ದಲಿತರ ಅಭಿವೃದ್ಧಿಯನ್ನು ಬಿಜೆಪಿ ಮಾಡಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಯುಕ್ತ ಪಾಟೀಲ್
ಬಾಗಲಕೋಟೆ, ಏಪ್ರಿಲ್ 23: ದಲಿತರ ಜೀವನ ದುಸ್ಥಿತಿಯಲ್ಲಿ ಇದೆ. ಕೇಂದ್ರ ಬಿಜೆಪಿ ಸರ್ಕಾರ ದಲಿತರ ಮೇಲಿನ ದೌರ್ಜನ್ಯಕ್ಕೆ ಯಾವುದೇ ರೀತಿ ಸ್ಪಂದನೆ ತೋರುತ್ತಿಲ್ಲ, ಸಬ್ ಕಾ ಸಾಥ್ ಸಬಾ ಕಾ ವಿಕಾಸ್ ಎನ್ನುವ ಪ್ರಧಾನಿಗಳು ಬರೀ ಮಾತಿನ ಶೂರರಾಗಿದ್ದರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಂಯುಕ್ತ ಪಾಟೀಲ್ ವಾಗ್ದಾಳಿ ನಡೆಸಿದರು.
ಬಾಗಲಕೋಟೆಯ ಜಿಲ್ಲೆಯ ಗುಡೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಮುಳಿಯಪ್ಪಜ್ಜನ ಕಟ್ಟೆಯ ಹತ್ತಿರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಸಂಯುಕ್ತ ಪಾಟೀಲ್ ಮಾತನಾಡಿ, ದೇಶದ ಸಮಸ್ತ ಸಮುದಾಯಗಳ ಅಭಿವೃದ್ಧಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅವಶ್ಯಕ ಎಂದು ಸಂಯುಕ್ತ ಪಾಟೀಲ್ ಅವರು ಹೇಳಿದರು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಜನ ಈ ಬಾರಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಶಿರೂರು ತಾಂಡಾದ ಬಂಜಾರ ಮಠಕ್ಕೆ ಭೇಟಿ
ಬಾಗಲಕೋಟೆ ಲೋಕಸಭಾ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರು ಚುನಾವಣಾ ಪ್ರಚಾರದ ನಡೆವೆಯೇ ಇಲ್ಲಿನ ಶಿರೂರು ತಾಂಡಾದ ಬಂಜಾರ ಸಮುದಾಯದ ಶ್ರೀ ಕುಮಾರ ಮಹಾರಾಜ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಇದೇ ವೇಳೆ ಗ್ಯಾರಂಟಿ ಕಾರ್ಡ್‌ಗಳನ್ನು ಹಂಚಿ ಸಭೆ ನಡೆಸಿದರು.
ಅಭಿವೃದ್ಧಿವಂಚಿತ ಕ್ಷೇತ್ರದ ಬದಲಾವಣೆಗೆ ಮತನೀಡಿ
ಬಾಗಲಕೋಟೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಸಂಯುಕ್ತ ಪಾಟೀಲ್ ಅವರ ಚುನಾವಣ ಪ್ರಚಾರ ಕಾರ್ಯ ದಿನದಿಂದ ದಿನಕ್ಕೆ ವೇಗವನ್ನು ಪಡೆಯುತ್ತಾ ಇದೆ. ಭಾರಿ ಜನಸ್ತೋಮ ಪ್ರಚಾರ ಕಾರ್ಯಕ್ಕೆ ಸಾಥ್ ನೀಡಿದರು. ಬಾಗಲಕೋಟೆ ಅಭಿವೃದ್ಧಿಗೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮೆಲ್ಲರ ಮತ ನೀಡಿ, ಕಳೆದ 20 ವರ್ಷಗಳಿಂದ ಬಾಗಲಕೋಟೆ ಅಭಿವೃದ್ಧಿಯಿಂದ ವಂಚಿತವಾಗಿದೆ. ನಿಮ್ಮೆಲ್ಲರ ಕೈ ಅಲ್ಲಿ ಈ ಬಾರಿ ಬದಲಾವಣೆ ಮಾಡುವ ಅವಕಾಶವಿದೆ ಎಂದು ಹೇಳಿದರು.
ಬಾಗಲಕೋಟೆ ಲೋಕಸಭಾ ಕ್ಷೇತ್ರದ ಜಮಖಂಡಿ ಪಟ್ಟಣದಲ್ಲಿ ಮನೆ ಮನೆ ಮತ್ತು ಅಂಗಡಿಗಳಿಗೆ ತೆರಳಿ ಮತಯಾಚನೆ ಮಾಡಲಾಯಿತು. ಈ ಬಾರಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ದಳವಾಯಿ, ಫಾರೂಕ್, ಮುತ್ತಣ್ಣ ಹಿಪ್ಪರಗಿ, ಬ್ಲಾಕ್ ಅಧ್ಯಕ್ಷರಾದ ವರ್ಧಮಾನ ನ್ಯಾಮಗೌಡ, ಕಲ್ಲಣ್ಣ ಗಿರಡ್ಡಿ, ಪಕ್ಷದ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.












Click it and Unblock the Notifications