Get Updates
Get notified of breaking news, exclusive insights, and must-see stories!

ಕರಗ ಮಹೋತ್ಸವ: ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ- ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು, ಏಪ್ರಿಲ್ 23: ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವ ಇಂದು(ಮಂಗಳವಾರ) ನಡೆಯುತ್ತಿದ್ದು, ಧರ್ಮರಾಯಸ್ವಾಮಿ ಕರಗ ಉತ್ಸವ ಹಿನ್ನೆಲೆ ನಗರದ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಇಂದು ಮಧ್ಯರಾತ್ರಿ 2 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೂ ಕರಗ ಮಹೋತ್ಸವದ ಮೆರವಣಿಗೆ ಸಾಗಲಿದೆ.

ಮೆರವಣಿಗೆಯು ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊಂಡು ಕಬ್ಬನ್‌ಪೇಟೆ, ಗಾಣಿಗರಪೇಟೆ, ಅವೆನ್ಯೂರಸ್ತೆ ಮೂಲಕ ಕೆ.ಆರ್ ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇವಾಲಯಕ್ಕೆ ಬಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ಮೂಲಕ ರಾಣಾಸಿಂಗ್ ಪೇಟೆ, ಅಕ್ಕಿಪೇಟೆ, ಆರಳಿಪೇಟೆ, ಒಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ, ಬಳೇಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್.ಪಿ.ರಸ್ತೆ ಮೂಲಕ ಅಣ್ಣಮ್ಮ ದೇವಾಲಯಕ್ಕೆ ಬರುತ್ತದೆ. ಪುನಃ ಅದೇ ಮಾರ್ಗವಾಗಿ ಸಂಚರಿಸಿ, ಕಿಲ್ಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್, ಆರ್.ಟಿ.ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ, ಸುಣಕಲ್‌ಪೇಟೆ ಮೂಲಕ ಬುಧವಾರ ರಂದು ಬೆಳಗ್ಗೆ 6-00ಘಂಟೆಗೆ ಧರ್ಮರಾಯಸ್ವಾಮಿ ದೇವಾಲಯಕ್ಕೆ ಸೇರುತ್ತದೆ.

Karaga Festival Traffic Restrictions On Many Roads In Bangalore Here Are The Details

ಇಂದು ಮಧ್ಯರಾತ್ರಿ 2 ಗಂಟೆಗೆ ಕರಗ ಮಹೋತ್ಸವ ನಡೆಯಲಿದೆ. ಅದ್ಧೂರಿಯಾಗಿ ಕರಗ ಆಚರಣೆಗೆ ಕರಗ ಸಮಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಇಂದು ಬೆಳಗ್ಗೆಯಿಂದ ಕರಗದ ಶಾಸ್ತ್ರಗಳು ಆರಂಭವಾಗಿ ಮಧ್ಯರಾತ್ರಿವರೆಗೂ ನಡೆಯಲಿದ್ದು, ಶಾಸ್ತ್ರಗಳು ಮುಗಿದ ನಂತರ ಮಧ್ಯರಾತ್ರಿ 2 ಗಂಟೆಗೆ ಅಧಿಕೃತವಾಗಿ ಕರಗ ಶಕ್ತ್ಯೋತ್ಸವ ಆರಂಭವಾಗಲಿದೆ. ಕರಗ ಮಹೋತ್ಸವ ಮೆರವಣಿಗೆ ಸಾಗುವ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಿ ಸಂಚಾರ ಪೊಲೀಸರು ಆದೇಶ ಹೊರಡಿಸಿದ್ದಾರೆ. ಕರಗ ಮೆರವಣಿಗೆ ಯಾವೆಲ್ಲ ರಸ್ತೆಗಳಲ್ಲಿ ಸಾಗಲಿದೆ? ಯಾವೆಲ್ಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ ಎಂಬ ಮಾಹಿತಿ ಇಲ್ಲಿದೆ.

ಸಂಚಾರ ನಿರ್ಬಂಧಿಸಲಾದ ರಸ್ತೆಗಳು, :-

* ಸಿಟಿ ಮಾರುಕಟ್ಟೆ ವೃತ್ತದಿಂದ ಅವೆನ್ಯೂರಸ್ತೆಯ ಮೂಲಕ ಮೈಸೂರು ಬ್ಯಾಂಕ್ ವೃತ್ತದವರೆಗೆ ಎಲ್ಲ ಮಾದರಿಯ ವಾಹನ ಸಂಚಾರ ನಿಷೇಧಿಸಲಾಗಿದೆ.

