Holi in Mud: ಈ ಗ್ರಾಮದಲ್ಲಿ ವರ್ಷಗಳಿಂದಲೂ ಕೆಸರಿನಲ್ಲೇ ಹೋಳಿ ಆಚರಣೆ
ಇಡೀ ಜಗತ್ತು ಹೋಳಿ ಆಚರಣೆಗಾಗಿ ಕಾತುರದಿಂದ ಕಾಯುತ್ತಿದೆ. ಭಗವಂತ ಶ್ರೀಕೃಷ್ಣ ಈ ಹೋಳಿ ಹಬ್ಬವನ್ನು ಹೆಚ್ಚು ಇಷ್ಟಪಡುತ್ತಾನೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗುತ್ತದೆ. ಹೀಗಾಗಿ ಪ್ರತೀ ವರ್ಷ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 25ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.
ದೇಶಾದ್ಯಂತ ಹೋಳಿ ಆಡುವ ವಿಭಿನ್ನ ಶೈಲಿಗಳು ಮತ್ತು ಪದ್ಧತಿಗಳಿವೆ. ಸಾಮಾನ್ಯವಾಗಿ ಬಣ್ಣಗಳು, ಹೂವುಗಳು ಮತ್ತು ಮೊಟ್ಟೆ/ಟೊಮ್ಯಾಟೋದಿಂದಲೂ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ ಹಲವೆಡೆ ಕೆಸರು ಮತ್ತು ಮಣ್ಣಿನ ಹೋಳಿಯನ್ನು ಆಡಲಾಗುತ್ತದೆ. ಹೌದು... ಉತ್ತರಪ್ರದೇಶದಲ್ಲಿ ಸುರಿರ್, ನೌಜಿಲ್ ಸೇರಿದಂತೆ ಇಂತಹ ಹಲವು ಗ್ರಾಮಗಳಿದ್ದು, ಇಲ್ಲಿ ಕೆಸರಿನಿಂದ ಹೋಳಿ ಆಡುವ ಸಂಪ್ರದಾಯ ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಪ್ರದೇಶಗಳಲ್ಲಿ ಹೋಳಿ ಮರುದಿನ ಕೆಸರು ಮತ್ತು ಮಣ್ಣಿನ ಹೋಳಿಯನ್ನು ಆಡಲಾಗುತ್ತದೆ.

ಹೋಳಿ ನಂತರ ಮಣ್ಣಿನ ಹೋಳಿ
ಮಥುರಾ-ವೃಂದಾವನದಲ್ಲಿ ಅನೇಕ ರೀತಿಯ ಹೋಳಿಗಳನ್ನು ಆಡಲಾಗುತ್ತದೆ. ಇಲ್ಲಿ ಹೋಳಿ ಆಡುವ ವಿಭಿನ್ನ ಪದ್ಧತಿ ಇದೆ. ಮಥುರಾದ ನೌಜಿಲ್ ಪಟ್ಟಣದಲ್ಲಿ ನೀವು ವಿಶಿಷ್ಟವಾದ ಹೋಳಿ ಆಚರಣೆಯನ್ನು ಕಾಣಬಹುದು. ಇಲ್ಲಿ ಬಣ್ಣಗಳ ಹೋಳಿಯ ಮರುದಿನ ಅಂದರೆ ದೌಜ್ ದಿನದಂದು ಮಣ್ಣು ಅಥವಾ ಕೆಸರಿನಿಂದ ಹೋಳಿ ಆಡಲಾಗುತ್ತದೆ. ಈ ದಿನದಂದು ಉತ್ಸಾಹಿ ಯುವಜನತೆಯ ಗುಂಪುಗಳು ಬೀದಿಗಳಲ್ಲಿ ಮತ್ತು ಆಯಾ ನಿಗಧಿ ಪ್ರದೇಶಗಳಲ್ಲಿ ಮಣ್ಣಿನ ಹೋಳಿಯನ್ನು ಆನಂದಿಸುತ್ತಾರೆ.
ಮಣ್ಣಿನ ಹೋಳಿ
ನೌಜಿಲ್ ಪಟ್ಟಣದಲ್ಲಿ ಮಡ್ ಹೋಲಿ ಎಷ್ಟು ಪ್ರಸಿದ್ಧವಾಗಿದೆ ಎಂದರೆ ಜನರು ಹೋಳಿಯನ್ನು ವೀಕ್ಷಿಸಲು ಮತ್ತು ಆಡಲು ಇಲ್ಲಿಗೆ ಬರುತ್ತಾರೆ. ಪಟ್ಟಣದ ಎಲ್ಲಾ ಅಂಗಡಿಗಳು ಮತ್ತು ಇತರ ಸಂಸ್ಥೆಗಳು ಸಂಪೂರ್ಣವಾಗಿ ಈ ದಿನ ಮುಚ್ಚಲ್ಪಟ್ಟಿರುತ್ತವೆ. ಇಲ್ಲಿ ಹಾದು ಹೋಗುವ ಯಾರೇ ಆಗಲಿ ಕೆಸರು ಹಚ್ಚಿಕೊಳ್ಳದೇ ಹೋಗುವಂತಿಲ್ಲ. ಪಟ್ಟಣದಲ್ಲಿ ಹಾದು ಹೋಗುವ ಯಾವುದೇ ರೀತಿಯ ವಾಹನಗಳಿಗೂ ಕೆಸರು ಎರಚಲಾಗುತ್ತದೆ. ಪ್ರತಿಯೊಬ್ಬರಿಗೂ ಕೆಸರು ಹಚ್ಚಲಾಗುತ್ತದೆ.

