ಪರೇಶ್ ಮೇಸ್ತ ಸಾವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Posted By:
Subscribe to Oneindia Kannada

ಹೊನ್ನಾವರ, ಫೆಬ್ರವರಿ 09: ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ ಪರೇಶ್ ಮೇಸ್ತ ಸಾವು ಪ್ರಕರಣದ ಇಬ್ಬರು ಆರೋಪಿಗಳನ್ನು ಹೊನ್ನಾವರ ಪೊಲೀಸರು ಬಂಧಿಸಿದ್ದಾರೆ.

ಇಮ್ತಿಯಾಜ್ ಶೇಖ್ ಮತ್ತು ಪೈಜಲ್ ಎಂಬುವರನ್ನು ಶಿರಸಿಯಲ್ಲಿ ಬಂಧಿಸಲಾಗಿದ್ದು, ಇವರ ಬಂಧನದಿಂದ ಪರೇಶ್‌ ಮೇಸ್ತ ಸಾವಿಗೆ ಸಂಬಂಧಪಟ್ಟಂತೆ ಒಟ್ಟು 4 ಜನ ಆರೋಪಿಗಳನ್ನು ಬಂಧಿಸಿದಂತಾಗಿದೆ. ಮೇಸ್ತ ಸಾವು ಪ್ರಕರಣದಲ್ಲಿ ಒಟ್ಟು 5 ಜನರನ್ನು ಆರೋಪಿಗಳ ಮೇಲೆ ಕೇಸು ದಾಖಲಾಗಿತ್ತು.

ಪರೇಶ್ ಮೇಸ್ತ ಸಾವು : ಪ್ರಮುಖ ಆರೋಪಿ ಬಂಧನ

ಹೊನ್ನಾವರದಲ್ಲಿ ಡಿಸೆಂಬರ್ 6ರಂದು ನಡೆದ ಗಲಭೆಯಲ್ಲಿ ಪರೇಶ್ ಮೇಸ್ತ ಕಾಣೆಯಾಗಿದ್ದು ಆ ನಂತರ ಡಿಸೆಂಬರ್ 08ರಂದು ಕೆರೆಯೊಂದರಲ್ಲಿ ಮೇಸ್ತನ ಶವ ಪತ್ತೆಯಾಗಿತ್ತು. ಆ ನಂತರ ಕರಾವಳಿಯಲ್ಲಿ ಗಲಭೆಗಳು ಹೆಚ್ಚಾಗಿ ಕೋಮು ದ್ವೇಷ ಹೆಚ್ಚುಗೊಳ್ಳಲು ಕಾರಣವಾಗಿತ್ತು.

Honnavar police arrested two suspects of Paresh Mesta death

ಪರೇಶ್ ಮೆಸ್ತ ತಂದೆ ಮಗನ ಸಾವಿನ ಬಗ್ಗೆ ದೂರು ದಾಖಲಿಸಿದ್ದರು ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಕೆಲವು ದಿನಗಳ ಹಿಂದೆಯಷ್ಟೆ ಪರೇಶ್ ಸಾವಿನ ಪ್ರಮುಖ ಆರೋಪಿ ಸಲಿಂ ಶೇಖ್ ಎಂಬುವನನ್ನು ಸಾಗರದಲ್ಲಿ ಬಂಧಿಸಿದ್ದರು. ಅದಕ್ಕೂ ಮುಂಚೆ ಅಣ್ಣಿಗೆರೆ ಎಂಬ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದರು. ಇಮ್ತಿಯಾಜ್ ಮತ್ತು ಪೈಜಲ್ ಅವರುಗಳು ತಲೆ ಮರೆಸಿಕೊಂಡಿದ್ದರು ಅವರನ್ನು ಶಿರಸಿಯ ಮನೆಯೊಂದರಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Honnavar Police arrested Imthiyaz Shekh and Fiyaz who were suspected in Paresh Mesta death case. few days early police arrested another suspect in Sagar. Paresh dead body was found on December 08th. BJP alleged that its communal murder.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