆ ಡೀಸೆಲ್‌ನಲ್ಲಿ ಜೈವಿಕ ಇಂಧನ ಮಿಶ್ರಣ ಮಾಡುವುದಕ್ಕೂ ಕೇಂದ್ರ ಸರ್ಕಾರ ಮುಂದಾಗಿದೆ.

ಸರ್ಕಾರದ ಪರ್ಯಾಯ ಇಂಧನ ಯೋಜನೆ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಎಥೆನಾಲ್ ಅನ್ನು ನೇರವಾಗಿ ಡೀಸೆಲ್‌ಗೆ ಮಿಶ್ರಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಎಥೆನಾಲ್‌ನಿಂದ ಐಸೊಬ್ಯುಟನಾಲ್ ಉತ್ಪಾದಿಸುವ ಕೆಲಸ ನಡೆಯುತ್ತಿದೆ. ಎಥೆನಾಲ್ ಅನ್ನು ಡೀಸೆಲ್‌ನೊಂದಿಗೆ ನೇರವಾಗಿ ಬೆರೆಸಲು ಸಾಧ್ಯವಿಲ್ಲ. ಅದಕ್ಕಾಗಿ ನಾವು ಎಥೆನಾಲ್‌ನಿಂದ ಐಸೊಬ್ಯುಟನಾಲ್ ಉತ್ಪಾದಿಸುತ್ತಿದ್ದೇವೆ. ಡೀಸೆಲ್‌ಗೆ ಪರ್ಯಾಯ ಇಂಧನವಾಗಿ ಐಸೊಬ್ಯುಟನಾಲ್ ಬಳಸಬಹುದು ಎಂದೂ ಅವರು ಹೇಳಿದ್ದಾರೆ.

Diesel

ಮುಂದುವರಿದು ಡೀಸೆಲ್‌ನಲ್ಲಿ ಶೇ.15ರಷ್ಟು ಐಸೊಬ್ಯುಟನಾಲ್ ಮಿಶ್ರಣಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಈ ಕ್ರಮವು ಭಾರತದ ಇಂಧನ ಸ್ವಾವಲಂಬನೆ ಹೆಚ್ಚಿಸಲು ಮತ್ತು ಸ್ವಚ್ಛ ಇಂಧನ ಬಳಕೆಯನ್ನು ಉತ್ತೇಜಿಸಲು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

ಡೀಸೆಲ್‌ನಲ್ಲಿ ಐಸೊಬ್ಯುಟನಾಲ್ ಯಾಕೆ - ಏನಿದು ಯೋಜನೆ

ಇನ್ನು ಈಗಾಗಲೇ ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ. ಇದೀಗ ಡೀಸೆಲ್‌ನಲ್ಲಿ ಶೇ.15ರಷ್ಟು ಐಸೊಬ್ಯುಟನಾಲ್ ಮಿಶ್ರಣಕ್ಕೆ ಸಿದ್ಧತೆ ನಡೆದಿದೆ. ಐಸೊಬ್ಯುಟನಾಲ್ ಬಣ್ಣವಿಲ್ಲದ, ಸುಲಭವಾಗಿ ಹೊತ್ತಿ ಉರಿಯುವ ನಾಲ್ಕು ಕಾರ್ಬನ್ ಹೊಂದಿರುವ ಆಲ್ಕೋಹಾಲ್ ಆಗಿದೆ. ಇದನ್ನು ಹಿಂದೆ ಕೈಗಾರಿಕೆಗಳಲ್ಲಿ ದ್ರಾವಕ (ಸಾಲ್ವೆಂಟ್) ಆಗಿ ಬಳಸಲಾಗುತ್ತಿತ್ತು. ಈಗ ಇದನ್ನು ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ಮುಂದಿನ ತಲೆಮಾರಿನ ಜೈವಿಕ ಇಂಧನ ಎಂದು ಪರಿಗಣಿಸಲಾಗುತ್ತಿದೆ. ಇದರ ಗುಣಲಕ್ಷಣಗಳು ಪೆಟ್ರೋಲಿಯಂ ಇಂಧನಕ್ಕೆ ಹತ್ತಿರವಾಗಿರುವುದರಿಂದ, ಎಥೆನಾಲ್‌ನಂತಹ ಜೈವಿಕ ಇಂಧನಗಳಿಗಿಂತ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ

ಐಸೊಬ್ಯುಟನಾಲ್ ಅನ್ನು ಹೇಗೆ ತಯಾರಿಸಲಾಗುತ್ತದೆ ?

