ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡಿಎಸ್ ಮತ್ತು ಮೂರು ರಕ್ಷಣಾ ಪಡೆ ಮುಖ್ಯಸ್ಥರಿಂದ ಇಂದು 6 ಗಂಟೆಗೆ ಸುದ್ದಿಗೋಷ್ಠಿ

|
Google Oneindia Kannada News

ದೆಹಲಿ, ಮೇ 1: ಭಾರತದ ಪ್ರಥಮ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್, ದೇಶದ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರ ಜೊತೆ ಇಂದು ಸಂಜೆ 6 ಗಂಟೆಗೆ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

Recommended Video

ಲಾಕ್ ಡೌನ್ ಸಡಿಲ ಪಡಿಸಲು ಸಿದ್ದರಾಮಯ್ಯ ಕೊಟ್ಟ ಮಾಸ್ಟರ್ ಪ್ಲಾನ್ ಇದು | Siddaramaiah | Oneindia Kannada

ಯಾವ ವಿಚಾರದ ಬಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆದರೆ, ಇದು ಕೊರೊನಾ ವೈರಸ್‌ ವಿಚಾರಕ್ಕೆ ಸಂಬಂಧಿಸಿದ ಮಾಧ್ಯಮಗೋಷ್ಠಿ ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ಮತ್ತು ಅದರ ವಿರುದ್ಧ ರಕ್ಷಣಾ ಪಡೆಗಳಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಿಡಿಎಸ್ ಮುಖ್ಯಸ್ಥರು ಮಾಹಿತಿ ನೀಡುವ ಸಾಧ್ಯತೆ ಇದೆ.

ಮೇ 3ರಂದು ಲಾಕ್‌ಡೌನ್‌ ಮುಕ್ತಾಯವಾಗಲಿದೆ. ಅದಾದ ಬಳಿಕ ಮುಖ್ಯಸ್ಥರ ನಡೆ ಏನು ಎಂಬುದರ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. ಅಂದ್ಹಾಗೆ, ಸಿಡಿಎಸ್ ಆಗಿ ನೇಮಕಗೊಂಡ ಬಳಿಕ ಬಿಪಿನ್ ರಾವತ್ ಅವರು ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರ ಜೊತೆ ಜಂಟಿ ಸುದ್ದಿಗೋಷ್ಠಿ ಮಾಡುತ್ತಿರುವುದು ಸಹಜವಾಗಿ ಕುತೂಹಲ ಮೂಡಿಸಿದೆ.

ಇಂದು ಸಂಜೆ 6 ಗಂಟೆಗೆ ನಡೆಯಲಿರುವ ಈ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭೂಸೇನೆ ಮುಖ್ಯಸ್ಥರಾಗಿರುವ ಜನರಲ್ ಮುಕುಂದ್ ನರವಣೆ, ನೌಕಾಸೇನೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಹಾಗೂ ವಾಯುಸೇನೆ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಬದೌರಿಯಾ ಭಾಗವಹಿಸಲಿದ್ದಾರೆ.

ಈ ವಾರದ ಆರಂಭದಲ್ಲಿ ಸೇನೆಯು ತನ್ನ ಸಿಬ್ಬಂದಿಗಳಿಗೆ ತಮ್ಮ ಫೋನ್‌ಗಳು ಹ್ಯಾಕ್‌ ಆಗುವುದರ ಬಗ್ಗೆ ಎಚ್ಚರಿಕೆ ನೀಡಿತ್ತು. ಪಾಕಿಸ್ತಾನ ಏಜೆನ್ಸಿಗಳು ಆರೋಗ್ಯ ಸೇತು ಆಪ್ ಹೋಲುವಂತಹ ಆಪ್ ಬಳಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿತ್ತು.

Chief Of Defence Staff And 3 Service Chiefs To Address Media At 6 Pm Today

ಹಾಗಾಗಿ, 'ಮೈಗೋವ್.ಇನ್' ವೆಬ್‌ಸೈಟ್‌ನ ಅಧಿಕೃತ ಲಿಂಕ್‌ಗಳಿಂದ ಮಾತ್ರ 'ಆರೋಗ್ಯಾ ಸೇತು' ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕೆಂದು ಸಲಹೆಗಾರರಿಗೆ ಸಿಬ್ಬಂದಿಗೆ ಶಿಫಾರಸು ಮಾಡಿತ್ತು.

English summary
Chief of Defence Staff General Bipin Rawat and three service chiefs to hold press conference on important issues at 6 pm today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X