Government Jobs: ಬೆಂಗಳೂರಿನಲ್ಲೇ ಸರ್ಕಾರಿ ಉದ್ಯೋಗ ನೇಮಕಾತಿ, ಮಾಹಿತಿ ಇಲ್ಲಿದೆ
ಬೆಂಗಳೂರು, ಏಪ್ರಿಲ್ 24: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT) ತನ್ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT) ತನ್ನಲ್ಲಿ ಒಟ್ಟು ಒಂದು ಕ್ವಾಲಿಟೇಟಿವ್ ರಿಸರ್ಚರ್ ಹುದ್ದೆಗೆ ನೇಮಕಾತಿ ಆರಂಭಿಸಿದೆ. ಇದು ಸರ್ಕಾರಿ ಉದ್ಯೋಗವಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಸಲ್ಲಿಕೆ ಕೊನೆ ದಿನಾಂಕ ಹಾಗೂ ನೇಮಕಾತಿ ಪೂರ್ಣ ಮಾಹಿತಿ ಇಲ್ಲಿ ತಿಳಿಯರಿ.
ನೇಮಕಾತಿ ಪೂರ್ಣ ವಿವರ
ಸಂಸ್ಥೆ ಹೆಸರು: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್
ಹುದ್ದೆ ಹೆಸರು: ಕ್ವಾಲಿಟೇಟಿವ್ ರಿಸರ್ಚರ್ ಹುದ್ದೆ
ಎಷ್ಟು ಹುದ್ದೆ: ಒಂದು ಹುದ್ದೆ
ಪೊಸ್ಟಿಂಗ್: ಬೆಂಗಳೂರು
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 2024 ಏಪ್ರಿಲ್ 30
ವೇತನ: ನಿಗದಿಪಡಿಸಿಲ್ಲ
ಶೈಕ್ಷಣಿಕ ಅರ್ಹತೆ
ಅರ್ಹ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಪಬ್ಲಿಕ್ ಹೆಲ್ತ್/ಎಪಿಡೆಮಿಯಾಲಜಿ/ಸೋಷಿಯಲ್ ಸೈನ್ಸಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು ಎಂದು ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ಅಧಿಸೂಚನೆಯಲ್ಲಿ ಮಾಹಿತಿ ನೀಡಿದೆ.

ವಯಸ್ಸಿನ ಮಿತಿ
ಅರ್ಜಿ ಸಲ್ಲಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು ಎಂದು ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ತಿಳಿಸಿದೆ.
ಅರ್ಜಿ ಶುಲ್ಕ
ಯಾವ ಅಭ್ಯರ್ಥಿಗಳಿಗೂ ಯಾವುದೇ ಅರ್ಜಿ ಶುಲ್ಕ ನಿಗದಿ ಮಾಡಲಾಗಿಲ್ಲ. ಅರ್ಜಿ ಸಲ್ಲಿಸುವವರನ್ನು ಸಂದರ್ಶನ ಮೂಲಕವೇ ನೇರವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಇಲ್ಲಿ ನೀಡಲಾಗಿರುವ (https://www.khpt.org/work-with-us/) ಮೂಲಕ ನೀವು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬುದು. ಯಾವುದಕ್ಕೆ ಒಮ್ಮೆ ಅಧಿಸೂಚನೆ ಓದಿಕೊಂಡು ಅರ್ಜಿ ಸಲ್ಲಿಸಿದರೆ ಒಳಿತು.
ಪ್ರಮುಖ ದಿನಗಳು
ಅರ್ಜಿ ಸಲ್ಲಿಕೆ ಆರಂಭ ದಿನ: 2024 ಏಪ್ರಿಲ್ 22
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2024 ಏಪ್ರಿಲ್ 30












Click it and Unblock the Notifications