ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಬ್ಯುಲೆನ್ಸ್‌ ಅಪಘಾತದಲ್ಲಿ ರೋಗಿ ಸಾವು, ಪರಿಹಾರ ನೀಡಲೇಬೇಕು; ಕೋರ್ಟ್

ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಅಂಬುಲೆನ್ಸ್‌ನಲ್ಲಿ ಸಾಗುತ್ತಿಸುವ ವೇಳೆ ಅಪಘಾತ ಸಂಭವಿಸಿ ರೋಗಿ ಮೃತಪಟ್ಟರೆ ವಿಮಾ ಕಂಪನಿ ಪರಿಹಾರ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ.

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಜನವರಿ 27; ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಅಂಬುಲೆನ್ಸ್‌ನಲ್ಲಿ ಸಾಗುತ್ತಿಸುವ ವೇಳೆ ಅಪಘಾತ ಸಂಭವಿಸಿದ ಪರಿಣಾಮ ಗಾಯಗಳಾಗಿ ರೋಗಿ ಮೃತಪಟ್ಟರೆ, ಅಂತಹ ಪ್ರಕರಣಗಳಲ್ಲಿ ವಿಮಾ ಕಂಪನಿ ಮೃತನ ಕಟುಂಬಸ್ಥರಿಗೆ ಪರಿಹಾರ ನೀಡಲೇಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ವಿಮಾ ಕಂಪನಿಯ ವಾದ ತಳ್ಳಿಹಾಕಿರುವ ಹೈಕೋರ್ಟ್, ಎಂಎಸಿಟಿ ಆದೇಶವನ್ನು ಊರ್ಜಿತಗೊಳಿಸಿದೆ. ಪ್ರಕರಣದಲ್ಲಿ ರೋಗಿಯ ಸಾವಿಗೂ ಅಪಘಾತಕ್ಕೂ ಯಾವುದೇ ಸಂಬಂಧವಿಲ್ಲ. ಕಾಯಿಲೆಯಿಂದಲೇ ರೋಗಿ ಸಾವನ್ನಪ್ಪಿದ್ದು, ಮೃತನ ಕುಟುಂಬಸ್ಥರಿಗೆ ಪರಿಹಾರ ನೀಡಲು ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧೀಕರಣ (ಎಂವಿಸಿಟಿ) ಹೊರಡಿಸಿರುವ ಆದೇಶ ರದ್ದುಪಡಿಸಬೇಕೆಂಬ ಮನವಿ ತಿರಸ್ಕರಿಸಿದೆ.

ಆಂಬುಲೆನ್ಸ್ ಇಲ್ಲದೇ ಬೈಕ್‌ನಲ್ಲಿ 3 ವರ್ಷದ ಮಗುವಿನ ಮೃತದೇಹ ಹೊತ್ತೊಯ್ದ ದಂಪತಿ! ಆಂಬುಲೆನ್ಸ್ ಇಲ್ಲದೇ ಬೈಕ್‌ನಲ್ಲಿ 3 ವರ್ಷದ ಮಗುವಿನ ಮೃತದೇಹ ಹೊತ್ತೊಯ್ದ ದಂಪತಿ!

ಆಸ್ಪತ್ರೆಗೆ ದಾಖಲಿಸಲು ಅಂಬ್ಯುಲೆನ್ಸ್ ಮೂಲಕ ಸಾಗುತ್ತಿದ್ದ ವೇಳೆ ಅಪಘಾತದ ಸಂಭವಿಸಿದ ಪರಿಣಾಮ ರೋಗಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅದರಿಂದಲೇ ಕಾಯಿಲೆ ಉಲ್ಬಣಿಸಿ ರೋಗಿ ಸಾವನ್ನಪ್ಪಿದ್ದಾನೆ. ಆದ್ದರಿಂದ ಮೃತನ ಕುಟುಂಬದವರಿಗೆ ಪರಿಹಾರ ನೀಡಬೇಕು ವಿಮಾ ಕಂಪನಿಗೆ ಹೈಕೋರ್ಟ್ ಆದೇಶಿಸಿದೆ.

ಒಡಿಶಾ: ಭೂಮಿ ಕಳೆದುಕೊಂಡ ಗ್ರಾಮಸ್ಥರಿಗೆ ಪರಿಹಾರ ಸಿಗುವವರೆಗೆ ಜಿಲ್ಲಾಧಿಕಾರಿಗೆ ಸಂಬಳವಿಲ್ಲ ಎಂದ ಹೈಕೋರ್ಟ್ ಒಡಿಶಾ: ಭೂಮಿ ಕಳೆದುಕೊಂಡ ಗ್ರಾಮಸ್ಥರಿಗೆ ಪರಿಹಾರ ಸಿಗುವವರೆಗೆ ಜಿಲ್ಲಾಧಿಕಾರಿಗೆ ಸಂಬಳವಿಲ್ಲ ಎಂದ ಹೈಕೋರ್ಟ್

high-court

ನ್ಯಾಯಮೂರ್ತಿ ಎ. ಆರ್. ಹೆಗ್ಡೆ, ಎಫ್‌ಎಸ್‌ಎಲ್ ವರದಿಯಲ್ಲಿ ರವಿಯ ಸಾವು ಜಾಂಡೀಸ್‌ನಿಂದ ಸಂಭವಿಸಿರುವುದಾಗಿ ಉಲ್ಲೇಖವಾಗಿದೆ. ಆದರೆ, ಜಾಂಡೀಸ್‌ನಿಂದ ಬಳಲುತ್ತಿದ್ದ ಆತನನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗುತ್ತಿತ್ತು. ಅಲ್ಲಿ ಚಿಕಿತ್ಸೆ ಕಲ್ಪಿಸಿದ್ದರೆ ಆತ ಗುಣಮುಖನಾಗಿ ಆಸ್ಪತ್ರೆಯಿಂದ ಹೊರಬರಬಹುದಾಗಿತ್ತು.

