ಶಿರಸಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರೇಶ್ ಸಾವು ಪ್ರಕರಣದ ಕಿಚ್ಚು, ಸಹಜ ಸ್ಥಿತಿಯತ್ತ ಶಿರಸಿ

|
Google Oneindia Kannada News

Recommended Video

ಪರೇಶ್ ಮೇಸ್ತಾ ಕೇಸ್ : ಧಗ ಧಗ ಹೊತ್ತಿ ಉರಿಯುತ್ತಿದೆ ಶಿರಸಿ | Oneindia Kannada

ಉತ್ತರ ಕನ್ನಡ, ಡಿಸೆಂಬರ್. 12 : ಪರೇಶ್ ಮೇಸ್ತ ಅನುಮಾನಾಸ್ಪದ ಸಾವಿನ ಪ್ರಕರಣ ಖಂಡಿಸಿ ಇಂದು (ಮಂಗಳವಾರ) ಬೆಳಗ್ಗಿನಿಂದ ಹೊತ್ತಿ ಉರಿದ ಶಿರಸಿ ಸಾಯಾಂಕಾಲ ವೇಳೆಗೆ ಸಹಜ ಸ್ಥಿತಿಯತ್ತ ತಿರುಗಿದೆ. ವಾಹನ ಸಂಚಾರ ಆರಂಭವಾಗಿದ್ದು, ಕೆಲ ಅಂಗಡಿಗಳ ಬಾಗಿಲು ತೆರೆದಿವೆ.

ಶಿರಸಿ ಧಗಧಗ, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸಶಿರಸಿ ಧಗಧಗ, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ

ಬಿಜೆಪಿ ಆಕ್ರೋಶ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಚ್, ಅಶ್ರುವಾಯು ಪ್ರಯೋಗಿಸಿದರು. ಗಲಭೆಯಲ್ಲಿ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೊರ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸರನ್ನು ಶಿರಸಿಗೆ ರವಾನಿಸಲಾಗಿದೆ.

Uttara Kannada, Sirsi bundh turns violent : Live Updates

* ಸುಳ್ಳು ವದಂತಿ ಹಬ್ಬಿಸಿದ್ದೇ ಇಷ್ಟಕ್ಕೆಲ್ಲಾ ಕಾರಣ- ಪಶ್ಚಿಮ ವಲಯದ ಐಜಿಪಿ ಹೇಮಂತ್ ನಿಂಬಾಳ್ಕರ್.

* ರಾಜಕೀಯ ಪಕ್ಷ ನೀಡಿದ್ದ ಪತ್ರಿಕಾ ಪ್ರಕಟಣೆಯೇ ಗಲಭೆಗೆ ಕಾರಣ-ಹೇಮಂತ್ ನಿಂಬಾಳ್ಕರ್.

*ಹೆಚ್ಚಿನ ಭದ್ರತೆಗಾಗಿ ಶಿರಸಿಗೆ ಪೊಲೀಸ್ ಪಡೆ ರವಾನೆ.

* ಎರಡು ಪಕ್ಷಗಳು ಸಣ್ಣ ಪುಟ್ಟ ಗಲಾಟೆಗಳನ್ನು ದೊಡ್ಡದು ಮಾಡಿ ಅಮಾಯಕರನ್ನು ಬಲಿ ಪಡೆದುಕೊಳ್ಳುತ್ತಿವೆ: ಕುಮಾರಸ್ವಾಮಿ ಆಕ್ರೋಶ
* ಶಿರಸಿಯ ಮಾರಿಗುಡಿ ಸರ್ಕಲ್ 70 ಜನ ಬಂಧನ
* ಶಿರಸಿಯ ದೇವಿಕೆರೆ ಬಳಿಯ ಅಂಗಡಿಗಳಿಗೆ ಉದ್ರಿಕ್ತರಿಂದ ಬೆಂಕಿ.

* ಶಿರಸಿಯ ಉಡುಪಿ ಕಲೆಕ್ಷನ್ ಬಟ್ಟೆ ಅಂಗಡಿಗೆ ಬೆಂಕಿ

* ಜಮೀಯಾ ಮಸೀದಿ ಬಳಿ ಪ್ರತಿಭಟನೆಕಾರರಿಂದ ಬೈಕ್ ಗೆ ಬೆಂಕಿ.
*ಪ್ರತಿಭಟನೆಕಾರರನ್ನು ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ್.

*ಪರೇಶ್ ಮೆಸ್ತಾನ ಸಾವಿನ ತನಿಖೆಯನ್ನು ಎನ್ಐಎ ತಂಡಕ್ಕೆ ವಹಿಸುವಂತೆ ಆಗ್ರಹಿಸಿ ಕರ್ನಾಟಕ ಬಿಜೆಪಿ ನಾಯಕರು ರಾಜ್ಯಪಾಲ ವಜುಭಾಯಿ ವಾಲ ಅವರಿಗೆ ಮನವಿ ಸಲ್ಲಿಸಲಿದ್ದಾರೆ.

*ಶಿರಸಿ ಬಂದ್ ಹಿನ್ನೆಲೆಯಲ್ಲಿ ಇಲ್ಲಿನ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ಜನ ಸಂಚಾರ ಸಂಪೂರ್ಣ ನಿಂತು ಹೋಗಿದೆ. ಆಸ್ಪತ್ರೆಗಳು ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.

English summary
Sirsi bundh called by the Hindu organizations on December 12, 2017 turned violent. Here are the live updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X