python in clothes shop: ಬಟ್ಟೆ ಖರೀದಿಗೆ ಬಂದ ದೈತ್ಯ ಹೆಬ್ಬಾವು: ದಿಕ್ಕಾಪಾಲಾಗಿ ಓಡಿದ ಜನ- ವಿಡಿಯೋ ವೈರಲ್
ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ದೊಡ್ಡ ಹೆಬ್ಬಾವೊಂದು ಬಟ್ಟೆ ಅಂಗಡಿಗೆ ನುಗ್ಗಿದ ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡ ಅಂಗಡಿ ಮಾಲೀಕರು ಗಲಾಟೆ ಮಾಡಿ ಅಂಗಡಿಯಿಂದ ಹೊರಗೆ ಓಡಿ ಹೋಗಿದ್ದಾರೆ. ಈ ಹೆಬ್ಬಾವನ್ನು ನೋಡಲು ಅಪಾರ ಜನಸ್ತೋಮ ನೆರೆದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಸಾಕಷ್ಟು ಪ್ರಯತ್ನದ ನಂತರ ಹೆಬ್ಬಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯ ವೀಡಿಯೋ ಕಾಣಿಸಿಕೊಂಡ ನಂತರ, ಜನರು ಆಶ್ಚರ್ಯಚಕಿತರಾಗಿದ್ದಾರೆ. ಇಷ್ಟೊಂದು ದೊಡ್ಡ ಹೆಬ್ಬಾವು ಅಂಗಡಿಗೆ ಹೇಗೆ ಬಂದಿತು ಎಂದು ಆಶ್ಚರ್ಯ ಪಡುತ್ತಿದ್ದಾರೆ. ಈ ವಿಡಿಯೋ ಹೊರಬಿದ್ದ ಬೆನ್ನಲ್ಲೇ ಸಾಕಷ್ಟು ಮಂದಿ ತಮ್ಮ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿದ್ದಾರೆ.
#मेरठ लालकुर्ती थाना क्षेत्र स्थित एक दुकान में निकाला अजगर,कपड़ो की दुकान में अजगर निकलने से मचा हड़कंप,वन विभाग की टीम ने मौके से पहुंचकर अजगर को लिए जंगल में ले जाने के लिए कब्जे में,मौके लोगो की भीड़ हुई इक्कठा,काफी देर तक मचा रहा हड़कम#Meerut pic.twitter.com/drgDBrxvE2
— ANMOL Sharma (@anmolmeeruthiya) December 5, 2023
ಮಾಹಿತಿಯ ಪ್ರಕಾರ, ಲಾಲ್ಕುರ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಬೇಗಂಪುಲ್‌ನಲ್ಲಿನ ಪೇಂತ್‌ನಲ್ಲಿರುವ ರಾಮಾ ಸೂಟ್ ಅಂಗಡಿಯೊಳಗೆ ಹೆಬ್ಬಾವು ಬಟ್ಟೆಗಳ ಮೇಲೆ ಕುಳಿತುವುದು ಕಂಡುಬಂದಿದೆ. ಇದನ್ನು ಕಂಡ ತಕ್ಷಣ ಕಿರುಚುತ್ತಾ ಅಲ್ಲಿಂದ ಜನ ಓಡಿ ಬಂದಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡ ಸ್ಥಳಕ್ಕೆ ಆಗಮಿಸಿದೆ. ಕಠಿಣ ಪರಿಶ್ರಮದ ಬಳಿಕ ತಂಡ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದಿದೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದನ್ನು ಇಲ್ಲಿಯವರೆಗೆ 2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವೀಡಿಯೊ ಜನರನ್ನು ಸಾಕಷ್ಟು ಆಶ್ಚರ್ಯಗೊಳಿಸುತ್ತಿದೆ. ಈ ಅಪಾಯಕಾರಿ ವೈರಲ್ ವಿಡಿಯೋ ಇಲ್ಲಿದೆ.
ಅರಣ್ಯ ನಿರೀಕ್ಷಕ ಮೋಹನ್ ಸಿಂಗ್ ಮಾಹಿತಿ
ರಕ್ಷಿಸಲಾದ ಹೆಬ್ಬಾವಿನ ಉದ್ದ ಸುಮಾರು 12 ರಿಂದ 14 ಅಡಿಗಳಷ್ಟಿತ್ತು ಎಂದು ಅರಣ್ಯ ನಿರೀಕ್ಷಕ ಮೋಹನ್ ಸಿಂಗ್ ತಿಳಿಸಿದ್ದಾರೆ. ಸಮೀಪದಲ್ಲೇ ಅಬು ಚರಂಡಿ ಇರುವುದರಿಂದ ಅಲ್ಲಿಂದ ಹೆಬ್ಬಾವು ಬರುವ ಸಾಧ್ಯತೆ ಇದೆ. ಹೆಬ್ಬಾವನ್ನು ರಕ್ಷಿಸಿ ಕಾಡಿಗೆ ಬಿಡಲಾಯಿತು. ಸ್ಥಳದಲ್ಲಿದ್ದ ಜನರು ಹೆಬ್ಬಾವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಅಂದಹಾಗೆ ಈ ವಿಡಿಯೋ 2023ರಲ್ಲಿ ಸೆರೆ ಹಿಡಿಯಲಾಗಿದೆ. ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ವಿಡಿಯೋವನ್ನು ನೋಡಿದ ಜನ ಗಾಬರಿಗೊಂಡಿದ್ದಾರೆ. ಜೊತೆಗೆ ಈ ಹೆಬ್ಬಾವು ಕಾಣಿಸಿಕೊಂಡಿದೆ, ಯಾರಿಗೂ ಅಪಾಯವಾಗಿಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications