ಪರೇಶ್ ಹತ್ಯೆ, ಮುಸ್ಲಿಮರ ಮೇಲೆ ಡೌಟು: ಮೇಸ್ತಾ ತಂದೆ

Posted By:
Subscribe to Oneindia Kannada
   ಪರೇಶ್ ಮೇಸ್ತಾ ಕೇಸ್ : ತಂದೆ ಪರೇಶ್ ಬಗ್ಗೆ ಹೇಳೋದ್ ಹೀಗೆ | Oneindia Kannada

   ಹೊನ್ನಾವರ, ಡಿಸೆಂಬರ್ 13 : ಹೊನ್ನಾವರದ ಯುವಕ ಪರೇಶ ಮೇಸ್ತ ಸಹಜ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳುತ್ತಿದೆ. ಆದರೆ, ನನ್ನ ಮಗನ ಹತ್ಯೆಯಾಗಿದೆ, ನನಗೆ ಮುಸ್ಲಿಂ ಸಮಾಜದ ಮೇಲೆ ಡೌಟಿದೆ ಎಂದು ಪರೇಶ ಮೇಸ್ತಾನ ತಂದೆ ಕಮಲಾಕರ್ ಹೇಳಿದ್ದಾರೆ.

   ಪರೇಶ್ ಸಾವು ಪ್ರಕರಣದ ಕಿಚ್ಚು, ಸಹಜ ಸ್ಥಿತಿಯತ್ತ ಶಿರಸಿ

   ಹೊನ್ನಾವರದ ಯುವಕ ಪರೇಶ ಮೇಸ್ತ ಸಾವಿನ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂಬ ಕೂಗು ಬಲವಾಗಿ ಎದ್ದಿದೆ. 'ನಾವು ಹಿಂದೂಗಳೇ ಆದರೆ, ಯಾವ ಸಂಘಟನೆ ಜತೆ ಪರೇಶ ಇರಲಿಲ್ಲ' ಎಂದು ಕಮಲಾಕರ್ ಅವರು ಮನವಿ ಮಾಡಿದ್ದಾರೆ.

   ರಾಜಕೀಯ ಪಕ್ಷಗಳಿಂದ ಜನ ದಾರಿ ತಪ್ಪುತ್ತಿದ್ದಾರೆ: ಐಜಿಪಿ‌ ನಿಂಬಾಳ್ಕರ್

   ಬಿಜೆಪಿ ಹಾಗೂ ಹಿಂದೂ ಜಾಗರಣ ವೇದಿಕೆ, ಭಜರಂಗ ದಳದ ಕಾರ್ಯಕರ್ತರು ಶಿರಸಿ, ಕುಮಟಾ, ಹೊನ್ನಾವರದಲ್ಲಿ ಪ್ರತಿಭಟನೆ, ಬಂದ್ ನಡೆಸಿದ್ದರು. ಈಗ ಎಲ್ಲೆಡೆ ಪರಿಸ್ಥಿತಿ ಶಾಂತವಾಗಿದೆ.

   ದೇವಸ್ಥಾನಕ್ಕೆ ಹೋಗ್ತೀನಿ ಅಂತಾ ಹೋದವ ಬರ್ಲಿಲ್ಲ

   ದೇವಸ್ಥಾನಕ್ಕೆ ಹೋಗ್ತೀನಿ ಅಂತಾ ಹೋದವ ಬರ್ಲಿಲ್ಲ

   ಮೊನ್ನೆ 6 ತಾರೀಖಿಗೆ ಸಾರ್.. ನನ್ನ ಹುಡುಗ ಪರೇಶ್ ಅಂತಾ, ಶನಿದೇವರ ದೇವಸ್ಥಾನಕ್ಕೆ ಹೋಗ್ತೀನಿ ಅಂತಾ ಅವರ ತಾಯಿ ಹತ್ತಿರ ಹೇಳಿಕೊಂಡು ಹೋಗಿದ್ದ. ಅಲ್ಲಿ ಬಸ್ ಸ್ಟ್ಯಾಂಡ್ ಕಡೆ ಗಲಾಟೆ ಅಂತಾ ಸುದ್ದಿ ಬಂತು. ನಾನು ಮನೆಯಿಂದ ಹೊರಗಿದ್ದವ ತಕ್ಷಣಮನೆಗೆ ಹೋದೆ, ಮನೆಯಲ್ಲಿ ಪರೇಶ ಮನೆಯಲ್ಲಿರಲಿಲ್ಲ

   ಎಲ್ಲೇ ಹೋಗಿದ್ರು ಮನೆಗೆ ಬರ್ತಿದ್ದಾ

   ಎಲ್ಲೇ ಹೋಗಿದ್ರು ಮನೆಗೆ ಬರ್ತಿದ್ದಾ

   ನಾನು ಸಂಜೆ ಮನೆಗೆ ಬಂದ ಮೇಲೆ ಕೇಳಿದೆ ಪರೇಶ ಬಂದ್ನಾ ಅಂತಾ, ಆದರೆ, ಏನು ಸುದ್ದಿ ಇಲ್ಲ ಅಂತಾ ಅವನ ತಾಯಿ ಹೇಳಿದ್ರು, ಅವನು ಯಾವುದೇ ಮ್ಯಾಚ್ ಅಂತಾ ಹೋಗಿದ್ರು ರಾತ್ರಿಗೆ ಮನೆಗೆ ಬರ್ತಿದ್ದಾ, ಒಂದು ದಿನವೆಲ್ಲ ಮನೆಗೆ ಬರದೆ ಇರುತ್ತಿರಲಿಲ್ಲ.

