Travel Guide: ಬೆಂಗಳೂರಿನಿಂದ ಮುರುಡೇಶ್ವರ, ನೇತ್ರಾಣಿ ದ್ವೀಪ, ಹೊನ್ನಾವರಕ್ಕೆ 3 ದಿನ ಪ್ರವಾಸ ಪ್ಲ್ಯಾನ್...
ನೀವೇನಾದ್ರೂ ಈ ವೀಕೆಂಡ್ ಮೂರು ದಿನ ಮುರುಡೇಶ್ವರಕ್ಕೆ ಹೋಗಬೇಕು ಅಂದುಕೊಂಡಿದ್ದರೆ ನಿಮ್ಮ ಲಗೇಜ್ ಪ್ಯಾಕ್ ಮಾಡಿಕೊಳ್ಳಿ. ನಿಮ್ಮ ಕುಟುಂಬ, ಸಂಗಾತಿ ಅಥವಾ ಸ್ನೇಹಿತರೊಂದಿಗೆ ಹೊರಡಲು ಸಿದ್ಧರಾಗಿ. ಇಲ್ಲಿ ನೀವು ಬೀಚ್ ಅಲ್ಲಿ ಸಖತ್ ಎಂಜಾಯ್ ಮಾಡಬಹುದು. ಜೊತೆಗೆ ನಿಮ್ಮವರೊಂದಿಗೆ ಮರೆಯಲಾಗದ ಅದ್ಬುತ ಸಮಯವನ್ನು ಕಳೆಯಬಹುದು.
ಹಾಗೆ ಒಂದು ಬಾರಿ ಯೋಚನೆ ಮಾಡಿ. ಸುಡುವ ಸೂರ್ಯ ಮುಳುವ ಆ ಕ್ಷಣವನ್ನು ಬೀಚ್ ಬಳಿ ಕುಳಿತು ನೀವು ನಿಮ್ಮವರೊಂದಿಗೆ ಕಳೆಯುವುದರಲ್ಲಿ ಇರುವ ಆನಂದವನ್ನು ನೆನಪಿಸಿಕೊಳ್ಳಿ. ಬಿಸಿ ಗಾಳಿ ತಂಪಾಗುವ ಸಮಯದಲ್ಲಿ ಕೂಲ್ ಆಗಿ ಬೀಚ್ ಬಳಿ ಸುತ್ತಾಡುತ್ತಿದ್ದರೆ ಅದೆಷ್ಟು ಚಂದ ಅಲ್ವಾ..? ಹಾಗಾದರೆ ತಡ ಮಾಡುವುದು ಬೇಡ ಸ್ನೇಹಿತರೇ... ಬೆಂಗಳೂರಿನಿಂದ ಎಷ್ಟೊತ್ತಿಗೆ ಟ್ರೈನ್ ಇದೆ ಅಂತ ನೋಡಿ ಬಿಡೋಣ.

ಬೆಂಗಳೂರಿನಿಂದ ಮುರುಡೇಶ್ವರ ಪ್ರವಾಸ
ಮೊದಲಿಗೆ ಮುರುಡೇಶ್ವಕ್ಕೆ ಹೋಗಬೇಕು. ಮುರುಡೇಶ್ವಕ್ಕೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದಲೂ ರೈಲು ಹಾಗೂ ಬಸ್ ವ್ಯವಸ್ಥೆ ಇದೆ. ಬೆಂಗಳೂರಿಂದ ಮುರುಡೇಶ್ವರಕ್ಕೆ ಹೊರಡುವುದು ತುಂಬಾ ಸುಲಭ. ಬಸ್ ಮೂಲಕವೂ ನೀವು ಪ್ರಯಾಣ ಮಾಡಬಹುದು.
ಬೆಂಗಳೂರಿನಿಂದ ಇರುವ ರೈಲು ಸಂಪರ್ಕದ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ಶುಕ್ರವಾರ ಸಂಜೆ ಬೆಂಗಳೂರಿನಿಂದ ರೈಲು ಹೊರಡುತ್ತದೆ. ಶುಕ್ರವಾರ ಸಂಜೆ 6.50ಕ್ಕೆ ಬೆಂಗಳೂರಿನಿಂದ ಟ್ರೈನ್ ಹೊರಡುತ್ತದೆ. ಇದು ಶನಿವಾರ ಬೆಳಗ್ಗೆ 6.00ಕ್ಕೆ ಮುರುಡೇಶ್ವರಕ್ಕೆ ಬಂದು ತಲುಪುತ್ತೆ.

