10th Result: 10ನೇ ತರಗತಿ ಫಲಿತಾಂಶ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ:ಅಷ್ಟಕ್ಕೂ ಆಗಿದ್ದೇನು..?
10ನೇ ತರಗತಿ ಫಲಿತಾಂಶ ನೋಡಿ ವಿದ್ಯಾರ್ಥಿ ಮೂರ್ಛೆ ಹೋದ ಘಟನೆಯೊಂದು ಉತ್ತರ ಪ್ರದೇಶದ ಘಟನೆ ಮೀರತ್ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ ಪ್ರೌಢ ಶಿಕ್ಷಣ ಮಂಡಳಿಯು ಏಪ್ರಿಲ್ 20ರಂದು 10ನೇ ಮತ್ತು 12ನೇ ತರಗತಿಯ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ವೇಳೆ 10ನೇ ತರಗತಿ ಫಲಿತಾಂಶ ನೋಡಿ ವಿದ್ಯಾರ್ಥಿಯೊಬ್ಬ ಮೂರ್ಛೆ ಹೋಗಿದ್ದಾನೆ.
ಮೀರತ್ನ ಮೋದಿಪುರಂನ ಮಹರ್ಷಿ ದಯಾನಂದ ಇಂಟರ್ ಕಾಲೇಜಿನ ವಿದ್ಯಾರ್ಥಿ ಅನ್ಶುಲ್ ಕುಮಾರ್ (16) ಫಲಿತಾಂಶ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ ಎನ್ನಲಾಗಿದೆ. ಈ ಬಾರಿ 10ನೇ ತರಗತಿ ಪರೀಕ್ಷೆ ಬರೆದಿದ್ದ ಅನ್ಶುಲ್ ಕುಮಾರ್ ತನ್ನ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದ. ಅಂತೂ ಇಂದೂ ರಿಸ್ಟಲ್ ದಿನ ಬರುತ್ತಿದ್ದಂತೆ ಕಾತುರದಿಂದ ಫಲಿತಾಂಶ ನೋಡಿದ್ದಾರೆ. ಆದರೆ ನೋಡುತ್ತಿದ್ದಂತೆ ಅಲ್ಲೇ ಕುಸಿದು ಬಿದ್ದಿದ್ದಾನೆ.

ಈ ಬಾರಿ 10ನೇ ತರಗತಿ ಪರೀಕ್ಷೆಯಲ್ಲಿ ಅನ್ಶುಲ್ ಕುಮಾರ್ 93.5% ಫಲಿತಾಂಶ ಬಂದಿದೆ. ಅತಿಹೆಚ್ಚು ಅಂಕಗಳನ್ನು ಅನ್ಶುಲ್ ಕುಮಾರ್ ಗಳಿಸಿದ್ದಾನೆ. ಆದರೆ ದುರಾದೃಷ್ಟವಶಾತ್ ಅಂಕಗಳನ್ನು ನೋಡಿದ ಕೂಡಲೇ ದಿಢೀರ್ ಪ್ರಜ್ಞೆ ತಪ್ಪಿದ್ದಾನೆ. ಅನ್ಶುಲ್ ಕುಮಾರ್‌ಗೆ ಫಲಿತಾಂಶ ನೋಡಿ ಸಂತೋಷವಾಯ್ತೋ, ಅಥವಾ ಕಡಿಮೆ ಆಯ್ತು ಅಂತಾ ದುಃಖವಾಯ್ತೋ ಅಥವಾ ಆಶ್ಚರ್ಯವಾಯ್ತೋ ಗೊತ್ತಿಲ್ಲ ಆದರೆ ಫಲಿತಾಂಶ ಆತನ ಆರೋಗ್ಯಕ್ಕೆ ಕುತ್ತು ತಂದಿದೆ.
ಇನ್ನು ಅನ್ಶುಲ್ ಕುಮಾರ್ ಫಲಿತಾಂಶ ನೋಡಿ ಪ್ರಜ್ಞೆ ತಪ್ಪುತ್ತಿದ್ದಂತೆ ಕೂಡಲೇ ಆತನ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅನ್ಶುಲ್ ಕುಮಾರ್ ತಂದೆ ಸುನೀಲ್ ಕುಮಾರ್ ಪೋಸ್ಟ್ ಆಫೀಸ್‌ನಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದಾರೆ. ಸದ್ಯ ಮಗನ ಸ್ಥಿತಿ ಬಗ್ಗೆ ಮಾತನಾಡಿದ ಅವರು, 'ಅನ್ಶುಲ್ ಫಲಿತಾಂಶ ಕಂಡು ಕೂಡಲೇ ಪ್ರಜ್ಞೆ ತಪ್ಪಿತ್ತು. ಆದರೆ ನಾವು ಮನೆಯಲ್ಲೇ ಎಬ್ಬಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವು. ಆದರೆ ಅವನ ಸ್ಥಿತಿ ಸುಧಾರಿಸಲಿಲ್ಲ. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವು. ಸದ್ಯ ಈಗ ಮಗನ ಆರೋಗ್ಯ ಸುಧಾರಿಸಿದೆ' ಎಂದು ವಿವರಿಸಿದ್ದಾರೆ. ಇನ್ನು ಅನ್ಶುಲ್ ಕುಮಾರ್‌ಗೆ ಸದ್ಯ ಚಿಕಿತ್ಸೆ ಮುಂದುವರಿದಿದ್ದು, ಫಲಿತಾಂಶ ನೋಡಿದ ಕ್ಷಣ ಏನಾಯಿತು ಎನ್ನುವುದನ್ನು ಆತನೇ ತಿಳಿಸಬೇಕಿದೆ.












Click it and Unblock the Notifications