ಆಂಬ್ಯುಲೆನ್ಸ್‌ ಸುಗಮ ಸಂಚಾರಕ್ಕೆ ತುರ್ತು ಪ್ರತಿಕ್ರಿಯೆ ವಿಶೇಷ ವ್ಯವಸ್ಥೆ ಆಂಬ್ಯುಲೆನ್ಸ್‌ ಸುಗಮ ಸಂಚಾರಕ್ಕೆ ತುರ್ತು ಪ್ರತಿಕ್ರಿಯೆ ವಿಶೇಷ ವ್ಯವಸ್ಥೆ

ರೋಗಿಯನ್ನು ಕರೆದೊಯ್ಯುತ್ತಿರುವ ಬಗ್ಗೆ ತಿಳಿವಳಿಕೆಯಿದ್ದರೂ ಚಾಲಕ ಅಂಬ್ಯುಲೆನ್ಸ್ ಅನ್ನು ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಘಟನೆಯಲ್ಲಿ ಗಾಯಗಳಾಗಿದ್ದರಿಂದ ಕಾಯಿಲೆ ಉಲ್ಭಣಗೊಂಡು ರವಿ ಮೃತಪಟ್ಟಿದ್ದಾನೆ. ಹಾಗಾಗಿ, ಆತನ ಸಾವಿಗೂ ಮತ್ತು ಅಪಘಾತಕ್ಕೆ ಸಂಬಂಧವಿದೆ ಎಂದು ಆದೇಶಿಸಿದ್ದಾರೆ.

ನಂತರ ರವಿ ಮಾಸಿಕವಾಗಿ ದುಡಿಯುತ್ತಿದ್ದ ವೇತನದ ಅಂದಾಜು ಆಧರಿಸಿ ನ್ಯಾಯಾಧೀಕರಣ ಪ್ರಕಟಿಸಿದ್ದ 5.5 ಲಕ್ಷ ಪರಿಹಾರವನ್ನು 4.62 ಲಕ್ಷ ರು. ಇಳಿಕೆ ಮಾಡಿದ ಹೈಕೋರ್ಟ್, ಆ ಮೊತ್ತವನ್ನು ಎಂಟು ವಾರದಲ್ಲಿ ಮೃತನ ಕುಟುಂಬದವರಿಗೆ ಪಾವತಿಸುವಂತೆ ವಿಮಾ ಕಂಪನಿಗೆ ನಿರ್ದೇಶಿಸಿದೆ.

ವಿಮಾ ಕಂಪನಿ ಪರ ವಕೀಲರು, ನಿಮೋನಿಯಾ ಹಾಗೂ ಕ್ಷಯರೋಗದಿಂದ ರವಿ ಮೃತಪಟ್ಟಿದ್ದಾರೆ ಹೊರತು ಅಪಘಾತದಿಂದ ಅಲ್ಲ ಎಂಬುದಾಗಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಸ್ಪಷ್ಟಪಡಿಸಿದೆ. ಅದರಂತೆ ಯಾವ ಕಾಯಿಲೆಯಿಂದ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತೋ, ಅದರಿಂದಲೇ ರವಿ ಮೃತಪಟಿದ್ದಾರೆ. ಹೀಗಾಗಿ ಮೃತನ ಸಾವಿಗೂ ಅಪಘಾತಕ್ಕೂ ಸಂಬಂಧವಿಲ್ಲದ ಕಾರಣ ನ್ಯಾಯಾಧೀಕರಣದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ಚಿಕ್ಕಮಗಳೂರಿನ ಕಬ್ಬಿನಹಳ್ಳಿ ಗ್ರಾಮದ ನಿವಾಸಿ ರವಿ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು 2010ರ ಏ.13ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲು ಅಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು. ವೇಗವಾಗಿ ಸಂಚರಿಸುತ್ತಿದ್ದ ಅಂಬ್ಯುಲೆನ್ಸ್ ಮುಗುಚಿ ಬಿದ್ದಿತ್ತು. ಇದರಿಂದ ಒಳಗಿದ್ದ ರವಿ ತೀವ್ರವಾಗಿ ಗಾಯಗೊಂಡಿದ್ದ. ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.

ಪ್ರಕರಣಕ್ಕೆ ಸಂಬಂಧಿಸಿದ ಪರಿಹಾರ ಕ್ಲೇಮಿನ ನಡೆಸಿದ್ದ ಮಂಗಳೂರಿನ ಎಂಎಸಿಟಿ, ಮೃತನ ಕುಟುಂಬದವರಿಗೆ ವಾರ್ಷಿಕ ಶೇ.6ರಷ್ಟು ಬಡ್ಡಿದರದೊಂದಿಗೆ 5.50 ಲಕ್ಷ ರು. ಪರಿಹಾರ ಪಾವತಿಸುವಂತೆ 2014ರ ಮಾ.3ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

English summary
Ambulance accident. Insurance company must pay the compensation Karnataka high court ordered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X