• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾರತಿಹದು ಬಾವುಟ ಪದ್ಯದಲ್ಲಿ ಬಿಜೆಪಿ ಬಾವುಟ ಇತ್ತಾ? ಬಿ.ಸಿ. ನಾಗೇಶ್ ಪ್ರಶ್ನೆ

|
Google Oneindia Kannada News

ಬೆಂಗಳೂರು, ಮೇ. 23: " ಕಾಂಗ್ರೆಸ್‌ನ ಸೋ ಕಾಲ್ಡ್ ಬುದ್ಧಿ ಜೀವಿಗಳು ಜಾತಿ ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಕುವೆಂಪು ಅವರ ರಾಮಾಯಣ ಸಂಸ್ಕೃತಿಯನ್ನು ಕಾಂಗ್ರೆಸ್ ನವರೇ ತೆಗೆದಿದ್ದಾರೆ. ಟಿಪ್ಪು ಸುಲ್ತಾನ್ ಕೊಡಗು, ಮೈಸೂರಿನಲ್ಲಿ ಮತಾಂತರ ಮಾಡ್ತಿದ್ದ ಎಂಬ ಸತ್ಯವನ್ನು ಬರೆಯಬೇಕಿತ್ತು! ಕಾಂಗ್ರೆಸ್ ನವರಂತೆ ನಾವು ಕೆಟ್ಟ ರಾಜಕೀಯ ಮಾಡುವುದಿಲ್ಲ"

ದ್ವಿತೀಯ ಪಿಯುಸಿ ಇತಿಹಾಸ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಕ್ರಾಂತಿಕಾರಿ ಚಳುವಳಿ, ರಾಜಗುರು, ಸುಖದೇವ್ ಸಿಂಗ್ ಅವರನ್ನು ನಾವು ಪಠ್ಯದಲ್ಲಿ ಸೇರಿಸಿದ್ದೇವೆ. ಮೊದಲು ಇವರನ್ನು ಕಾಂಗ್ರೆಸ್ ನವರು ಉಗ್ರರು ಎಂದು ಹೇಳುತ್ತಿದ್ದರು. ಈಗ ಅವರ ಪರವಾಗಿ ಮಾತನಾಡುತ್ತಿರುವುದು ಸಂತೋಷವಾಗಿದೆ. ಟಿಪ್ಪು ಸುಲ್ತಾನ ಬಗ್ಗೆ ಆರು ಪುಟ ಸೇರಿಸಿದ್ದರು. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಟಿಪ್ಪು ಕುರಿತ ಪಠ್ಯವನ್ನು ಕಾಂಗ್ರೆಸ್ ನವರು ಸೇರಿಸಿದ್ದರು. ಬ್ರಿಟೀಷರ ವಿರುದ್ಧ ಹೋರಾಟ ಕುರಿತು ಬರೆದರು. ಟಿಪ್ಪು ಸುಲ್ತಾನ್ ಬಗ್ಗೆ ನಿಜ ಬರೆಯಬೇಕಿತ್ತು. ಕೊಡಗು ಮೈಸೂರು ಭಾಗದಲ್ಲಿ ಹಿಂದೂಗಳನ್ನು ಬಲವಂತದ ಮತಾಂತರ ಮಾಡುತ್ತಿದ್ದ ಎಂಬ ಸತ್ಯವನ್ನು ಸೇರಿಸಬೇಕಿತ್ತು ಎಂದು ಬಿ.ಸಿ. ನಾಗೇಶ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಕುವೆಂಪು ಅವರಿಗೆ ಕಾಂಗ್ರೆಸ್ ಅವಮಾನ:

