Daily Horoscope July 6: ಇಂದಿನ 12 ರಾಶಿ ಭವಿಷ್ಯ; ಯಾರಿಗೆ ಹಣದ ಲಾಭ, ಯಾರಿಗೆ ಉದ್ಯೋಗದಲ್ಲಿ ಯಶಸ್ಸು
Daily Horoscope Today July 6: ಸೋಮವಾರ ಜುಲೈ 6ರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ. ಇಂದಿನ 12 ರಾಶಿ ಭವಿಷ್ಯ; ಯಾರಿಗೆ ಹಣದ ಲಾಭ, ಯಾರಿಗೆ ಉದ್ಯೋಗದಲ್ಲಿ ಯಶಸ್ಸು ಎನ್ನುವ ವಿವರ ಇಲ್ಲಿದೆ.
ಮೇಷ ರಾಶಿ (Aries):
ಇಂದಿನ ದಿನ ನಿಮಗೆ ಅತ್ಯಂತ ಸಂತೋಷಕರವಾಗಿರುತ್ತದೆ. ಹೊಸ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗುವಿರಿ. ಮಹಿಳಾ ಉದ್ಯಮಿಗಳಿಗೆ ಕೆಲಸದ ಒತ್ತಡ ಹೆಚ್ಚಿರುವುದು. ಆದರೂ ಸಂಜೆಯ ವೇಳೆಯನ್ನು ಕುಟುಂಬದೊಂದಿಗೆ ಸಂತೋಷದಿಂದ ಕಳೆಯುವಿರಿ.
ವೃಷಭ ರಾಶಿ (Taurus):
ಇಂದು ನಿಮಗೆ ಮಿಶ್ರಫಲ ನೀಡುವ ದಿನ. ಕೆಲಸದ ಒತ್ತಡದ ನಡುವೆಯೂ ಕುಟುಂಬದೊಂದಿಗೆ ಸಮಯ ಕಳೆಯುವುದು ಅವಶ್ಯಕ. ಸರ್ಕಾರಿ ನೌಕರರಿಗೆ ಇಷ್ಟವಾದ ಕೆಲಸ ಸಿಗಲಿದೆ. ವ್ಯಾಪಾರದಲ್ಲಿ ಹೊಸ ಒಪ್ಪಂದ ಮಾಡಿಕೊಳ್ಳುವುದಕ್ಕೆ ಉತ್ತಮ ದಿನ. ಹಣಕಾಸಿನ ಲಾಭವಾಗುವುದು.

ಮಿಥುನ ರಾಶಿ (Gemini):
ಕೌಟುಂಬಿಕ ಭಿನ್ನಾಭಿಪ್ರಾಯಗಳು ದೂರವಾಗಲಿವೆ. ಬೇರೆಯವರ ವಿಚಾರದಲ್ಲಿ ಅನಗತ್ಯ ಸಲಹೆ ನೀಡದಿರುವುದು ಸೂಕ್ತ. ತಾಳ್ಮೆಯಿಂದ ವರ್ತಿಸಿದರೆ ಅಂದುಕೊಂಡ ಕೆಲಸಗಳು ನೆರವೇರುತ್ತವೆ. ಕಷ್ಟದ ಸಮಯದಲ್ಲಿ ಸ್ನೇಹಿತರು ಸಹಾಯಕ್ಕೆ ಬರುವರು. ಆರೋಗ್ಯಕ್ಕಾಗಿ ಧ್ಯಾನ ಮಾಡಿ.
ಕರ್ಕ ರಾಶಿ (Cancer):
ಇಂದು ಕೆಲಸದಲ್ಲಿ ಮುಳುಗಿ ಹೋಗುವಿರಿ. ವೈಯಕ್ತಿಕ ಕೆಲಸಗಳಿಗೆ ಅವಕಾಶವೇ ಇರುವುದಿಲ್ಲ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಮೂಡುವುದು. ಸಿನಿಮಾ ರಂಗದವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಮಕ್ಕಳ ಕಡೆಯಿಂದ ಸಿಹಿ ಸುದ್ದಿ ಕೇಳಿಬರಲಿದೆ. ಹಿರಿಯರ ಮಾರ್ಗದರ್ಶನ ಲಾಭದಾಯಕವಾಗಿ ಇರುವುದು.
