Bengaluru Rain: ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರೀ ಮಳೆ.. ಮನೆಯಿಂದ ಹೊರಬಂದು ಕುಣಿದು ಕುಪ್ಪಳಿಸಿದ ಮಕ್ಕಳು

Bengaluru Rain: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯ ಸ್ವಲ್ಪ ಪ್ರಮಾಣದಲ್ಲಾದರೂ ತಂಪೆರೆಯುತ್ತಾ ಬಂದಿದ್ದಾನೆ. ಆದರೆ ಮೊನ್ನೆಯಿಂದ ಬೆಂಗಳೂರಿಗೂ ಸಹ ಎಂಟ್ರಿ ಕೊಟ್ಟಿದ್ದಾನೆ. ಇದೀಗ ಇಂದು (ಏಪ್ರಿಲ್‌ 20) ಸುಮಾರು ಮಧ್ಯಾಹ್ನ 3 ಗಂಟೆ ವೇಳೆಗೆ ನಗರದ ಹಲವರಡೆ ಗುಡುಗು ಸಹಿತ ಭಾರೀ ಮಳೆ ಆರಂಭವಾಗಿದೆ. ಹಾಗಾದರೆ ಎಲ್ಲೆಲ್ಲಿ ತಿಳಿಯಿರಿ.

ಬೆಂಗಳೂರು ನಗರದ ವೈಟ್‌ಫೀಲ್ಡ್, ವರ್ತೂರು, ಸರ್ಜಾಪುರ ರಸ್ತೆ, ಮಾರತ್ತಹಳ್ಳಿ ಹಾಗೂ ಸುತ್ತಮುತ್ತ, ವೈಟ್‌ಫೀಲ್ಡ್, ಮಾರತ್ತಹಳ್ಳಿ, ಬೆಳ್ಳಂದೂರು, ಬೊಮ್ಮನಹಳ್ಳಿಯಲ್ಲಿ ತುಂತುರು ಮಳೆಯಾಗಿದೆ.

Bengaluru Rain Heavy rain in many parts on April 20

ಅಷ್ಟೇ ಅಲ್ಲದೆ ಬಿಟಿಎಂ ಲೇಔಟ್, ಜಯನಗರ, ಕೋರಮಂಗಲ, ಜಯನಗರ, ಜೆ.ಪಿ.ನಗರ, ಎಚ್‌ಎಸ್‌ಆರ್ ಲೇಔಟ್, ಬನಶಂಕರಿ, ಉತ್ತರಹಳ್ಳಿ, ರಾಜರಾಜೇಶ್ವರಿ ನಗರದಲ್ಲಿ ತುಂತುರು ಮಳೆಯಾಗುತ್ತಿದೆ. ಇನ್ನು ಇಂದು ಬೆಂಗಳೂರಿನಲ್ಲಿ ಮಳೆಯಾಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಬೆಂಗಳೂರಿಲ್ಲಿ ಮಳೆಯಾಗಿರುವ ಬಗ್ಗೆ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಇಲ್ಲೊಬ್ಬರು ಬೆಂಗಳೂರಿನಲ್ಲಿ ಅಂತಿಮವಾಗಿ ಮಳೆ ಬಂದಿದೆ ಎಂದು ಬರೆದುಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಇದೀಗ ಮೋಡ ಕವಿದ ವಾತಾವರಣ ಇದ್ದು, ರಾತ್ರಿ ವೇಳೆಗೆ ನಗರದ ಹಲವೆಡೆ ಗುಡುಗು ಸಹಿತ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ. ಕಳೆದ ಮೂರು ದಿನಗಳಿಂದ ಒಂದೊಂದು ದಿನ ಒಂದೊಂದು ಕಡೆ ಮಳೆಯಾಗಿದೆ. ಹಾಗೆಯೇ ಇಂದು ನಗರದ ಅರ್ಧ ಭಾಗವನ್ನು ಆವರಿಸಿದ್ದು, ಮುಂದಿನ ದಿನಗಳಲ್ಲಿ ನಗಡೆಲ್ಲೆಡೆ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.

ಬಿಸಿಲಿನ ಬೇಗೆಗೆ ನಗರದ ಜನರು ಮನೆಯಿಂದ ಹೊರಗಡೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಮಳೆರಾಯ ಕೊನೆಗೂ ಕರುಣೆ ತೋರಿದ್ದು, ಈ ಮೂಲಕ ಸೂರ್ಯನ ಶಾಖಕ್ಕೆ ಕಾದಿದ್ದ ನೆಲವನ್ನು ತಂಪುಗೊಳಿಸುತ್ತಿದ್ದಾನೆ. ಒಂದು ವಾರದ ಹಿಂದೆಯೇ ಹವಾಮಾನ ಇಲಾಖೆ ಏಪ್ರಿಲ್‌ 18ರ ಬಳಿಕ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹೇಳಿದ್ದು, ಈ ಭವಿಷ್ಯ ಇದೀಗ ನಿಜವಾಗುತ್ತಾ ಬರುತ್ತಿದೆ. ಒಟ್ಟಿನಲ್ಲಿ ನಗರದಲ್ಲಿ ನೀರಿನ ಕೊರತೆ ಮರೆಯಾಗಬೇಕೆನ್ನುವುದೇ ನಮ್ಮ ಉದ್ದೇಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+