South Cities: ಬೆಂಗಳೂರಿಗಿಂತ ಹೈದರಾಬಾದ್‌ನಲ್ಲಿ ಹೆಚ್ಚು ದುಡ್ಡು ಉಳಿಸಬಹುದು ಎಂದ ಟೆಕ್ಕಿ, ಕನ್ನಡಿಗರು ಹೇಳಿದ್ದೇನು ?

South Cities: ಬೆಂಗಳೂರಿಗೆ ಹೊರ ಊರುಗಳಿಂದ ಬರುತ್ತಿರುವ ಹಲವರು ಇಲ್ಲಿ ದುಡಿದು ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೆ ಹಲವು ನಗರಗಳು ಪೈಪೋಟಿ ಕೊಡುತ್ತಿದ್ದು, ಬೆಂಗಳೂರಿಗಿಂತ ದಕ್ಷಿಣ ಭಾರತದ ಇನ್ನುಳಿದ ನಗರಗಳಲ್ಲಿ ಹೆಚ್ಚು ಹಣ ಉಳಿಸಬಹುದು ಎನ್ನುವ ಚರ್ಚೆ ಶುರುವಾಗಿದೆ. ಇದೀಗ ಬೆಂಗಳೂರಿಗಿಂತ ಹೈದರಾಬಾದ್‌ನಲ್ಲಿ ಹೆಚ್ಚು ಹಣ ಉಳಿತಾಯ ಮಾಡಬಹುದು ಎಂದು ಟೆಕ್ಕಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಇದಕ್ಕೆ ಹಲವು ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯಶ್ (yash.jsx) ಎನ್ನುವವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್‌ ವೈರಲ್ ಆಗಿದೆ. ಈ ಪೋಸ್ಟ್‌ನಲ್ಲಿ ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಜೀವನ ಹೇಗೆ ನಡೆಸಬಹುದು, ಎಷ್ಟು ಉಳಿತಾಯ ಮಾಡಬಹುದು ಎನ್ನುವುದನ್ನು ವಿವರಿಸಿದ್ದಾರೆ. ಆ ಪೋಸ್ಟ್‌ನಲ್ಲಿ ಬೆಂಗಳೂರಿನಲ್ಲಿ ವಾರ್ಷಿಕವಾಗಿ 2ರಿಂದ 3 ಲಕ್ಷ ರೂಪಾಯಿ ಮಾತ್ರ ಉಳಿಸಬಹುದು. ಆದರೆ, ಹೈದರಾಬಾದ್‌ನಲ್ಲಿ 5ರಿಂದ 6 ಲಕ್ಷ ರೂಪಾಯಿ ಉಳಿತಾಯ ಮಾಡಬಹುದು ಎಂದು ಹೇಳಿದ್ದಾರೆ.

South Cities

ದೇವ್ ಎನ್ನುವವರು ಬೆಂಗಳೂರಿಗೆ ಸ್ಥಳಾಂತರಗೊಂಡರು ಎಷ್ಟು ವೆಚ್ಚವಾಗುತ್ತದೆ, ಹೈದರಾಬಾದ್‌ಗೆ ಸ್ಥಳಾಂತರಗೊಂಡರೆ ಎಷ್ಟು ವೆಚ್ಚವಾಗುತ್ತದೆ ಎಂದು ವಿವರಿಸಿದ್ದಾರೆ.

ದೇವ್ ಎ ಬೆಂಗಳೂರಿಗೆ ಸ್ಥಳಾಂತರಗೊಂಡರು

- ಸಂಬಳ: ₹25 LPA (ವಾರ್ಷಿಕ)
- ಬಾಡಿಗೆ: ₹38,000/ತಿಂಗಳು (ಇಂದಿರಾನಗರ)
- ಕಚೇರಿಗೆ 5 ದಿನಗಳು/ವಾರ
- ಪ್ರತಿದಿನ ₹250 ಕಾಫಿ
- ವಾರಾಂತ್ಯದ ಬ್ರಂಚ್‌ಗಳು
- ಆಗಾಗ್ಗೆ ಕ್ಯಾಬ್ ಪ್ರಯಾಣ
- ಒಂದು ವರ್ಷದ ನಂತರ ಉಳಿತಾಯ: ~₹2-3 ಲಕ್ಷ