ಕುವೆಂಪು ಅವರಿಗೆ ಯಾರು ಅವಮಾನ ಮಾಡಿದ್ದಾರೆ. ಯಾರು ಪಠ್ಯ ತೆಗೆದಿದ್ದಾರೆ. ರಾಮಾಯಣ ಸಂಸ್ಕೃತಿ ಬಗ್ಗೆ ಹೇಳಿದ್ದನ್ನು ಕಾಂಗ್ರೆಸ್ ನವರೇ ತೆಗೆದಿದ್ದಾರೆ. ರಾಮ ಬೇಕಾ, ರಾವಣ ಬೇಕಾ ಎಂದು ಗಾಂಧಿಯೇ ಹೇಳಿದ್ದಾರೆ. ಪೆರಿಯಾರ್ ಕುರಿತ ಕೆಲವು ವಿಚಾರ ತೆಗೆಯಲಾಗಿದೆ. ಕಾಂಗ್ರೆಸ್ ನವರು ಆರನೇ ತರಗತಿ ಇತಿಹಾಸ ಪರಿಷ್ಕರಿಸಿದ ವಿಚಾರ ಮಾತನಾಡಬೇಕು ಎಂದು ನಾಗೇಶ್ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ವೈಫಲ್ಯಗಳನ್ನು ಪ್ರಸ್ತಾಪಿಸಿದರು.

ಕಾಂಗ್ರೆಸ್ ನವರು ಗಾಂಧಿ ಚಿಂತನೆಗಳನ್ನು ತೆಗೆದರು. ವಿವೇಕಾನಂದ ಪಠ್ಯಕ್ಕೆ ವಿಕೃತ ರೂಪ ಕೊಟ್ಟು ಪರಿಚಯ ಮಾಡಿದರು. ಬರಗೂರು ರಾಮಚಂದ್ರಪ್ಪರಂತೆ ನಾವು ಕೆಟ್ಟ ರಾಜಕೀಯ ನಾವು ಮಾಡುವುದಿಲ್ಲ 1ನೇ ತರಗತಿಯಲ್ಲಿ ಹಾರುತಿಹುದು ಬಾವುಟ , ಪದ್ಯ ತೆಗೆದರು. ಬಾವುಟ ಬಿಜೆಪಿಯದ್ದೇ ? ಎಂದು ನಾಗೇಶ್ ಪ್ರಶ್ನೆ ಮಾಡಿದ್ದಾರೆ.

History Text books revision row: BC Nagesh says that it is congress conspiracy

1ನೇ ತರಗತಿಯಲ್ಲಿ ಕಾಂಗ್ರೆಸ್ ನವರು ಒಂದು ಕತೆಯನ್ನೇ ತೆಗೆದರು. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪಠ್ಯ ತೆಗೆದರು. ಬೆಂಗಳೂರು‌ ಮಂದಿರ ಚರ್ಚ್ ಮಸೀದಿ ಎಂಬ ಪಾಠ ಇದೆ. ಚರ್ಚ್ , ಮಸೀದಿ ಫೋಟೋ ಇದೆ , ದೇವಾಲಯದ ಫೋಟೋ ಇಲ್ಲವೆ ಇಲ್ಲ. ಹರಿಪ್ರಸಾದ್ ಮಂಗಳೂರಿನಲ್ಲಿ ವಿಷ ಬೀಜ ಬಿತ್ತಿದ್ದರು. ಮಂಗಳೂರು ಜನಕ್ಕೆ ಸತ್ಯ ಗೊತ್ತಿದ್ದರಿಂದ ಏನೂ ಆಗಲಿಲ್ಲ. ಸಿಂಧೂ ಸಂಸ್ಕೃತಿ ತೆಗೆದರು, ನೆಹರು ಇಂದಿರಾಗೆ ಬರೆದ ಪತ್ರಗಳು ಅಂತ ಪಾಠ ಸೇರಿಸಿದರು (ಮಗಳಿಗೆ ನೆಹರು ಬರೆದ ಪತ್ರ) ಇವೆಲ್ಲವನ್ನು ಮಾಡಿದ್ದು ಕಾಂಗ್ರೆಸ್ ಪಕ್ಷದವರೇ. ಟಿಪ್ಪು ಸುಲ್ತಾನ್ ಪಠ್ಯ ತೆಗೆದಿಲ್ಲ. ಸತ್ಯವನ್ನು ಅಳವಡಿಸಿದ್ದೇವೆ ಎಂದು ಬಿ.ಸಿ. ನಾಗೇಶ್ ಟಿಪ್ಪು ಕುರಿತ ಪಠ್ಯ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡರು.

   Japan ಹುಡುಗನ ಜೋತೆ Modi ಸಂವಾದ | #Japan | Oneindia Kannada
   English summary
   2nd puc History Text book revision Row: Education Minister B.C. Nagesh says BJP not doing like congress dirty politics know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X