Lenskart Mega Factory: ಬೆಂಗಳೂರಲ್ಲಿ ಉತ್ಪಾದನಾ ಘಟಕ ಸ್ಥಾಪನೆಗೆ ಲೆನ್ಸ್‌ಕಾರ್ಟ್ ಪ್ಲಾನ್: ಸರ್ಕಾರ ಕೊಟ್ಟ ಭರವಸೆ ಏನು?
ಬೆಂಗಳೂರು, ಏಪ್ರಿಲ್ 09: ಕನ್ನಡಕ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ 'ಲೆನ್ಸ್‌ಕಾರ್ಟ್' (Lenskart) ಕಂಪನಿಯು ಬೆಂಗಳೂರಿನಲ್ಲಿ ಬೃಹತ್ ಕಾರ್ಖಾನೆಯೊಂದನ್ನು ತೆರೆಯಲು ಚಿಂತನೆ ನಡೆಸಿದೆ. ಈ ಸಂಬಂಧ ಎಕರೆಗಟ್ಟಲೇ ಜಾಗ ಹುಡುಕುತ್ತಿದೆ. ಇದಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಗತ್ಯ ಎಲ್ಲ ನೆರವು ನೀಡುವುದಾಗಿ ಭರವಸೆ ಕೊಟ್ಟಿದೆ.
ಹೌದು, ಲೆನ್ಸ್‌ಕಾರ್ಟ್ ಕಂಪನಿಯ ಮುಖ್ಯಸ್ಥ ಪೆಯುಷ್ ಬನ್ಸಾಲ್ (Pesyush Bansal) ಅವರು ಸಾಮಾಜಿಕ ಜಾಲತಾಣ ಟ್ವೀಟ್ (X) ಮೂಲಕ ತಾವು ಮೆಗಾ ಕಾರ್ಖಾನೆಯೊಂದನ್ನು ಬೆಂಗಳೂರಿನ ವಿಮಾನ ನಿಲ್ದಾಣ ಬಳಿ ತೆರೆಯುವುದಾಗಿ ಘೋಷಿಸಿದ್ದಾರೆ.

ಕೈಗಾರಿಕೆ ಸಚಿವರಿಂದ ಸಕಾರಾತ್ಮಕ ಸ್ಪಂದನೆ
ಲೆನ್ಸ್‌ಕಾರ್ಟ್ ಕಂಪನಿಯ ಅಗತ್ಯತೆ ಅರಿತ ಕರ್ನಾಟಕ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು, ಬೆಂಗಳೂರಿನಲ್ಲಿ ನಿಮ್ಮ ಲೆನ್ಸ್‌ಕಾರ್ಟ್ ಕಾರ್ಖಾನೆ ಸ್ಥಾಪಿಸಲು ಬೇಕಾದ ಎಲ್ಲ ನೆರವು ನೀಡಲಾಗುವುದು ಎಂದಿದ್ದಾರೆ. ಈ ಕುರಿತಂತೆ ಸಚಿವರು ಲೆನ್ಸ್‌ಕಾರ್ಟ್ ಮುಖ್ಯಸ್ಥರ ಟ್ವೀಟ್ ಅನ್ನು ರಿಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಲೆನ್ಸ್‌ಕಾರ್ಟ್ ಮನವಿ ಏನು?
ಲೆನ್ಸ್‌ಕಾರ್ಟ್‌ನ ಪೆಯುಷ್ ಬನ್ಸಾಲ್ ಅವರು ಟ್ವೀಟ್‌ನಲ್ಲಿ '' ಮೆಗಾ ಕಾರ್ಖಾನೆ ತೆರೆಯಲು ಲೆನ್ಸ್‌ಕಾರ್ಟ್ ಕಂಪನಿಯು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತ ಸುಮಾರು 60ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಜಾಗ ಹುಡುಕುತ್ತಿದ್ದೇವೆ. ಸುಮಾರು 25 ಎಕರೆಯಷ್ಟು ಭೂಮಿ ಅಗತ್ಯವಿದೆ.

