ಮೂರನೇ ಬಾರಿ ಹಸೆಮಣೆ ಏರಿದ ಅಮೀರ್ ಖಾನ್: ಬೆಂಗಳೂರು ಮೂಲದ ಗೌರಿ ಸ್ಪ್ರ್ಯಾಟ್ ಜೊತೆ ಸರಳ ವಿವಾಹ

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ (61) ತಮ್ಮ ಪ್ರೇಯಸಿ ಬೆಂಗಳೂರು ಮೂಲದ ಗೌರಿ ಸ್ಪ್ರ್ಯಾಟ್ ಜೊತೆ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಮುಂಬೈನ ಬಾಂದ್ರಾದಲ್ಲಿರುವ ಅಮೀರ್ ಖಾನ್ ಅವರ ನಿವಾಸದಲ್ಲಿ ಅತ್ಯಂತ ಖಾಸಗಿಯಾಗಿ ಮತ್ತು ಸರಳವಾಗಿ ವಿವಾಹವಾಗಿದ್ದಾರೆ. ಮೊದಲು ರಿಜಿಸ್ಟರ್ಡ್ ಮ್ಯಾರೇಜ್ ಮಾಡಿಕೊಂಡ ದಂಪತಿ, ಆನಂತರ ಕುಟುಂಬಸ್ಥರು ಹಾಗೂ ಹಳೆಯ ಸ್ನೇಹಿತರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಒಂದಾಗಿದ್ದಾರೆ. ಈ ಮದುವೆಗೆ ಇಬ್ಬರ ಹಿಂದಿನ ದಾಂಪತ್ಯದ ಮಕ್ಕಳೂ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.

ಮದುವೆಗೆ ಆಗಮಿಸಿದ್ದ ಗಣ್ಯರು

ಅಮೀರ್ ಖಾನ್ ಅವರ ಮದುವೆ ಅಧಿಕೃತವಾಗಿ ನಡೆದಿರುವುದನ್ನು ಅವರ ಆಪ್ತರು ಖಚಿತಪಡಿಸಿದ್ದಾರೆ. ಈ ಖಾಸಗಿ ಸಮಾರಂಭಕ್ಕೆ ಅಮೀರ್ ಖಾನ್ ಅವರ ಮಕ್ಕಳಾದ ಇರಾ ಖಾನ್ ಮತ್ತು ಜುನೈದ್ ಖಾನ್ ಮುಂಚಿತವಾಗಿಯೇ ಆಗಮಿಸಿದ್ದರು. ಇವರೊಂದಿಗೆ ಅಮೀರ್ ಅವರ ಆಪ್ತ ಗೆಳೆಯ ಹಾಗೂ 'ಲಗಾನ್' ಚಿತ್ರದ ನಿರ್ದೇಶಕ ಅಶುತೋಷ್ ಗೋವಾರಿಕರ್, ನಟಿ ಎಲ್ಲೀ ಅವ್ರಾಮ್, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ರಾಜಕಾರಣಿ ರಾಜ್ ಠಾಕ್ರೆ ಮತ್ತು ಕಾಮಿಡಿಯನ್ ವೀರ್ ದಾಸ್ ಸೇರಿದಂತೆ ಹಲವು ಪ್ರಮುಖ ಗಣ್ಯರು ಆಗಮಿಸಿ ನವದಂಪತಿಗೆ ಶುಭ ಹಾರೈಸಿದರು.

Aamir Khan

ಬೆಂಗಳೂರಿನಲ್ಲಿ ಚಿಗುರಿದ್ದ ಪ್ರೇಮಕಥೆ

ಅಮೀರ್ ಖಾನ್ ಮತ್ತು ಗೌರಿ ಸ್ಪ್ರ್ಯಾಟ್ ಅವರ ಪರಿಚಯ ಇಂದಿನದಲ್ಲ, ಸುಮಾರು 25 ವರ್ಷಗಳಷ್ಟೇ ಹಳೆಯದು. ಆದರೆ, 2024 ರಲ್ಲಿ ಆಮೀರ್ ಖಾನ್ ಅವರ ಸೋದರಸಂಬಂಧಿ ನುಜಹತ್ ಖಾನ್ ಅವರ ಮೂಲಕ ಬೆಂಗಳೂರಿನಲ್ಲಿದ್ದ ಗೌರಿ ಅವರೊಂದಿಗೆ ಅಮೀರ್‌ಗೆ ಮತ್ತೆ ಸಂಪರ್ಕ ಏರ್ಪಟ್ಟಿತ್ತು. ಅಲ್ಲಿಂದ ಇವರ ನಡುವೆ ಪ್ರೀತಿ ಆರಂಭವಾಯಿತು. ಸುಮಾರು ಒಂದು ವರ್ಷಗಳ ಕಾಲ ಇವರು 'ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್'ನಲ್ಲಿದ್ದರು. ಆನಂತರ, ಮಾರ್ಚ್ 2025ರಲ್ಲಿ ತಮ್ಮ 60ನೇ ಜನ್ಮದಿನದ ಸಂದರ್ಭದಲ್ಲಿ ಆಮೀರ್ ಖಾನ್ ಅವರು ಗೌರಿ ಅವರನ್ನು ತಮ್ಮ ಪಾರ್ಟ್ನರ್ ಎಂದು ಅಧಿಕೃತವಾಗಿ ಪರಿಚಯಿಸಿದ್ದರು.

