ಒಳ್ಳೆ ಸುದ್ದಿ: ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ ಮೂರನೇ ಸ್ಥಾನದಲ್ಲಿದೆ ಕರ್ನಾಟಕ

ಬೆಂಗಳೂರು, ಏಪ್ರಿಲ್.02: ರಸ್ತೆ ಮೇಲೆ ಇಳಿಯುತ್ತಿರುವ ಮತ್ತು ಮಾರುಕಟ್ಟೆಗೆ ಬರುವ ಬಹುತೇಕ ವಾಹನಗಳು ಎಲೆಕ್ಟ್ರಿಕ್ ವಾಹನಗಳೆ ಆಗಿವೆ. ಇನ್ನು, ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇ- ವಾಹನಗಳ (ಇವಿ) ನೋಂದಣಿ ಸಂಖ್ಯೆಯಲ್ಲಿ ಸ್ಥಿರವಾದ ಏರಿಕೆಯನ್ನು ಕಾಣುತ್ತಿದೆ.

2020-21 ರಿಂದ 2023-2024 ರವರೆಗೆ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ನೋಂದಣಿಯಲ್ಲಿ 1,275% ನಷ್ಟು ಬೆಳವಣಿಗೆಯನ್ನು ಕಂಡಿದೆ. ಸಾರಿಗೆ ಅಧಿಕಾರಿಗಳ ಪ್ರಕಾರ, ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ.

Karnataka ranks third in the country in registration of electric vehicles

2017-18 ರಲ್ಲಿ 1,922 ಇ-ವಾಹನಗಳಿಂದ, 2023-2024 ರಲ್ಲಿ (ಮಾರ್ಚ್ 25 ರವರೆಗೆ) ಸಂಖ್ಯೆ 1,59,428 ಕ್ಕೆ ಏರಿಕೆಯಾಗಿದೆ. ವಾಹನಗಳಲ್ಲಿ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಕಾರುಗಳು ಸೇರಿವೆ. ರಾಜ್ಯದಲ್ಲಿ ಒಟ್ಟು 3.4 ಲಕ್ಷ ಇ-ವಾಹನಗಳಿದ್ದು, 2.98 ಲಕ್ಷ ದ್ವಿಚಕ್ರ ವಾಹನಗಳು, 23,516 ನಾಲ್ಕು ಚಕ್ರ ಮತ್ತು 18,246 ತ್ರಿಚಕ್ರ ವಾಹನಗಳಿವೆ.

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಿದಾಗ, ಜನರು ಈ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ. ಇವುಗಳನ್ನು ಕೊಳ್ಳುವವರ ಸಂಖ್ಯೆಯು ಕಡಿಮೆಯಾಗಿತ್ತು. ಜನರು ಇ-ವಾಹನಗಳ ಕಾರ್ಯಕ್ಷಮತೆಯ ಬಗ್ಗೆ ನಂಬಿಕೆ ಇಟ್ಟುಕೊಂಡಿರಲಿಲ್ಲ. ಜೊತೆಗೆ ಈ ವಾಹನಗಳನ್ನು ಎಲ್ಲಿ ಚಾರ್ಜಿಂಗ್ ಮಾಡಿಸುವುದು ಎಂಬ ಬಗ್ಗೆಯೂ ಚಿಂತೆ ಹೊಂದಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು, 2017-18ರಲ್ಲಿ ರಾಜ್ಯದಲ್ಲಿ ಕೇವಲ 1,922 ಎಲೆಕ್ಟ್ರಿಕ್ ವಾಹನಗಳಿದ್ದವು. ಅವುಗಳಲ್ಲಿ 97 ದ್ವಿಚಕ್ರ ವಾಹನಗಳು, 1,589 ತ್ರಿಚಕ್ರ ವಾಹನಗಳು ಮತ್ತು 236 ಕಾರುಗಳು ಇದ್ದವು. ಆದರೆಮ, ಈಗ ಪಟ್ಟಣಗಳು ​​ಮತ್ತು ನಗರಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳು ಮತ್ತು ಮಾರುಕಟ್ಟೆಯಲ್ಲಿ ಅನೇಕ ಇ-ವಾಹನ ಪ್ಲೇಯರ್‌ಗಳು ನಿರ್ಮಾಣವಾಗಿದೆ. ಹೀಗಾಗಿ ರಾಜ್ಯದಲ್ಲಿ ಇಂತಹ ವಾಹನಗಳ ಸಂಖ್ಯೆ ಹೆಚ್ಚಾಗಿದೆ ಎಂದು ಸಾರಿಗೆ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ಹೇಳಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

Karnataka ranks third in the country in registration of electric vehicles

ಎಲೆಕ್ಟ್ರಿಕ್ ವಾಹನ ಖರೀದಿ ಹೆಚ್ಚಳಕ್ಕೆ ಕಾರಣ

ಎಲೆಕ್ಟ್ರಿಕ್ ವಾಹನಗಳ ಸಂಖ್ಯೆಯಲ್ಲಿನ ಜಿಗಿತಕ್ಕೆ ಮುಖ್ಯ ಕಾರಣಗಳೆಂದರೆ ಜನರಲ್ಲಿ ಪರಿಸರ ಕಾಳಜಿ ಮತ್ತು ಕರ್ನಾಟಕ ಸರ್ಕಾರವು ಇಂತಹ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿದೆ. ರಾಜ್ಯದಲ್ಲಿ 25 ಲಕ್ಷಕ್ಕಿಂತ ಹೆಚ್ಚು ಬೆಲೆಯ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ.

2023-2024ರಲ್ಲಿ ನೋಂದಣಿಯಾದ ಎಲೆಕ್ಟ್ರಿಕ್ ವಾಹನಗಳ ಪೈಕಿ ದ್ವಿಚಕ್ರ ವಾಹನಗಳು 1,40,327. ಹೀಗಾಗಿ ಬೈಕ್‌ಗಳೇ ಅಗ್ರಸ್ಥಾನದಲ್ಲಿವೆ. ನಂತರದ ಸ್ಥಾನದಲ್ಲಿ ಕಾರುಗಳಿದ್ದು, ಒಟ್ಟು 13,667 ಕಾರುಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು, 5,434 ಆಟೋಗಳನ್ನು ನೋಂದಣಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+