ಬೆಂಗಳೂರು ವಿಮಾನ ನಿಲ್ದಾಣದ ಈ ಭಾಗದ ಸುತ್ತಮುತ್ತ ಯಾವುದಾದರೂ ಫ್ಯಾಕರಿಗಳನ್ನು ನೀವು ಮಾರಾಟ ಮಾಡಲು ಬಯಸಿದ್ದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಟ್ವೀಟ್‌ನಲ್ಲಿ ಮಾಹಿತಿ ನೀಡುವವರಿಗಾಗಿ ತಮ್ಮ ಮೇಲ್ ಐಡಿ [email protected] ನೀಡಿದ್ದು, ಮಾಹಿತಿ ಮೇಲ್ ಮಾಡಲು ಕೋರಿ'' ಪೋಸ್ಟ್ ಮಾಡಿದ್ದಾರೆ.
ರಾಜ್ಯ ಸರ್ಕಾರ ಕೊಟ್ಟ ಭರವಸೆ ಏನು?
ರಾಜ್ಯದಲ್ಲಿ ಹೂಡಿಕೆ ಮಾಡಲು ದೇಶ, ವಿದೇಶ ಕಂಪನಿಗಳನ್ನು ಆಕರ್ಷಿಸುತ್ತಿರುವ ಕರ್ನಾಟಕ ಸರ್ಕಾರುವು, ಲೆನ್ಸ್‌ಕಾರ್ಡ್ ಮನವಿಗೆ ಸ್ಪಂದಿಸಿದೆ. ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಪೆಯುಷ್ ಬನ್ಸಾಲ್ ಅವರ ಟ್ವೀಟ್ ಅನ್ನು ಮರು ಟ್ವೀಟ್ ಮಾಡಿದ್ದಾರೆ.
Karnataka is the place to be! @peyushbansal @Lenskart_com Industries Department is here to support you, and facilitate all your needs.
— M B Patil (@MBPatil) April 9, 2024
Concerned officials will reach out, immediately. pic.twitter.com/9KTikkx8GJ
ಕರ್ನಾಟಕದಲ್ಲಿ ಸ್ಥಳವಕಾಶ ಇದೆ. ಲೆನ್ಸ್‌ಕಾರ್ಟ್ ಕಂಪನಿ ನೂತನ ಕಾರ್ಖಾನೆ ಸ್ಥಾಪನೆಗೆ ಬೇಕಾದ ಅಗತ್ಯ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ನಿಮಗೆ ಸರ್ಕಾರದಿಂದ ಎಲ್ಲ ರೀತಿಯ ಬೆಂಬಲ ನೀಡಲಾಗುವುದು. ಇದಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಈ ಕೂಡಲೇ ಸೂಚಿಸಲಾಗುವುದು ಎಂದು ಅವರು ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಸಚಿವರು ಪೆಯುಷ್ ಬನ್ಸಾಲ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಕೈಗಾರಿಕೆ ಅಭಿವೃದ್ಧಿ ನಿರೀಕ್ಷೆ
ಆಪಲ್ ಮೊಬೈಲ್ ಉತ್ಪಾದಿತ ಫಾಕ್ಸ್‌ಕಾನ್, ಎಥೆನಾಲ್ ಘಟಕ ನಿರ್ಮಾಣ ಕಂಪನಿಗಳು ಸೇರಿದಂತೆ ಮಹತ್ವದ ಕಂಪನಿಗಳಿಗೆ ಹೂಡಿಕೆಗೆ ಅವಕಾಶ ಕಲ್ಪಿಸಿರುವ ಕರ್ನಾಟಕ ರಾಜ್ಯವು ಇದೀಗ ಲೆನ್ಸ್‌ಕಾರ್ಟ್‌ಗೆ ಸೌಲಭ್ಯ ಕಲ್ಪಿಸುವ ಮೂಲಕ ಇಲ್ಲಿ ಉದ್ಯೋಗ ಸೃಷ್ಟಿಗೆ, ಕೈಗಾರಿಕಾ ಅಭಿವೃದ್ಧಿಗೆ ಚಿಂತನೆ ನಡೆದಿದೆ.












Click it and Unblock the Notifications