ಮಣ್ಣಿನ ಹೋಳಿಗೆ ತಯಾರಿ
ಹೋಳಿ ಆಡಲು ಇಷ್ಟಪಡುವವರು ಮುಂಚಿತವಾಗಿಯೇ ಈ ಮಣ್ಣಿನ ಹೋಳಿಗೆ ತಯಾರಿ ಆರಂಭಿಸುತ್ತಾರೆ. ಹೋಳಿಗೆ ಎರಡು ದಿನ ಮುಂಚಿತವಾಗಿ ಇಲ್ಲಿನ ನಿವಾಸಿಗಳು ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ತಂದು ಕೆಸರಿನ ವ್ಯವಸ್ಥೆ ಮಾಡುತ್ತಾರೆ. ಇದರೊಂದಿಗೆ ಎಲ್ಲರೂ ಹೋಳಿ ಆಡುತ್ತಾರೆ. ಸ್ಥಳೀಯ ಮಹಿಳೆಯರೂ ಕೂಡ ಕೆಸರಿನಲ್ಲಿ ಮಿಂದೇಳುತ್ತಾರೆ.
ಹಲವು ವರ್ಷಗಳ ಸಂಪ್ರದಾಯ
ಧಾರ್ಮಿಕ ನಗರಿ ಮಥುರಾದ ನೌಜಿಲ್ ಪಟ್ಟಣದಲ್ಲಿ ಹೋಳಿ ಹಬ್ಬದ ಎರಡನೇ ದಿನದಂದು ಮಣ್ಣಿನ ಹೋಳಿ ಆಡುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಣ್ಣಿನ ಹೋಳಿ ಅಥವಾ ಕೆಸರಿನ ಹೋಳಿ ದಿನದಂದು ಮಾರುಕಟ್ಟೆಗಳು ಮುಚ್ಚಿರುತ್ತವೆ. ಸ್ಥಳೀಯರು ಈ ದಿನ ಹೋಳಿಯಲ್ಲಿ ಮುಳುಗಿ ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿ ದಾರಿಯಲ್ಲಿ ಹೋಗುವವರನ್ನೂ ಬಿಡುವುದಿಲ್ಲ. ಈ ಕೆಸರಿನಲ್ಲಿ ಆಡುವ ಪುಂಡರನ್ನು ಬಿಟ್ಟರೆ ಮತ್ತೇನೂ ಬೀದಿಯಲ್ಲಿ ಕಾಣಿಸುವುದಿಲ್ಲ. ಇಲ್ಲಿಯ ನಿವಾಸಿಗಳು ತಮ್ಮ ಹುಟ್ಟಿನಿಂದಲೂ ಈ ಸಂಪ್ರದಾಯವನ್ನು ನೋಡುತ್ತಿರುವುದಾಗಿ ಹೇಳುತ್ತಾರೆ.

ಹೋಳಿಕಾ ಸಮಯದಲ್ಲಿ, ಭಕ್ತ ಪ್ರಹ್ಲಾದನ ಬದುಕುಳಿಯುವಿಕೆಯನ್ನು ಮತ್ತು ಹೋಳಿಕಾ ದಹನವನ್ನು ಜನರು ಆಚರಿಸಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ಹೋಳಿಕಾ ಭಸ್ಮವನ್ನು ಒಬ್ಬರಿಗೊಬ್ಬರು ಲೇಪಿಸಲು ಆರಂಭಿಸಿ, ಬೂದಿಯನ್ನು ನೀರಿನಲ್ಲಿ ಕಲಸಿ ಒಬ್ಬರ ಮೇಲೊಬ್ಬರು ಎರಚಲು ಆರಂಭಿಸಿದರು. ಕಾಲ ಕಳೆದಂತೆ ಅದು ಕೆಸರಿನ ರೂಪವನ್ನು ಪಡೆದುಕೊಂಡಿತು. ಜನರು ಕೆಸರಿನಿಂದ ಹೋಳಿ ಆಡಲಾರಂಭಿಸಿದರು ಮತ್ತು ಅಂದಿನಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.












Click it and Unblock the Notifications