   ಕಡೆಗೆ, ನಂಗೆ ಗಾಬರಿಯಾಯ್ತು, ನಮ್ ಮುಖಂಡರಿಗೆಲ್ಲ ಹೇಳ್ದೆ, ಸ್ಟೇಷನ್ ಗೆ ಕರ್ಕೊಂಡು ಹೋದ್ರು, ದೂರು ತಗೊಂಡು ಪೊಲೀಸರು ಎಫ್ ಐಆರ್ ಎಲ್ಲಾ ಬರೆದ್ರು.

   ಪರೇಶ್ ಬಗ್ಗೆ ಗೊತ್ತಾಗಿದ್ದು ಹೇಗೆ?

   ಪರೇಶ್ ಬಗ್ಗೆ ಗೊತ್ತಾಗಿದ್ದು ಹೇಗೆ?

   ನಾನು ಹೇಳ್ದೆ, ನನ್ನ ಮಗ ಕಿಡ್ನಾಪ್ ಆಗಿದ್ದಾನೆ ಅಂತಾ. ಹಳದಿ ಟೀ ಶರ್ಟ್ ಹಾಕಿರುವ ಯುವಕನೊಬ್ಬ ಸಿಕ್ಕಿದ್ದಾನೆ ಶೆಟ್ಟಿಕೆರೆ ಹತ್ತಿರ ಅಂತಾ ಪೊಲೀಸರು ಹೇಳಿದರು. ನಾವು ನಮ್ ಸಮಾಜದವರೆಲ್ಲ ಬೋಟು ತಗೊಂಡು ಎಲ್ಲಾ ಹುಡುಕಿದ್ವು. ದಡಕ್ಕೆ ಶವ ತಂದು ನೋಡಿದಾಗ ಪರೇಶ ಎಂದು ತಿಳಿತು. ಪರೀಕ್ಷೆ ಅಂತಾ ಶವನಾ ಕರೆದೊಯ್ಯುವಾಗ ನೋಡಿದ್ದು, ದೇಹವೆಲ್ಲ ಕಪ್ಪಾಗಿತ್ತು.

   ಯಾರ ಮೇಲೆ ಅನುಮಾನ?

   ಯಾರ ಮೇಲೆ ಅನುಮಾನ?

   ನನಗೆ ಮುಸ್ಲಿಮ್ ಸಮಾಜದ ಮೇಲೆ ಡೌಟಿದೆ ಸಾರ್, ನಾನು ಮಾರನೇ ದಿವಸವೇ ಹೇಳಿದೆ ಕಿಡ್ನಾಪ್ ಆಗಿದೆ. ನಾಲ್ಕೈದು ದಿನ ಸೇರಿ ಹತ್ಯೆ ಮಾಡಿದ್ದಾರೆ. ಅವರಿಗೆ ಶಿಕ್ಷೆ ಆಗ್ಬೇಕು ಸಾರ್, ಅವಾಗ್ನೆ ಮನಸಿಗೆ ತೃಪ್ತಿ. ನನ್ನ ಮಗನ ಸಾವು ಸಹಜವಲ್ಲ, ಕೊಲೆ ಮಾಡಿದ್ದಾರೆ. ನನಗೆ ನ್ಯಾಯ ಸಿಗಬೇಕಿದೆ ಎಂದು ಕಮಲಾಕರ್ ಮೇಸ್ತ ಹೇಳಿದರು.

   ನನ್ನ ಮಗ ಒಳ್ಳೆ ಈಜುಗಾರ

   ನನ್ನ ಮಗ ಒಳ್ಳೆ ಈಜುಗಾರ

   ಮೀನುಗಾರನಾಗಿದ್ದ ಅವನಿಗೆ ಚೆನ್ನಾಗಿ ಈಜಲು ಬರುತ್ತಿತ್ತು. ಈಜು ಬರದೆ ಕೆರೆಯಲ್ಲಿ ಮುಳುಗಿ ಸತ್ತ ಎಂದರೆ ನಂಬಲು ಆಗುವುದಿಲ್ಲ. ಆರ್ ವಿ ದೇಶಪಾಂಡೆ ಅವರು ಪರಿಹಾರವಾಗಿ ನೀಡಿದ 1 ಲಕ್ಷ ರು ನಮಗೆ ಬೇಡ ಎಂದು ಕಮಲಾಕರ್ ಹೇಳಿದ್ದಾರೆ

   ಪರೇಶ್ ಹತ್ಯೆ ಎನ್ಐಎಗೆ ಒಪ್ಪಿಸಿ

   ಪರೇಶ್ ಸಹಜ ಸಾವನ್ನಪ್ಪಿದ್ದಾನೆ ಎಂದು ಸರ್ಕಾರ ನೀಡಿರುವ ವೈದ್ಯಕೀಯ ವರದಿ ಒಪ್ಪಲು ಸಾಧ್ಯವಿಲ್ಲ. ಈ ಪ್ರಕರಣದ ತನಿಖೆಯನ್ನು ಎನ್ ಐಎಗೆ ಒಪ್ಪಿಸಿ, ನ್ಯಾಯ ದೊರಕಿಸಿ ಕೊಡಬೇಕಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   My Son was murdered. I want his killers to be punished said Paresh Mesta's father Kamalakar today(Dec 13). He also added that Paresh was not part of any pro Hindu organisation.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