ಆ ಸಮಯದಲ್ಲಿ ತಮಗೆ ಮೂರನೇ ಮದುವೆಯಾಗುವ ಯಾವುದೇ ಆಲೋಚನೆ ಇಲ್ಲ ಎಂದು ಅಮೀರ್ ಹೇಳಿದ್ದರಾದರೂ, ಗೌರಿ ಜೊತೆ ತಮಗೆ ನೆಮ್ಮದಿ ಸಿಕ್ಕಿದೆ ಎಂದಿದ್ದರು. ತದನಂತರ ಗೌರಿ ಅವರು ತಮ್ಮ ಮೊದಲ ಮದುವೆಯ ಮಗನೊಂದಿಗೆ ಬೆಂಗಳೂರಿನಿಂದ ಮುಂಬೈಗೆ ಶಿಫ್ಟ್ ಆಗಿ, ಕಳೆದ ಒಂದು ವರ್ಷದಿಂದ ಅಮೀರ್ ಜೊತೆ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಈ ಹಿಂದೆ ಹೇರ್‌ಕೇರ್ ಬ್ರಾಂಡ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಗೌರಿ, ಸದ್ಯ ಕಳೆದ ತಿಂಗಳಷ್ಟೇ 25ನೇ ವರ್ಷದ ಸಂಭ್ರಮ ಆಚರಿಸಿದ 'ಆಮೀರ್ ಖಾನ್ ಪ್ರೊಡಕ್ಷನ್ಸ್' ಸಂಸ್ಥೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

Gauri Spratt: ಅಮೀರ್‌ ಖಾನ್‌ ಮೆಚ್ಚಿದ ಬೆಂಗಳೂರು ಬೆಡಗಿ ಗೌರಿ ಅವರ ಹಿನ್ನೆಲೆ ಏನು?
Gauri Spratt: ಅಮೀರ್‌ ಖಾನ್‌ ಮೆಚ್ಚಿದ ಬೆಂಗಳೂರು ಬೆಡಗಿ ಗೌರಿ ಅವರ ಹಿನ್ನೆಲೆ ಏನು?

ಅಮೀರ್ ಖಾನ್ ಮೊದಲೆರಡು ಮದುವೆ

ಇದು ಆಮೀರ್ ಖಾನ್ ಅವರ ಮೂರನೇ ಮದುವೆಯಾಗಿದೆ. ಅಮೀರ್ ಮೊದಲ ಬಾರಿಗೆ 1986 ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು. ಇವರಿಗೆ ನಟ ಜುನೈದ್ ಖಾನ್ ಮತ್ತು ಉದ್ಯಮಿ ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇರಾ ಖಾನ್ ಇತ್ತೀಚೆಗಷ್ಟೇ ಫಿಟ್‌ನೆಸ್ ಟ್ರೈನರ್ ನೂಪುರ್ ಶಿಖರೆ ಅವರನ್ನು ವರಿಸಿದ್ದಾರೆ. ರೀನಾ ಹಾಗೂ ಅಮೀರ್ 2002ರಲ್ಲಿ ವಿಚ್ಛೇದನ ಪಡೆದರು. 2004ರಿಂದ ಕಿರಣ್ ರಾವ್ ಅವರನ್ನು ಪ್ರೀತಿಸತೊಡಗಿದ ಅಮೀರ್, 2005ರಲ್ಲಿ ಮದುವೆಯಾದರು. ಇವರಿಗೆ 2011ರಲ್ಲಿ ಬಾಡಿಗೆ ತಾಯ್ತನದ ಮೂಲಕ ಆಜಾದ್ ಎಂಬ ಮಗ ಜನಿಸಿದನು. 2021ರಲ್ಲಿ ಇವರಿಬ್ಬರೂ ವಿಚ್ಛೇದನ ಪಡೆದರೂ, ಮಗನ ಜವಾಬ್ದಾರಿಯನ್ನು ಜಂಟಿಯಾಗಿ ನೋಡಿಕೊಳ್ಳುತ್ತಿದ್ದಾರೆ.

ವಿಚ್ಛೇದನದ ಬಳಿಕವೂ ಮುಂದುವರಿದ ಸ್ನೇಹ

ವಿಶೇಷವೆಂದರೆ ಅಮೀರ್ ಖಾನ್ ತಮ್ಮ ಇಬ್ಬರೂ ಮಾಜಿ ಪತ್ನಿಯರೊಂದಿಗೆ ಇಂದಿಗೂ ಉತ್ತಮ ಒಡನಾಟ ಹೊಂದಿದ್ದಾರೆ. ಕಿರಣ್ ರಾವ್ ಅವರು ತಮ್ಮದೇ ಆದ ಹೊಸ ಪ್ರೊಡಕ್ಷನ್ ಹೌಸ್ ಆರಂಭಿಸಿದ್ದರೂ, 'ಆಮೀರ್ ಖಾನ್ ಪ್ರೊಡಕ್ಷನ್ಸ್' ಸಂಸ್ಥೆಯ ಬೋರ್ಡ್ ಮೆಂಬರ್ ಆಗಿ ಮುಂದುವರಿದಿದ್ದಾರೆ. ಇತ್ತೀಚೆಗೆ ಸೂಪರ್ ಹಿಟ್ ಆದ 'ಲಾಪತಾ ಲೇಡೀಸ್' ಚಿತ್ರವನ್ನು ಇವರಿಬ್ಬರೂ ಜೊತೆಯಾಗಿಯೇ ನಿರ್ಮಿಸಿದ್ದರು. ಅಷ್ಟೇ ಅಲ್ಲದೆ, ಆಮೀರ್, ರೀನಾ ದತ್ತಾ ಮತ್ತು ಕಿರಣ್ ರಾವ್ ಮೂವರೂ ಸೇರಿ 'ಪಾನಿ ಫೌಂಡೇಶನ್' ಎಂಬ ಸಾಮಾಜಿಕ ಸಂಸ್ಥೆಯನ್ನು ಇಂದಿಗೂ ಒಟ್ಟಾಗಿಯೇ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+