ಐಸೊಬ್ಯುಟನಾಲ್ ಅನ್ನು ಎರಡು ವಿಧಾನಗಳಲ್ಲಿ ತಯಾರಿಸಲಾಗುತ್ತದೆ. ಮೊದಲನೆಯದಾಗಿ ಜೈವಿಕ ವಿಧಾನ ಮತ್ತೊಂದು ಪೆಟ್ರೋಕೆಮಿಕಲ್ ವಿಧಾನ. ಜೈವಿಕ ವಿಧಾನದಲ್ಲಿ ವಿಶೇಷವಾಗಿ ರೂಪಾಂತರಗೊಂಡ ಯೀಸ್ಟ್ ಅಥವಾ ಸೂಕ್ಷ್ಮಜೀವಿಗಳು ಸಸ್ಯಗಳಿಂದ ದೊರೆಯುವ ಸಕ್ಕರೆಯನ್ನು ಹುದುಗಿಸುತ್ತವೆ. ಕಬ್ಬಿನ ಸಿರಪ್, ಜೋಳ, ಮೊಲಾಸಿಸ್ ಮತ್ತು ಕೃಷಿ ತ್ಯಾಜ್ಯಗಳಿಂದ ಜೈವಿಕ ಐಸೊಬ್ಯುಟನಾಲ್ ಉತ್ಪಾದಿಸಲಾಗುತ್ತದೆ. ಈಗಿರುವ ಎಥೆನಾಲ್ ಕಾರ್ಖಾನೆಗಳನ್ನು ಕಡಿಮೆ ಬದಲಾವಣೆಯೊಂದಿಗೆ ಈ ವಿಧಾನಕ್ಕೆ ಬಳಸಬಹುದು.

ಪೆಟ್ರೋಕೆಮಿಕಲ್ ವಿಧಾನ: ಇನ್ನು ವಿಧಾನವೆಂದರೆ ಪೆಟ್ರೋಕೆಮಿಕಲ್ ವಿಧಾನ. ಈ ವಿಧಾನದಲ್ಲಿ ಪೆಟ್ರೋಲಿಯಂನಿಂದ ಐಸೊಬ್ಯುಟನಾಲ್ ತಯಾರಿಸಲಾಗುತ್ತದೆ.

ಡೀಸೆಲ್‌ಗೆ ಇದನ್ನು ಏಕೆ ಮಿಶ್ರಣ ಮಾಡಲಾಗುತ್ತದೆ ?

ಸರ್ಕಾರಗಳು ಮತ್ತು ಎಂಜಿನಿಯರ್‌ಗಳು ಹಲವು ಕಾರಣಗಳಿಂದ ಡೀಸೆಲ್‌ಗೆ ಐಸೊಬ್ಯುಟನಾಲ್ ಮಿಶ್ರಣ ಮಾಡಲು ಆದ್ಯತೆ ನೀಡುತ್ತಿದೆ. ಇದರಿಂದ ಕಚ್ಚಾ ತೈಲ ಆಮದು ಕಡಿಮೆಯಾಗುತ್ತದೆ. ಹಾನಿಕಾರಕ ಕಣಗಳ ಹೊರಸೂಸುವಿಕೆ ಕಡಿಮೆಯಾಗುತ್ತದೆ ಮತ್ತು ಸ್ಥಳೀಯ ರೈತರಿಗೆ ಸ್ಥಿರ ಆದಾಯದ ಅವಕಾಶ ಸಿಗುತ್ತದೆ ಎಂದು ಸರ್ಕಾರ ಹೇಳಿದೆ.

ನಿಮ್ಮ ದೇಶದಲ್ಲಿ ಮಾರುವ ಪೆಟ್ರೋಲ್‌ ನಮಗೆ ಬೇಡ: ಭಾರತಕ್ಕೆ ಭೂತಾನ್‌!
ನಿಮ್ಮ ದೇಶದಲ್ಲಿ ಮಾರುವ ಪೆಟ್ರೋಲ್‌ ನಮಗೆ ಬೇಡ: ಭಾರತಕ್ಕೆ ಭೂತಾನ್‌!

ಐಸೊಬ್ಯುಟನಾಲ್ ನೀರನ್ನು ಹೀರಿಕೊಳ್ಳುವುದಿಲ್ಲ ಮತ್ತು ಡೀಸೆಲ್‌ನೊಂದಿಗೆ ಸುಲಭವಾಗಿ ಮಿಶ್ರಣವಾಗುತ್ತದೆ. ಎಥೆನಾಲ್‌ಗಿಂತ ಪ್ರತಿ ಲೀಟರ್‌ಗೆ ಹೆಚ್ಚು ಶಕ್ತಿ ನೀಡುವುದರಿಂದ ವಾಹನದ ಮೈಲೇಜ್ ಮತ್ತು ಇಂಧನ ದಕ್ಷತೆ ಬಹುತೇಕ ಸಾಮಾನ್ಯ ಡೀಸೆಲ್‌ನಷ್ಟೇ ಇರುತ್ತದೆ. ಇದರ ಫ್ಲ್ಯಾಶ್ ಪಾಯಿಂಟ್ ಹೆಚ್ಚಿರುವುದರಿಂದ ಇಂಧನವನ್ನು ತುಂಬುವುದು, ಸಾಗಿಸುವುದು ಮತ್ತು ಸಂಗ್ರಹಿಸುವುದು ಹೆಚ್ಚು ಸುರಕ್ಷಿತವಾಗಿರುತ್ತದೆ. ಈಗಿರುವ ಪೈಪ್‌ಲೈನ್‌, ಟ್ಯಾಂಕ್ ಮತ್ತು ಪಂಪ್‌ಗಳಲ್ಲಿಯೇ ಯಾವುದೇ ಬದಲಾವಣೆ ಇಲ್ಲದೆ ಬಳಸಬಹುದು ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+