ಬೆಂಗಳೂರಲ್ಲಿ ಶವ ಸಂಸ್ಕಾರದ ಹೆಸರಿನಲ್ಲೂ ಗೋಲ್‌ಮಾಲ್: ಸೈಬರ್ ಕ್ರೈಂ ಪೊಲೀಸ್ ಎಂಟ್ರಿ, ಏನಿದು ಪ್ರಕರಣ

ಬೆಂಗಳೂರು ಮಹಾನಗರದಲ್ಲಿ ಒಂದಿಲ್ಲೊಂದು ಸ್ಕ್ಯಾಮ್‌ಗಳು ಹಾಗೂ ವಂಚನೆಗಳು ಸದ್ದು ಮಾಡುತ್ತಲ್ಲೇ ಇರುತ್ತವೆ. ಇದೀಗ ಬೆಂಗಳೂರಿನಲ್ಲಿ ಬೆಂಗಳೂರಲ್ಲಿ ಶವ ಸಂಸ್ಕಾರದ ಹೆಸರಿನಲ್ಲೂ ಗೋಲ್‌ಮಾಲ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ವಿಷಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಎಚ್ಚೆತ್ತುಕೊಂಡಿದ್ದು, ಸೈಬರ್ ಕ್ರೈಂ ಪೊಲೀಸರ ಸಹಕಾರ ಕೋರಿದೆ. ಇಷ್ಟಕ್ಕೂ ಏನಿದು ಶವ ಸಂಸ್ಕಾರ ಸ್ಲಾಟ್ ಬುಕ್ಕಿಂಗ್ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಅನಧಿಕೃತ ಜಾಲತಾಣಗಳ (ವೆಬ್‌ಸೈಟ್‌ಗಳ) ಮೂಲಕ ಶವಸಂಸ್ಕಾರ ಸ್ಲಾಟ್ ಬುಕ್ಕಿಂಗ್ ಹೆಸರಿನಲ್ಲಿ ವಂಚನೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸುಗಮ ಹಾಗೂ ಪಾರದರ್ಶಕ ಸೇವೆ ಒದಗಿಸುವ ಉದ್ದೇಶದಿಂದ ಎರಡು ವಿದ್ಯುತ್ ಚಿತಾಗಾರಗಳನ್ನು ನಿರ್ವಹಿಸಲಾಗುತ್ತಿದೆ. ಇತ್ತೀಚೆಗೆ ಕೆಲವು ಅನಧಿಕೃತ ಜಾಲತಾಣಗಳು ಹಾಗೂ ಮಧ್ಯವರ್ತಿಗಳು ವಿದ್ಯುತ್ ಚಿತಾಗಾರಗಳಲ್ಲಿ ಶವ ಸಂಸ್ಕಾರಕ್ಕಾಗಿ ಸ್ಲಾಟ್ ಕಾಯ್ದಿರಿಸುವ ಹೆಸರಿನಲ್ಲಿ ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದು ಬೆಂಗಳೂರು ಉತ್ತರ ನಗರ ಪಾಲಿಕೆಯ ಗಮನಕ್ಕೆ ಬಂದಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

bbmp

ವಿದ್ಯುತ್ ಚಿತಾಗಾರಗಳ ವಿವರ:

1. ಚಿರಶಾಂತಿಧಾಮ ವಿದ್ಯುತ್ ಚಿತಾಗಾರ, ಹೆಬ್ಬಾಳ ಕೆಂಪಾಪುರ

GPS: 13.048766 / 77.593200

2. ಮುಕ್ತಿಧಾಮ ವಿದ್ಯುತ್ ಚಿತಾಗಾರ, ಮೇಡಿ ಅಗ್ರಹಾರ

GPS: 13.103404 / 77.534439

ಬೆಂಗಳೂರಿನ ವಿದ್ಯುತ್ ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ ಹೊಸ ರೂಲ್ಸ್‌; ಆನ್‌ಲೈನ್ ನೋಂದಣಿ ಕಡ್ಡಾಯ, ಶುಲ್ಕ ಎಷ್ಟು?
ಬೆಂಗಳೂರಿನ ವಿದ್ಯುತ್ ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ ಹೊಸ ರೂಲ್ಸ್‌; ಆನ್‌ಲೈನ್ ನೋಂದಣಿ ಕಡ್ಡಾಯ, ಶುಲ್ಕ ಎಷ್ಟು?

