ಲೋಕಸಭಾ ಚುನಾವಣೆ 2024: ಮತದಾನದ ಮರುದಿನವೇ ಸಾವನ್ನಪ್ಪಿದ ಬಿಜೆಪಿ ಅಭ್ಯರ್ಥಿ
ಬಿಜೆಪಿಯ ಮೊರಾದಾಬಾದ್ ಅಭ್ಯರ್ಥಿ, ಐದು ಬಾರಿ ಶಾಸಕ ಮತ್ತು ಒಂದು ಬಾರಿ ಸಂಸದರಾಗಿದ್ದ ಕುನ್ವರ್ ಸರ್ವೇಶ್ ಕುಮಾರ್ ಅವರು ಉತ್ತರ ಪ್ರದೇಶದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದ ಒಂದು ದಿನದ ನಂತರ ನಿಧನರಾದರು.
ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸರ್ವೇಶ್ ಸಿಂಗ್ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಕುನ್ವರ್ ಸರ್ವೇಶ್ ಕುಮಾರ್ ನಿಧನರಾಗಿದ್ದಾರೆ ಎಂದು ಯುಪಿ ಬಿಜೆಪಿ ಮುಖ್ಯಸ್ಥ ಭೂಪೇಂದ್ರ ಚೌಧರಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಗಂಟಲಿನಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಆಪರೇಷನ್ ಮಾಡಲಾಗಿದೆ. ಶುಕ್ರವಾರ, ಅವರು ತಪಾಸಣೆಗಾಗಿ ಏಮ್ಸ್‌ಗೆ ಹೋಗಿದ್ದರು ಎಂದು ಚೌಧರಿ ಮಾಹಿತಿ ನೀಡಿದ್ದಾರೆ.
ಸರ್ವೇಶ್ ಸಿಂಗ್ ಸಾವಿಗೆ ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅವರ ಸಾವು ಬಿಜೆಪಿ ಪರಿವಾರಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.
"ನಮ್ಮ ಮೊರಾದಾಬಾದ್ ಅಭ್ಯರ್ಥಿ ಮತ್ತು ಮಾಜಿ ಸಂಸದ ಕುನ್ವರ್ ಸರ್ವೇಶ್ ಕುಮಾರ್ ಸಿಂಗ್ ಅವರ ನಿಧನದ ಸುದ್ದಿ ತಿಳಿದು ನಾನು ಆಘಾತಕ್ಕೊಳಗಾಗಿದ್ದೇನೆ. ಇದು ಬಿಜೆಪಿ ಪರಿವಾರಕ್ಕೆ ತುಂಬಲಾರದ ನಷ್ಟವಾಗಿದೆ. ಈ ದುಃಖದ ಸಮಯದಲ್ಲಿ, ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬ ಸದಸ್ಯರಿಗೆ ಹೋಗುತ್ತವೆ. ಮತ್ತು ಆತ್ಮೀಯರೇ, ಪ್ರಭು ಶ್ರೀರಾಮ್ ಅವರ ಕುಟುಂಬಕ್ಕೆ ಈ ನಷ್ಟವನ್ನು ಭರಿಸುವ ಶಕ್ತಿ ಮತ್ತು ಸಹನೆಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ! ಯೋಗಿ ಆದಿತ್ಯನಾಥ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಶ್ಚಿಮ ಯುಪಿಯ 80 ಕ್ಷೇತ್ರಗಳಲ್ಲಿ ಒಂದಾದ ಮೊರಾದಾಬಾದ್ ಅನ್ನು 2019 ರ ಲೋಕಸಭೆ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಎಸ್‌ಟಿ ಹಸನ್ ಗೆಲುವು ಸಾಧಿಸಿದ್ದರು.
ಬರ್ಹಾಪುರ, ಕಾಂತ್, ಠಾಕುರ್ದ್ವಾರ, ಮೊರಾದಾಬಾದ್ ಗ್ರಾಮಾಂತರ, ಮತ್ತು ಮೊರಾದಾಬಾದ್ ನಗರ ಪ್ರದೇಶ ಸೇರಿದಂತೆ ಐದು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಬಾರಿ ಇಂಡಿಯಾ ಒಕ್ಕೂಟದ ಅಭ್ಯರ್ಥಿಯಾಗಿ ರುಚಿ ವೀರ ಅವರು ಕಣಕ್ಕಿಳಿದಿದ್ದಾರೆ.












Click it and Unblock the Notifications