Get Updates
Get notified of breaking news, exclusive insights, and must-see stories!

ಯೋಗಿ ವಿರುದ್ಧ ಪೋಸ್ಟ್: ಬಾಲಕನಿಗೆ ಶಿಕ್ಷೆಯಾಗಿ ಗೋಶಾಲೆಯಲ್ಲಿ ಕೆಲಸ

ಮೊರಾದಾಬಾದ್ ಮೇ 24: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿರುವ ಜುವೆನೈಲ್ ಜಸ್ಟೀಸ್ ಬೋರ್ಡ್ (ಜೆಜೆಬಿ) 15 ವರ್ಷದ ಬಾಲಕನಿಗೆ ಒಂದು ವಿಶಿಷ್ಟ ಶಿಕ್ಷೆಯನ್ನು ನೀಡಿದೆ. ಅದು ಬಾಲಕನಿಗೆ ಗೋಶಾಲೆಯಲ್ಲಿ 15 ದಿನಗಳ ಕಾಲ ಕೆಲಸ ಮಾಡುವಂತೆ ಆದೇಶಿಸಿದೆ. ಮಾತ್ರವಲ್ಲದೆ ಬಾಲಕ 15 ದಿನಗಳ ಕಾಲ ಸಾರ್ವಜನಿಕ ಸ್ಥಳವನ್ನು ಸ್ವಚ್ಛಗೊಳಿಸಬೇಕು ಎಂದು ಹೇಳಿದೆ. ಅಷ್ಟಕ್ಕೂ ಈ ಶಿಕ್ಷೆ ಯಾಕಾಗಿ ಅಂದರೆ..

ಒಂದು ತಿಂಗಳ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ 'ಆಕ್ಷೇಪಾರ್ಹ' ಪೋಸ್ಟ್ ಅನ್ನು ಹಂಚಿಕೊಂಡಿದ್ದಕ್ಕಾಗಿ ಬಾಲಕ ತಪ್ಪಿತಸ್ಥನೆಂದು ಕಂಡುಬಂದಿದೆ.

Boy Who Posted Against CM Yogi Made To Work in Cow Shelter As Punishment

"ಆರೋಪಿ ಸಾಮಾಜಿಕ ಮಾಧ್ಯಮದಲ್ಲಿ ಉದ್ರೇಕಕಾರಿ ಸಂದೇಶದೊಂದಿಗೆ ಮುಖ್ಯಮಂತ್ರಿಯ ಮಾರ್ಫ್ ಮಾಡಿದ ಚಿತ್ರವನ್ನು ಹಂಚಿಕೊಂಡಿದ್ದಾನೆ. ಇದರಿಂದ ಸಹಸ್ವಾನ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ರಾಜೇಶ್ ಕುಮಾರ್ ಅವರು ಎಫ್‌ಐಆರ್ ದಾಖಲಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಬಾಲಕನ ವಿರುದ್ಧ ಐಪಿಸಿಯ ಸೆಕ್ಷನ್ 505 (ಸಾರ್ವಜನಿಕ ಕಿಡಿಗೇಡಿತನ) ಜೊತೆಗೆ ಐಟಿ ಕಾಯಿದೆಯ ಸೆಕ್ಷನ್ 67 ರ ಅಡಿಯಲ್ಲಿ ಆತನನ್ನು ಬಾಲಾಪರಾಧಿ ಮನೆಗೆ ಕಳುಹಿಸಲಾಯಿತು" ಎಂದು ವಕೀಲ ಅತುಲ್ ಸಿಂಗ್, ಹೆಚ್ಚುವರಿ ಸರ್ಕಾರಿ ವಕೀಲರು ಪ್ರಕರಣದ ವಿವರಗಳನ್ನು ಬಹಿರಂಗಪಡಿಸಿದರು. ಬಾಲಕನ ವಯಸ್ಸು ಮತ್ತು ಇದು ಅವರ ಮೊದಲ ಅಪರಾಧ ಎಂದು ಪರಿಗಣಿಸಿ, ಜೆಜೆಬಿ ಸದಸ್ಯರು ಅವರಿಗೆ 'ಸಮುದಾಯಕ್ಕೆ ಸೇವೆ ಸಲ್ಲಿಸಲು' ಆದೇಶಿಸಿದ್ದಾರೆ.

Boy Who Posted Against CM Yogi Made To Work in Cow Shelter As Punishment

ಜೆಜೆಬಿ ಅಧ್ಯಕ್ಷೆ ಆಂಚಲ್ ಅದಾನ ಮತ್ತು ಸದಸ್ಯರಾದ ಪ್ರಮೀಳಾ ಗುಪ್ತಾ ಮತ್ತು ಅರವಿಂದ್ ಕುಮಾರ್ ಗುಪ್ತಾ ಸೋಮವಾರ ಈ ತೀರ್ಪು ನೀಡಿದ್ದಾರೆ. JJB ಹೆಚ್ಚುವರಿಯಾಗಿ ಹದಿಹರೆಯದವರಿಗೆ 10,000 ರೂ ದಂಡವನ್ನು ಐಟಿ ಕಾಯ್ದೆಯಡಿಯಲ್ಲಿ ವಿಧಿಸಿದೆ ಎಂದು ಸಿಂಗ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+