Kalaburagi Rain: ಸೂರ್ಯನಗರಿ ಕಲಬುರಗಿಯಲ್ಲಿ ಭಾರೀ ಗಾಳಿ, ಆಲಿಕಲ್ಲು ಸಮೇತ ದಾರಾಕಾರ ಮಳೆ
ಕಲಬುರಗಿ ಏಪ್ರಿಲ್ 20: ಕಲಬುರಗಿಯಲ್ಲಿ ಕಳೆದ ಕೆಲ ಗಂಟೆಗಳಿಂದ ಭಾರೀ ಗಾಳಿ, ಆಲಿಕಲ್ಲು ಸಮೇತ ದಾರಾಕಾರ ಮಳೆಯಾಗುತ್ತಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ಹೀಗಾಗಿ ಜನ ಖುಷಿಯಲ್ಲಿ ತೇಲಾಡಿದ್ದಾರೆ.
ಸೂರ್ಯನಗರಿಯಲ್ಲಿ ಶನಿವಾರ ಮಧ್ಯಾಹ್ನ ಭಾರಿ ಅಬ್ಬರದೊಂದಿಗೆ ಆಲಿಕಲ್ಲು ಸಹಿತ ಜೋರಾದ ಮಳೆ ಸುರಿದ ಪರಿಣಾಮ ಹಲವಾರು ಕಡೆಗಳಲ್ಲಿ ಮರಗಳು ನೆಲಕ್ಕುರುಳಿವೆ. ವಾಹನಗಳು ಜಖಂಗೊಂಡಿವೆ. ನಗರದ ಬಹುತೇಕ ಕಡೆ ಮಳೆಯಾಗುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ಗುಲ್ಬಾರ್ಗಾದಲ್ಲಿ ಭಾರೀ ಗಾಳಿ, ಆಲಿಕಲ್ಲು ಸಮೇತ ದಾರಾಕಾರ ಮಳೆ ಗುಲ್ಬರ್ಗದಲ್ಲಿ ಕಳೆದ ಕೆಲ ಗಂಟೆಗಳಿಂದ ತೀವ್ರ ಗಾಳಿಯೊಂದಿಗೆ ಅಧಿಕ ಮಳೆಯಾಗುತ್ತಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.#Kalaburagi #HeavyRain #Rainfall #RainUpdate #KarnatakaRains pic.twitter.com/WCsVvgaG3d
— oneindiakannada (@OneindiaKannada) April 20, 2024
ಗುಲ್ಬರ್ಗದಲ್ಲಿ ಬೆಳಗಿನಿಂದಲೇ ತುಂಬಾ ಧಗೆ ಮತ್ತು ಬೇಗುದಿ ವಾತಾವರಣವಿತ್ತು. ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಗುಡುಗು-ಮಿಂಚು ಸಹಿತ ಸಿಡಿಲ ಆರ್ಭಟದೊಂದಿಗೆ ಸಣ್ಣಗೆ ಶುರುವಾದ ಮಳೆ ಸ್ವಲ್ಪ ಸಮಯದ ಬಳಿಕ ಜೋರಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಬಿರುಗಾಳಿಯೊಂದಿಗೆ ಮಳೆ ಮುಂದುವರೆದಿದೆ.

ಈ ಸಂದರ್ಭದಲ್ಲಿ ಜಲ್ಲಿ ಕಲ್ಲಿನ ಗಾತ್ರದಷ್ಟು ಆಲಿಕಲ್ಲುಗಳು (ಗಾರ್) ಬೀಳುತ್ತಿವೆ. ಒಮ್ಮೆಲೆ ಆಲಿಕಲ್ಲು ಬೀಳುವುದು ಶುರುವಾಗಿದ್ದರಿಂದ ಕಾರ್ ಇನ್ನಿತರ ವಾಹನಗಳ ಚಾಲಕರು ಕೊಂಚು ಹೊತ್ತು ಗಲಿಬಿಲಿಗೊಂಡರು. ಇನ್ನೂ ಗಾಳಿಯೊಂದಿಗೆ ಮಳೆಯಾಗುತ್ತಿರುವುದರಿಂದ ಎಲ್ಲೆಡೆ ಗೋಚರತೆ ಕಡಿಮೆಯಾಗಿದೆ. ಮನೆಯಿಂದ ಹೊರಗಿದ್ದ ಜನ ಹಾಗೂ ವಾಹನ ಸವಾರರು ಮರ, ಗಿಡ ಸೇರಿದಂತೆ ಇನ್ನಿತರ ಅಂಗಡಿ ಮನೆಗಳ ಆಶ್ರಯ ಪಡೆದು ನಿಂತಿರುವ ದೃಶ್ಯಗಳು ಎಲ್ಲೆಡೆ ಕಂಡು ಬಂದಿವೆ.












Click it and Unblock the Notifications