* ಉತ್ಸವದ ಮೆರವಣಿಗೆ ಅವೆನ್ಯೂ ರಸ್ತೆ ಪ್ರವೇಶಿಸುತ್ತಿದ್ದಂತೆ, ಎ.ಎಸ್.ಚಾರ್ ರಸ್ತೆಯಿಂದ ಸಿಟಿ ಮಾರುಕಟ್ಟೆ ವೃತ್ತದ ಕಡೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

* ಎಸ್.ಜೆ.ಪಿ ರಸ್ತೆಯಿಂದ ಎನ್.ಆರ್ ವೃತ್ತದ ಕಡೆಗೆ ಹೊಗಲು ಪಿ.ಕೆ. ಲೇನ್ ಬಳಿ ಎಡ ತಿರುವು ಪಡೆಯುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

* ಉತ್ಸವದ ಮೆರವಣಿಗೆಯು ಅವೆನ್ಯೂ ರಸ್ತೆಯನ್ನು ಪ್ರವೇಶಿಸುತ್ತಿದಂತೆ ಮೆಡಿಕಲ್ ಕಾಲೇಜು ಕಡೆಯಿಂದ ಮಾರ್ಕೆಟ್ ವೃತ್ತದ ಕಡೆಗೆ ಬರುವ ವಾಹನಗಳ ಸಂಚಾರವನ್ನು ನಿರ್ಭಂದಿಸಿದೆ

ಕರಗ ಸಾಗುವ ಮಾರ್ಗ

* ನಗರ್ತಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಆರಂಭ.
* ಕಬ್ಬನ್​ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ ಮೂಲಕ ಸಂಚಾರ.
* ಕೆಆರ್ ರಸ್ತೆಯಲ್ಲಿರುವ ಕೋಟೆ ಆಂಜನೇಯ ದೇಗುಲಕ್ಕೆ ಆಗಮನ
* ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ರಸ್ತೆಯ ರಾಣಾಸಿಂಗ್​ಪೇಟೆ
* ಅಕ್ಕಿಪೇಟೆ, ಅರಳಿಪೇಟೆ, ಒಟಿಸಿ ರಸ್ತೆ, ಮಸ್ತಾನ್ ಸಾಹೇಬ್ ದರ್ಗಾ
* ಬಳೆಪೇಟೆ ಮುಖ್ಯ ರಸ್ತೆ, ಕೆ.ಜಿ.ರಸ್ತೆ, ಎಸ್​ಪಿ ರಸ್ತೆ ಮೂಲಕ ಸಾಗಿ ಅಣ್ಣಮ್ಮ ದೇಗುಲಕ್ಕೆ ಬಂದು ಅದೇ ಮಾರ್ಗದಲ್ಲಿ ವಾಪಸ್
* ಕಿಲ್ಲಾರಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಅವೆನ್ಯೂ ರಸ್ತೆ ಕ್ರಾಸ್
* ಆರ್.ಟಿ.ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರಪೇಟೆ
*ಸುಣಕಲ್ ಪೇಟೆ ಮೂಲಕ ಬೆಳಗ್ಗೆ 6 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯ ಸೇರಲಿರುವ ಕರಗ

ಪರ್ಯಾಯ ಮಾರ್ಗಗಳು

* ಎಸ್‌ಜೆಪಿ ರಸ್ತೆ-ಟೌನ್​ಹಾಲ್, ಕೆಂಪೇಗೌಡರಸ್ತೆ ಮಾರ್ಗವಾಗಿ ತೆರಳಬಹುದು.
* ಮೈಸೂರು ರಸ್ತೆಯ ಎ.ಎಸ್.ಚಾರ್ ರಸ್ತೆಯಲ್ಲಿ ಬಲ ರಾಯನ್ ವೃತ್ತದ ಮೂಲಕ ಸಂಚರಿಸಬಹುದು.
* ಚಾಮರಾಜಪೇಟೆ ಕಡೆಯಿಂದ ಬರುವ ವಾಹನಗಳು ಪ್ರೋ. ಶಿವಶಂಕರ ವೃತ್ತದ ಮೂಲಕ ದೆ.ಸಿ ರಸ್ತೆಯನ್ನು ಪ್ರವೇಶಿಸಿ ಟೌನ್ ಹಾಲ್ ಕಡೆಗೆ ಸಂಚರಿಸಬಹುದು.

ಪಾರ್ಕಿಂಗ್ ಸ್ಥಳಗಳು

ಕರಗ ಉತ್ಸವಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಬನ್ನಪ್ಪ ಪಾರ್ಕ್​​​ ಹಾಗೂ ಪುರಭವನ, ಬಿಬಿಎಂಪಿ ಮಾರ್ಕೆಟ್ ಕಾಂಪ್ಲೆಕ್ಸ್ ಇಲ್ಲಿ ವಾಹನ ನಿಲುಗಡೆ ಮಾಡಬಹುದಾಗಿರುತ್ತದೆ.

ಪಾರ್ಕಿಂಗ್ ನಿಷೇಧಿತ ಸ್ಥಳಗಳು

ಪಿ.ಕೆ ಲೈನ್, ಓ.ಟಿ.ಸಿ ರಸ್ತೆ, ಎಸ್‌ಪಿ ರಸ್ತೆ, ಕಬ್ಬನ್‌ಪೇಟೆ ರಸ್ತೆ, ಸುಣ್ಣಕಲ್ ಪೇಟೆ ರಸ್ತೆ, ಎಸ್.ಜೆ.ಪಿ. ಸಿಟಿ ಮಾರ್ಕೆಟ್ ಸರ್ಕಲ್, ಎಸ್.ಜೆ.ಪಿ ರಸ್ತೆ, ಅವೆನ್ಯೂ ರಸ್ತೆ, ಎ.ಎಸ್.ಚಾರ್ ಸ್ಟ್ರೀಟ್ ನಿಂದ ಮಾರ್ಕೆಟ್ ಸರ್ಕಲ್ ವರೆಗೆ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+