ಸಿಂಹ ರಾಶಿ (Leo):
ಬಹುದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ರಾಜಕೀಯ ವ್ಯಕ್ತಿಗಳ ಸಹಾಯದಿಂದ ಲಾಭವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು. ಆರೋಗ್ಯ ಉತ್ತಮವಾಗಿರುವುದು. ಆರ್ಥಿಕ ಸ್ಥಿತಿ ಸ್ಥಿರವಾಗಿರುವುದು.
ಕನ್ಯಾ ರಾಶಿ (virgo):
ಸಹೋದರ-ಸಹೋದರಿಯರೊಂದಿಗೆ ಇದ್ದ ಮನಸ್ತಾಪಗಳು ದೂರವಾಗಲಿವೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ನಿಮಗೆ ಗೆಲುವಾಗಲಿದೆ. ವಿದ್ಯಾರ್ಥಿಗಳು ಪ್ರಾಜೆಕ್ಟ್‌ಗಳ ಮೇಲೆ ಹೆಚ್ಚಿನ ಗಮನ ಹರಿಸುವಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಣಕಾಸಿನ ಸ್ಥಿತಿ ಸುಧಾರಿಸುವುದು.
ತುಲಾ ರಾಶಿ (Libra):
ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮದ ಅಗತ್ಯವಿದೆ. ವಿದೇಶಿ ವ್ಯಾಪಾರದಲ್ಲಿ ನಿರೀಕ್ಷಿತ ಲಾಭವಾಗುವುದು. ಹೂಡಿಕೆ ಮಾಡುವ ಮುನ್ನ ಯೋಚಿಸಿ ನಿರ್ಧಾರ ಕೈಗೊಳ್ಳಿ. ಹಣಕಾಸಿನ ವಿಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಜಾಗರೂಕರಾಗಿರುವುದು ಅಗತ್ಯ.
ವೃಶ್ಚಿಕ ರಾಶಿ (Scoprio):
ಇಂದು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಕೆಲಸದ ಸ್ಥಳದಲ್ಲಿ ಪ್ರಮುಖ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಿರಿ. ವರ್ಗಾವಣೆ ಬಯಸುವವರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆಯಿದೆ. ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು.
ಧನು ರಾಶಿ (Sagitarius):
ಮಧ್ಯಾಹ್ನದ ನಂತರ ಪರಿಸ್ಥಿತಿ ನಿಮ್ಮ ಪರವಾಗಿರುತ್ತದೆ. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಇದು ಸಕಾಲ. ಇಂದು ಮಾಡಿದ ಹೂಡಿಕೆ ಭವಿಷ್ಯದಲ್ಲಿ ಲಾಭವಾಗುವುದು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮನೆ ಖರೀದಿ ಬಗ್ಗೆ ಯೋಚಿಸಬಹುದು.
ಮಕರ ರಾಶಿ (Capricorn):
ಉದ್ಯಮದಲ್ಲಿ ಲಾಭವಾಗುವ ಸಂಭವವಿದೆ. ರಾಜಕೀಯ ಆಸಕ್ತರಿಗೆ ಉನ್ನತ ಹುದ್ದೆ ಸಿಗುವ ಯೋಗವಿದೆ. ದಾಂಪತ್ಯದಲ್ಲಿ ಸುಖ, ಶಾಂತಿ ನೆಲೆಸಲಿದೆ. ಹೊಸ ಕೆಲಸ ಆರಂಭಿಸಲು ಉತ್ತಮ ದಿನ.
ಕುಂಭ ರಾಶಿ (Aquarius):
ಸಂದರ್ಶನಗಳಿಗೆ ಹಾಜರಾಗುವವರಿಗೆ ಯಶಸ್ಸು ಖಚಿತ. ವಿದ್ಯಾರ್ಥಿಗಳ ಪಾಲಿಗೆ ಇಂದು ಉತ್ತಮ ದಿನ. ಹೊಸ ಉದ್ಯಮ ಆರಂಭಿಸುವ ಮುನ್ನ ಅನುಭವಿಗಳ ಸಲಹೆ ಪಡೆಯಿರಿ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಮೀನ ರಾಶಿ (Pisces):
ಭೂಮಿ-ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಸಿಗಲಿದೆ. ದೊಡ್ಡ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮುನ್ನ ಹಿರಿಯರ ಸಲಹೆ ಪಡೆದುಕೊಳ್ಳಿ. ಉದ್ಯೋಗ ಬದಲಾವಣೆ ಮಾಡಲು ಇದು ಸಕಾಲ. ಮಕ್ಕಳ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications