ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿಡ ನೆಡುವ ಸೆಲ್ಫಿ ಕಳಿಸಿ, ರೋಚಕ ಬಹುಮಾನ ಗೆಲ್ಲಿರಿ!

By Prasad
|
Google Oneindia Kannada News

ವಿಜಯಪುರ, ಜುಲೈ 06 : ಪರಿಸರ ಉಳಿಕೆಗಾಗಿ ಮತ್ತು ನಿಸರ್ಗದ ಪ್ರೀತಿಗಾಗಿ ಗಿಡ ನೆಡಿ ಮತ್ತು ಆ ಗಿಡದೊಂದಿಗೆ ತೆಗೆದುಕೊಂಡ ಸೆಲ್ಫಿ ಕಳಿಸಿ, ಬಹುಮಾನ ಗೆಲ್ಲಿ ಎಂಬ ಅಭಿಯಾನವನ್ನು ನೀರಾವರಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ವಿಜಯಪುರದಲ್ಲಿ ಆರಂಭಿಸಲಿದ್ದಾರೆ.

ಗಿಡಗಳನ್ನು ನೆಡುವುದು ಪರಿಸರ ಸಂರಕ್ಷಣೆಗೆ ನಾವು ನೀಡುವಂತಹ ಬಹು ದೊಡ್ಡ ಕೊಡುಗೆ. ಹೆಚ್ಚು ಮರಗಳಿರಬೇಕು ಎನ್ನುವುದು ಕೇವಲ ಉತ್ತಮ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತದೆ ಎಂಬ ದೃಷ್ಟಿಯಿಂದ ಮಾತ್ರವಲ್ಲದೆ ಆರ್ಥಿಕ ಲಾಭಕ್ಕಾಗಿ ಹಾಗೂ ಉತ್ತಮ ಆರೋಗ್ಯವನ್ನು ಹೊಂದುವ ದೃಷ್ಟಿಯಿಂದಲೂ ಸಹ ಬಹಳ ಮುಖ್ಯ.

Plant tree, take selfie and win prize in Vijayapura

ಡಾ. ಎಂ. ಬಿ. ಪಾಟೀಲ ಅವರು ಅನುಷ್ಠಾನಗೊಳಿಸಿರುವ 'ವೃಕ್ಷ ಅಭಿಯಾನ' ವಿಜಯಪುರ ಜಿಲ್ಲೆಯಲ್ಲಿ ಹಸಿರನ್ನು ವೃದ್ಧಿಸುವ ನಿಟ್ಟಿನಲ್ಲಿ ಮಹತ್ತರವಾದ ಹೆಜ್ಜೆಯಾಗಿದೆ. ಈ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಒಂದು ಕೋಟಿ ಗಿಡಗಳನ್ನು ನೆಟ್ಟು, ಅದನ್ನು ಪೋಷಿಸುವ ಗುರಿಯನ್ನು ಹೊಂದಲಾಗಿದೆ.

ಉತ್ತಮ ಭವಿಷ್ಯಕ್ಕಾಗಿ ಈ ಮಹತ್ತರವಾದ ಅಭಿಯಾನದಲ್ಲಿ ಕೈ ಜೋಡಿಸಿ. ಗಿಡ ನೆಡುತ್ತಿರುವಂತಹ ಒಂದು ಸೆಲ್ಫಿ ನಮಗೆ ಕಳುಹಿಸಿ ಹಾಗೂ ಆಕರ್ಷಕ ಬಹುಮಾನಗಳನ್ನು ಗೆಲ್ಲಿರಿ. ಹೆಚ್ಚು ಬಹುಮಾನಗಳನ್ನು ಗೆಲ್ಲಲು ಹೆಚ್ಚು ಹೆಚ್ಚು ಗಿಡಗಳನ್ನು ನೆಡಿ ಮತ್ತು ಹೆಚ್ಚಿನ ಸಂಖ್ಯೆಯ ಸೆಲ್ಫಿಗಳನ್ನು ಕಳುಹಿಸಿ.

ವೃಕ್ಷ ಅಭಿಯಾನ ಪ್ರತಿಷ್ಠಾನವು ಸೂಕ್ತವಾದ ರೀತಿಯಲ್ಲಿ ತಪಾಸಣೆ ಮಾಡಿ ಗಿಡಗಳನ್ನು ವಿತರಿಸುತ್ತಿದೆ. ಅತ್ಯುತ್ತಮವಾಗಿ ಮೂಡಿ ಬಂದಿರುವ ಸೆಲ್ಫಿಯನ್ನು ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಗಿಡ ನೆಟ್ಟಿರುವ ಸ್ಥಳದ ವಿವರಗಳ ಜೊತೆಗೆ ಕಳುಹಿಸಿ.

ವೃಕ್ಷ ಅಭಿಯಾನ ಪ್ರತಿಷ್ಠಾನವು ಕಟ್ಟುನಿಟ್ಟಾಗಿ ತಪಾಸಣೆ ಮಾಡಿ ನಂತರ ಗಿಡಗಳನ್ನು ವಿತರಿಸುತ್ತದೆ. ಮೊಬೈಲ್: 9739317408.

ನಿಮ್ಮ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆ ಹಾಗೂ ಗಿಡವನ್ನು ನೆಟ್ಟ ಸ್ಥಳದ ವಿವರದೊಂದಿಗೆ ನಿಮ್ಮ ಅತ್ಯುತ್ತಮ ಚಿತ್ರವನ್ನು [email protected]ಗೆ ಇ-ಮೇಲ್‍ ಕಳುಹಿಸಿ.

English summary
Plant tree, take selfie and win prize in Vijayapura. This is a unique campaign started by irrigation minister Dr M B Patil for the people of Vijayapura (Bijapur) to increase the greenary and protect environment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X