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ವಿದ್ಯುತ್ ಚಿತಾಗಾರಗಳಲ್ಲಿ ಶವ ಸಂಸ್ಕಾರಕ್ಕಾಗಿ ಅಧಿಕೃತವಾಗಿ 250 ರೂಪಾಯಿ ಶುಲ್ಕವನ್ನು ಮಾತ್ರ ನಿಗದಿಪಡಿಸಿದೆ. ಆದರೆ ಕೆಲವು ಅನಧಿಕೃತ ಜಾಲತಾಣಗಳು ಹಾಗೂ ವ್ಯಕ್ತಿಗಳು ಸಾರ್ವಜನಿಕರನ್ನು ದಾರಿ ತಪ್ಪಿಸಿ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿರುವುದು ಪತ್ತೆಯಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಅನಧಿಕೃತ ಜಾಲತಾಣಗಳು ಹಾಗೂ ವಂಚನೆ ಚಟುವಟಿಕೆಗಳನ್ನು ಗುರುತಿಸಿ, ಅವುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದಡಿ ಅನಧಿಕೃತವಾಗಿ ಶವ ಸಂಸ್ಕಾರ ಸ್ಲಾಟ್ ಬುಕ್ಕಿಂಗ್ ಸೇವೆ ನೀಡುತ್ತಿರುವ ಜಾಲತಾಣಗಳು, ಮಧ್ಯವರ್ತಿಗಳು ಹಾಗೂ ಸಾರ್ವಜನಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ತನಿಖೆ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಯಾವುದೇ ಅನಧಿಕೃತ ಜಾಲತಾಣಗಳು, ಏಜೆಂಟ್‌ಗಳು ಅಥವಾ ಮಧ್ಯವರ್ತಿಗಳನ್ನು ಸಂಪರ್ಕಿಸದೇ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ಜಾಲತಾಣಗಳ ಮೂಲಕ ಮಾತ್ರ ಶವ ಸಂಸ್ಕಾರದ ಸ್ಲಾಟ್‌ಗಳನ್ನು ಕಾಯ್ದಿರಿಸಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಬೆಂಗಳೂರು: ಕಳಪೆ ರಸ್ತೆ ಕಾಮಗಾರಿಗೆ ಬ್ರೇಕ್: GBA ಎಂಜಿನಿಯರ್ ಸಸ್ಪೆಂಡ್ ಮಾಡಿದ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಕಳಪೆ ರಸ್ತೆ ಕಾಮಗಾರಿಗೆ ಬ್ರೇಕ್: GBA ಎಂಜಿನಿಯರ್ ಸಸ್ಪೆಂಡ್ ಮಾಡಿದ ಸಚಿವ ಕೃಷ್ಣ ಬೈರೇಗೌಡ

ಅಧಿಕೃತ ಜಾಲತಾಣಗಳ ವಿವರ ಇಲ್ಲಿದೆ.

https://apps.bbmpgov.in/crematorium/forms/onlinebookingfrm.aspx

https://site.bbmp.gov.in/onlinecrematoriumprocessflow.html

ಮುಂದುವರಿದು ಸಾರ್ವಜನಿಕರು ವಂಚನೆಗೆ ಒಳಗಾಗದಂತೆ ಎಚ್ಚರಿಕೆ ವಹಿಸಿ, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ನಗರ ಪಾಲಿಕೆ ಅಥವಾ ಸೈಬರ್ ಕ್ರೈಂ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕೆಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಜಾಗೃತಿ ವಿಡಿಯೋ ವೈರಲ್

ಬೆಂಗಳೂರಲ್ಲಿ ಶವ ಸಂಸ್ಕಾರದ ಹೆಸರಿನಲ್ಲೂ ಗೋಲ್‌ಮಾಲ್ ನಡೆಯುತ್ತಿರುವ ಬಗ್ಗೆ ಹಾಗೂ ಜಾಗೃತಿ ಮೂಡಿಸುವುದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗಿತ್ತು. ತಂದೆಯನ್ನು ಕಳೆದುಕೊಂಡ ಮಗಳು ದುಃಖದಲ್ಲಿರುತ್ತಾರೆ. ಮುಂದಿನ ಕಾರ್ಯದ ಬಗ್ಗೆ ಚಿಂತಿತಳಾಗಿ ಇರುವಾಗ ತಕ್ಷಣವೇ ಒಂದು ಮೆಸೇಜ್ ಬರುತ್ತದೆ. ನಾವು ಅಂತ್ಯ ಸಂಸ್ಕಾರ ಮಾಡಲು ಸಹಾಯ ಮಾಡುತ್ತೇವೆ ಎನ್ನುವ ವಿವರ ಅದರಲ್ಲಿ ಇರುತ್ತದೆ. ಫೋನ್ ಮಾಡಿ ಮಾತನಾಡಿ, 4 ಸಾವಿರ ರೂ. ಪಾವತಿ ಮಾಡಬೇಕು ಎಂದು ಅಪರಿಚತರು ಹೇಳುತ್ತಾರೆ. ಸರಿ ಎಂದು ಹಣ ಪಾವತಿ ಮಾಡಲು ಹೋದರೆ ಠಣ್ ಠಣ್ ಅಂತ ಸುಮಾರು ಲಕ್ಷಕ್ಕಿಂತಲೂ ಹೆಚ್ಚು ಹಣ ಅವಳ ಬ್ಯಾಂಕ್ ಅಕೌಂಟಿನಿಂದ ಕಟ್ ಆಗುತ್ತೆ. ಗೊತ್ತಿಲ್ಲದ ಲಿಂಕ್ ಕ್ಲಿಕ್ ಮಾಡಬೇಡಿ ಅಂತ ಜಾಗೃತಿ ಮೂಡಿಸುವ ವಿಡಿಯೋ ಇದಾಗಿತ್ತು. ಇದೀಗ ಕೊನೆಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಈ ವಿಚಾರದಲ್ಲಿ ಎಚ್ಚೆತ್ತುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+