ದೇವ್ ಬಿ ಹೈದರಾಬಾದ್‌ಗೆ ಸ್ಥಳಾಂತರಗೊಂಡರು

- ಸಂಬಳ: ₹14 LPA
- ಬಾಡಿಗೆ: ₹12,000/ತಿಂಗಳು
- ಹೈಬ್ರಿಡ್ ಕೆಲಸ
- ಮನೆಯಲ್ಲಿ ಮಾಡಿದ ಅಡುಗೆ
- ಕನಿಷ್ಠ ಪ್ರಯಾಣ
- ಕಡಿಮೆ ಮಾಸಿಕ ವೆಚ್ಚಗಳು
- ಒಂದು ವರ್ಷದ ನಂತರ ಉಳಿತಾಯ: ~₹5-6 ಲಕ್ಷ

ವಾಸ್ತವವಾಗಿ ಯಾವ ನಗರ ಉತ್ತಮ ಹಾಗೂ ಎಲ್ಲಿ ಹೆಚ್ಚು ಉಳಿತಾಯ ಮಾಡಬಹುದು ಎಂದು ಪ್ರಶ್ನೆ ಮಾಡಿದ್ದಾರೆ.

Bidadi Land Acquisition: ಬೆಂಗಳೂರಲ್ಲಿ ಈ ಕೆಲಸ ಮಾಡಿದರೆ ಬಿಡದಿ ಟೌನ್‌ಶಿಪ್ ನಿರ್ಮಾಣ ಮಾಡುವ ಅವಶ್ಯಕತೆಯೇ ಇಲ್ಲ!
Bidadi Land Acquisition: ಬೆಂಗಳೂರಲ್ಲಿ ಈ ಕೆಲಸ ಮಾಡಿದರೆ ಬಿಡದಿ ಟೌನ್‌ಶಿಪ್ ನಿರ್ಮಾಣ ಮಾಡುವ ಅವಶ್ಯಕತೆಯೇ ಇಲ್ಲ!

ಕನ್ನಡಿಗರು - ನೆಟ್ಟಿಗರು ಹೇಳಿದ್ದೇನು

ಇನ್ನು ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಬಳವನ್ನು ಮಾತ್ರ ನೋಡಬೇಡಿ, ನಿಮ್ಮ ಖರ್ಚನ್ನೂ ಆಯ್ಕೆ ಸುಧಾರಿಸಿಕೊಳ್ಳಿ. ಇಂದಿರಾನಗರದಲ್ಲಿ ಬಾಡಿಗೆಗೆ ಕೊಡುವ ಹಣದಲ್ಲೇ ಬೇರೆ ನಗರದಲ್ಲಿ ಸರಳ ಮತ್ತು ನೆಮ್ಮದಿಯ ಜೀವನ ನಡೆಸಬಹುದು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. 38 ಸಾವಿರ ಬಾಡಿಗೆ, ಬೆಂಗಳೂರಿನಲ್ಲಿ ಇದಕ್ಕಿಂತ ಅರ್ಧ ದುಡ್ಡಿಗೆ ಅಥವಾ ಕಡಿಮೆಗೆ ಬಾಡಿಗೆ ಮನೆಗಳು ಸಿಗುತ್ತವೆ. 20ರಿಂದ 25 ಸಾವಿರ ರೂಪಾಯಿಗೆ ಬಾಡಿಗೆ ಮನೆಗಳು ಸಿಗುತ್ತವೆ. ₹250 ಕಾಫಿ ಸ್ಟಾರ್‌ಬಕ್ಸ್ ಅನ್ನು ಏಕೆ ಆರಿಸಬೇಕು, ವಾರಾಂತ್ಯದ ಬ್ರಂಚ್ ನಾವು ನಿಮ್ಮನ್ನು TAJ ಅಥವಾ ITC ನಲ್ಲಿ ಬ್ರಂಚ್ ಮಾಡಲು ಕೇಳಲಿಲ್ಲ. ನಿಮ್ಮ ಫ್ಯಾಷನಬಲ್ ಜೀವನಶೈಲಿಗಳಿಗೆ ಬೆಂಗಳೂರು ಕಾರಣವಾಗಲು ಸಾಧ್ಯವಿಲ್ಲ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+