• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸೋಂಕಿತೆ ಮೇಲೆ ವೈದ್ಯನಿಂದ 2 ಬಾರಿ ಅತ್ಯಾಚಾರಕ್ಕೆ ಯತ್ನ

|

ಲಕ್ನೋ, ಜುಲೈ 22: ಕೊರೊನಾ ಸೋಂಕಿತೆ ಮೇಲೆ ವೈದ್ಯನೊಬ್ಬ ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಅಲಿಗಢದ ಆಸ್ಪತ್ರೆಯಲ್ಲಿ ನಡೆದಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

28 ವರ್ಷದ ಕೊರೊನಾ ಸೋಂಕಿತೆ ಅಲಿಗಢದಲ್ಲಿರುವ ಡಿಡಿಯು ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ವೈದ್ಯ ಡ್ಯೂಟಿಯಲ್ಲಿರದಿದ್ದರೂ ಕೂಡ ಸೋಂಕಿತೆ ರೂಮಿಗೆ ಬಂದು ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

ಮಹಾರಾಷ್ಟ್ರ: ಕೊವಿಡ್ ಕ್ವಾರಂಟೈನ್ ಕೇಂದ್ರದಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಪೊಲೀಸರು ಸಂತ್ರಸ್ತೆಯ ದೂರಿನ ಮೇರೆಗೆ ಐಪಿಸಿ ಸೆಕ್ಸನ್ 376(2)ರಡಿ ಪ್ರಕರಣ ದಾಖಲಿಸಿದ್ದಾರೆ.ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ ಬಳಿಕವೇ ಈ ಪ್ರಕರಣ ಬೆಳಕಿಗೆ ಬಂದಿದೆ. ಆಕೆ ಅಲಿಗಢದ ನಿವಾಸಿಯಾಗಿದ್ದಾಳೆ. ವೈದ್ಯನನ್ನು ಬಂಧಿಸಲಾಗಿದೆ.

ಕೊರೊನಾ ಲಕ್ಷಣಗಳಿದ್ದರೂ ಜನರು ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಿದ್ದಾರೆ. ಇಂತಹ ಘಟನೆಗಳು ನಡೆದ ಬಳಿಕ ಮತ್ತಷ್ಟು ಹಿಂದೇಟು ಹಾಕುತ್ತಾರೆ.

ವೈದ್ಯರು ರೋಗವನ್ನು ಗುಣಪಡಿಸಬಲ್ಲರು ಎಂಬ ಒಂದೇ ಒಂದು ನಂಬಿಕೆಯಿಂದ ಆಸ್ಪತ್ರೆಗೆ ಹೋಗುತ್ತಾರೆ ಆದರೆ ಇಂತಹ ಕೆಲವು ವೈದ್ಯರಿಂದಾಗಿ ಎಲ್ಲಾ ವೈದ್ಯರಿಗೆ ಕೆಟ್ಟ ಹೆಸರು ಬಂದಂತಾಗುತ್ತದೆ.

English summary
In a shameful incident, an off duty doctor attempted to rape a COVID-19 positive patient twice at Aligarh Hospital in Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X