ಬೆಂಗಳೂರಿನಿಂದ ಮುರುಡೇಶ್ವರ ತಲುಪುವುದು ಹೇಗೆ?
ಶನಿವಾರ ಬೆಳಿಗ್ಗೆ ಮುರುಡೇಶ್ವರಕ್ಕೆ ಬಂದ ನಂತರ ಬೀಚ್‌ನಲ್ಲಿ ನೀವು ಕೆಲ ಗೊತ್ತು ಟೈಮ್ ಸ್ಪೆಂಡ್ ಮಾಡಬಹುದು. ನಂತರ ಹತ್ತಿರದ ರೂಪ್ ಬುಕ್ ಮಾಡಿಕೊಂಡು ನಿಮ್ಮ ಲಗೇಜ್ ಇಟ್ಟು ಫ್ರೆಶ್ ಅಪ್ ಆಗಿ ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಅಲ್ಲಿಂದ ನೀವು ನೇತ್ರಾಣಿ ದ್ವೀಪಕ್ಕೆ ಹೋಗಬಹುದು. ಅಲ್ಲಿ ಬೋಟಿಂಗ್ ಎಂಜಾಯ್ ಮಾಡಬಹುದು. ಸ್ಕೂಬಾ ಡೈವಿಂಗ್ ಕೂಡ ಮಾಡಬಹುದು. ಶನಿವಾರ ಸಂಜೆ ವಾಪಸ್ ರೂಮ್‌ಗೆ ಹೋಗಿ ಊಟ ಮುಗಿಸಿಕೊಂಡು ಬೀಜ್ ಬಳಿ ಸಣ್ಣ ವಾಕ್ ಮಾಡಿ. ಅದ್ರಲ್ಲಿರೋ ಮಜಾನೇ ಬೇರೆ.
ಭಾನುವಾರ ಮಸ್ತಿ
ಭಾನುವಾರ ಬೆಳಿಗ್ಗೆ ಬೇಗ ಎದ್ದು ಇಲ್ಲಿಂದ 26 ಕಿ.ಮೀ ದೂರದಲ್ಲಿರುವ ಹೊನ್ನಾವರಕ್ಕೆ ಹೋಗಿ. ಇದು ಕೂಡ ಮುರುಡೇಶ್ವರದಷ್ಟೇ ಅದ್ಬುತವಾದ ಅನುಭವವನ್ನು ನೀಡುತ್ತದೆ. ಮುರುಡೇಶ್ವರಲ್ಲಿ ರೆಂಟೆಂಡ್ ಬೈಕ್ ಸಿಗುತ್ತದೆ. ಅದರಿಂದಲೂ ನೀವು ಹೊನ್ನಾವರಕ್ಕೆ ಹೋಗಬಹುದು. ಇಲ್ಲವಾದಲ್ಲಿ ಮುರುಡೇಶ್ವರದಿಂದ ಹೊನ್ನಾವರಕ್ಕೆ ಟ್ರೈನ್ ಸೌಲಭ್ಯ ಕೂಡ ಇದೆ. ಕೇವಲ 50 ರೂಪಾಯಿಯಲ್ಲಿ ನೀವು ಮುರುಡೇಶ್ವರದಿಂದ ಹೊನ್ನಾವರಕ್ಕೆ ಹೋಗಬಹುದು.

ಇನ್ನೂ ಹೊನ್ನಾವರದಲ್ಲಿ ಏನೆಲ್ಲಾ ನೋಡಬಹುದು ಅನ್ನೋದಾದರೆ- ಹೊನ್ನಾವರ ಬ್ಯಾಕ್ ವಾಟರ್ ಬೋಟಿಂಗ್, ಇಕೋ ಬೀಚ್, ಮೋಸ್ಟ್ ರಿಲ್ಯಾಕ್ಸ್ ಪ್ಲೇಸ್ ಅಂದರೆ ಕಾಂಡ್ಲಾ ಮ್ಯಾಗ್ರೋ ಬೋರ್ಡ್‌ವಾಕ್, ಅಪ್ಸರಕೊಂಡ ವಾಟರ್‌ಫಾಲ್ಸ್ ಕೂಡ ಇಲ್ಲಿ ನೀವು ಕಣ್ತುಂಬಿಕೊಳ್ಳಬಹುದು.
ಮುರುಡೇಶ್ವರದಿಂದ ಬೆಂಗಳೂರಿಗೆ ತಲುಪುವ ರೈಲು
ಇವೆಲ್ಲವನ್ನು ಮುಗಿಸಿಕೊಂಡು ಮುರುಡೇಶ್ವರಕ್ಕೆ ಬಂದರೆ ಸಂಜೆ 7.32ಕ್ಕೆ ಟ್ರೈನ್ ಇದೆ. ಲಗೇಜ್ ಎತ್ಕೊಂಡು ಟ್ರೈನ್ ಹತ್ತಿದರೆ ಬೆಳಿಗ್ಗೆ 7.15ಕ್ಕೆ ನೀವು ಬೆಂಗಳೂರಿನಲ್ಲಿ ಇರುತ್ತೀರಾ. ಭಾನುವಾರ ಅರಾಮಾಗಿ ರೆಸ್ಟ್ ಮಾಡಿ ಸೋಮವಾರ ನಿಮ್ಮ ಕೆಲಸವನ್ನು ಫ್ರೆಶ್ ಆಗಿ ಆರಂಭಿಸಬಹುದು.












Click it and Unblock the Notifications