Snake Video: ವಿಮಾನದಲ್ಲಿ ಹಾವು ಬಿಟ್ಟ ವ್ಯಕ್ತಿ: ಬೆಂಗಳೂರಿನಲ್ಲಿ ಬಂಧನ- ಶಿವಪುರಿಯಲ್ಲಿ ಅಪರೂಪದ ಹಾವು ಪತ್ತೆ!

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಹಳದಿ ಹಾವುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಪ್ರಯಾಣಿಕರೊಬ್ಬರನ್ನು ಬಂಧಿಸಲಾಗಿದೆ. ಅವನ ಚೆಕ್-ಇನ್ ಬ್ಯಾಗ್‌ನಲ್ಲಿ ಸರೀಸೃಪಗಳನ್ನು ಮರೆಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಬೆಂಗಳೂರು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಬ್ಯಾಂಕಾಕ್‌ನಿಂದ ಆಗಮಿಸಿದ ಪ್ರಯಾಣಿಕನನ್ನು ತಡೆದು ಬಂಧಿಸಿದ್ದಾರೆ. "ವಿಮಾನದಲ್ಲಿ ಹಾವು ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ. ವನ್ಯಜೀವಿ ಕಳ್ಳಸಾಗಣೆಯನ್ನು ಸಹಿಸುವುದಿಲ್ಲ" ಎಂದು ಇಲಾಖೆ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ.

Snake Find in plane bengaluru Airport Rare snake found in Shivpuri Video goes viral

ಹಳದಿ ಹಾವುಗಳು ಜಲಮೂಲಗಳ ಸಮೀಪದಲ್ಲಿ ಕಂಡುಬರುವ ನದಿಯ ಜಾತಿಯ ಹಾವಾಗಿವೆ. ಹಳದಿ ಅನಕೊಂಡಗಳು ಸಾಮಾನ್ಯವಾಗಿ ಪರಾಗ್ವೆ, ಬೊಲಿವಿಯಾ, ಬ್ರೆಜಿಲ್, ಈಶಾನ್ಯ ಅರ್ಜೆಂಟೀನಾ ಮತ್ತು ಉತ್ತರ ಉರುಗ್ವೆಯಲ್ಲಿ ಕಂಡುಬರುತ್ತವೆ. ಕಾನೂನಿನ ಪ್ರಕಾರ, ಭಾರತದಲ್ಲಿ ವನ್ಯಜೀವಿ ವ್ಯಾಪಾರ ಮತ್ತು ಕಳ್ಳಸಾಗಣೆ ಕಾನೂನುಬಾಹಿರವಾಗಿದೆ.

ಕಳೆದ ವರ್ಷ, ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬ್ಯಾಂಕಾಕ್‌ನಿಂದ ಪ್ರಯಾಣಿಕರೊಬ್ಬರು ಕಳ್ಳಸಾಗಣೆ ಮಾಡಿದ ಮರಿ ಕಾಂಗರೂ ಸೇರಿದಂತೆ 234 ಕಾಡು ಪ್ರಾಣಿಗಳನ್ನು ರಕ್ಷಿಸಿದ್ದರು. ಪ್ಲಾಸ್ಟಿಕ್ ಬಾಕ್ಸ್ ನಲ್ಲಿದ್ದ ಯುವ ಕಾಂಗರೂ ಉಸಿರುಗಟ್ಟಿ ಸಾವನ್ನಪ್ಪಿತ್ತು. ಈ ಬಗ್ಗೆ ಕಸ್ಟಮ್ಸ್ ಇಲಾಖೆಗೆ ಸುಳಿವು ಸಿಕ್ಕಿದ್ದು, ವ್ಯಕ್ತಿಯ ಲಗೇಜ್‌ಗಳನ್ನು ಪರಿಶೀಲಿಸಿದಾಗ ಹೆಬ್ಬಾವು, ಊಸರವಳ್ಳಿ, ಆಮೆಗಳು ಮತ್ತು ಅಲಿಗೇಟರ್‌ಗಳು ಟ್ರಾಲಿ ಬ್ಯಾಗ್‌ಗಳಲ್ಲಿ ಬಚ್ಚಿಟ್ಟಿರುವುದು ಕಂಡುಬಂದಿದೆ. ಇನ್ನೂ ಶಿವಪುರಿಯಲ್ಲಿ ಅಪರೂಪದ ಹಸಿರು ಹಾವೊಂದು ಪತ್ತೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Snake Find in plane bengaluru Airport Rare snake found in Shivpuri Video goes viral

ಶಿವಪುರಿಯಲ್ಲಿ ಅಪರೂಪದ ಹಾವು ಪತ್ತೆ:

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಅಪರೂಪದ ಹಾವು ಕಾಣಿಸಿಕೊಂಡಿದೆ. ಹಾವನ್ನು ನೋಡಿದ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದು ತಕ್ಷಣ ಉರಗ ತಜ್ಞರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಸಲ್ಮಾನ್ ಪಠಾಣ್ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಈ ಹಾವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಮಾಹಿತಿಯ ಪ್ರಕಾರ ಶಿವಪುರಿ-ಗ್ವಾಲಿಯರ್ ಬೈಪಾಸ್‌ನಲ್ಲಿರುವ ದರ್ಪಣ್ ಕಾಲೋನಿಯಲ್ಲಿ ಹಸಿರು ಹಾವು ಕಂಡುಬಂದಿದ್ದು, ಇಲ್ಲಿ ಸಂಚಲನ ಮೂಡಿಸಿದೆ. ಈ ಹಾವಿನ ಜಾತಿಯು ವಿನಾಶದ ಅಂಚಿನಲ್ಲಿದೆ. ಪಠಾಣ್ ಪ್ರಕಾರ, ಈ ಹಾವು ಅರ್ಧ ವಿಷಕಾರಿಯಾಗಿದೆ. ಈ ಹಾವು ಸುಂದರವಾದ ಮೈಬಣ್ಣವನ್ನು ಹೊಂದಿದೆ. ಹಲವು ಬಣ್ಣದ ಹಾವುಗಳನ್ನು ನೋಡಿದ್ದೇ ಆದರೆ ಈ ರೀತಿಯ ಹಸಿರು ಬಣ್ಣದ ಹಾವು ಮೊದಲಬಾರಿಗೆ ನೋಡಿದ್ದೇವೆ ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ.

ಶಿವಪುರಿ ಜಿಲ್ಲೆಯ ನರ್ವಾರ್ ಪ್ರದೇಶದ ಉರಗ ಸ್ನೇಹಿತ ಸಲ್ಮಾನ್ ಪಠಾಣ್ ಈ ಹಿಂದೆ ಶಿವಪುರಿ ನರ್ವಾರ್ ಮತ್ತು ಕರೈರಾ ಸೇರಿದಂತೆ ಇತರ ಸ್ಥಳಗಳಲ್ಲಿ ಕಂಡುಬಂದ 200 ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ್ದಾರೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ಸಮ್ಮುಖದಲ್ಲಿ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+